
ಬೆಂಗಳೂರು, ಮಾರ್ಚ್ 08: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ (ಉಪ ಚುನಾವಣೆ) ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರು ನೇಮಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (ಡಿಕೆ ಶಿವಕುಮಾರ್)ಎರಡೂ ಕ್ಷೇತ್ರಕ್ಕೆ 16-16 ನಾಯಕರನ್ನೊಳಗೊಂಡ ಉಸ್ತುವಾರಿ ಸಮಿತಿ ರಚನೆಯಾಗಿದೆ. ಬಾಗಲಕೋಟೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತ್ ಕುಮಾರ್ ಮತ್ತು ದಾವಣಗೆರೆ ಕಾಳಾಧ್ಯಕ್ಷ ಮಂಜುನಾಥ್ ಭಂಡಾರಿ ಸಂಚಾಲಕರಾಗಿದ್ದಾರೆ.
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಮತ್ತು ಮತ್ತೋರ್ವ ಮಾಜಿ ಸಚಿವ ವಿಎಸ್ ಮೇಟಿ ನಿಧನದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಕೂಡ ತೆರವಾಗಿತ್ತು. ಈ ಎರಡೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಹಿನ್ನಲೆಯಲ್ಲಿ ಇದೀಗ ಚುನಾವಣಾ ಸಿದ್ಧತೆಗಳನ್ನು ನಡೆಸಲು ಚುನಾವಣಾ ಆಯೋಗದ ಉಸ್ತುವಾರಿ ಸಮಿತಿಯನ್ನು ನೇಮಿಸಲಾಗಿದೆ.
ದಾವಣಗೆರೆ ಉಪ ಚುನಾವಣಾ ಉಸ್ತುವಾರಿ ಸಮಿತಿ ಸದಸ್ಯರು
- ಮಂಜುನಾಥ್ ಭಂಡಾರಿ, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕ
- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ
- ಸಚಿವ ಕೆ.ಎಚ್. ಮುನಿಯಪ್ಪ
- ಸಚಿವ ಜಮೀರ್ ಅಹಮದ್ ಖಾನ್
- ಸಚಿವ ಈಶ್ವರ್ ಖಂಡ್ರೆ
- ಸಚಿವ ಕೃಷ್ಣ ಬೈರೇಗೌಡ
- ಸಚಿವ ಶರಣಪ್ರಕಾಶ್ ಪಾಟೀಲ್
- ಸಚಿವ ಪ್ರಿಯಾಂಕ್ ಖರ್ಗೆ
- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
- ಸಚಿವ ಸಂತೋಷ್ ಲಾಡ್
- ಸಚಿವ ಮಧು ಬಂಗಾರಪ್ಪ
- ಸಲೀಂ ಅಹಮದ್, ಮುಖ್ಯ ಸಚೇತಕರು, ವಿಧಾನ ಪರಿಷತ್ತು
- ತನ್ವೀರ್ ಸೇಠ್, ಶಾಸಕರು/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ, ಮಾಜಿ ಸಚಿವ
- ಮಾಜಿ ಎಂಎಲ್ಸಿ ವಿ.ಆರ್. ಸುದರ್ಶನ್
- ಮಾಜಿ ಸಚಿವ ಎಚ್.ಎಂ. ರೇವಣ್ಣ
- ಮಾಜಿ ಸಚಿವ ಎಚ್. ಆಂಜನೇಯ
ಬಾಗಲಕೋಟೆ ಉಪ ಚುನಾವಣೆ ಉಸ್ತುವಾರಿ ಸಮಿತಿ ಸದಸ್ಯರು
- ವಸಂತ ಕುಮಾರ್, ಎಂ.ಎಲ್.ಸಿ/ಡಬ್ಲ್ಯೂ.ಪಿ, ಕೆ.ಪಿ.ಸಿ.ಸಿ – ಸಂಚಾಲಕರು
- ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ
- ಸಚಿವ ಸತೀಶ್ ಜಾರಕಿಹೊಳಿ
- ಸಚಿವ ಎಂ ಬಿ ಪಾಟೀಲ್
- ಸಚಿವ ಶಿವಾನಂದ ಪಾಟೀಲ್
- ಸಚಿವ ಶಿವರಾಜ್ ತಂಗಡಗಿ
- ಸಚಿವ ಶರಣಬಸಪ್ಪ ದರ್ಶನಾಪುರ
- ಸಚಿವ ಬೈರತಿ ಸುರೇಶ್
- ಸಚಿವ ರಹೀಮ್ ಖಾನ್
- ಶಾಸಕ ಸಿ.ಎಸ್. ನಾಡಗೌಡ
- ಮಾಜಿ ಸಚಿವ ರಾಜಶೇಖರ್ ಪಾಟೀಲ್
- ಶಾಸಕ ವಿಜಯಾನಂದ ಕಾಶಪ್ಪನವರ್
- ಎಂಎಲ್ಸಿ ಎಫ್.ಎಚ್. ಜಕ್ಕಪ್ಪನವರ್
- ಎಂಎಲ್ಸಿ ಬಸನಗೌಡ ಬಾದರ್ಲಿ
- ಮಾಜಿ ಎಂಎಲ್ಸಿ ಸೋಮಣ್ಣ ಬೇವಿನಮರದ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.