ಶಾಸಕ ಪೊನ್ನಣ್ಣ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು, ನವೆಂಬರ್ 29: ಕಾಂಗ್ರೆಸ್ ಬಣದಾಟಕ್ಕೆ ಬ್ರೇಕ್ ಫಾಸ್ಟ್ ಮೂಲಕ ಬ್ರೇಕ್ ಬಿದ್ದಿದೆ. ಸಿಎಂ ಸಿದ್ದರಾಮಯ್ಯ (ಸಿದ್ದರಾಮಯ್ಯ) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (ಡಿಕೆ ಶಿವಕುಮಾರ್) ಜೊತೆ ಜೊತೆಯಾಗಿ ಉಪಾಹಾರ ಸೇವಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇಂದು ಬೆಳಗ್ಗೆಯೇ ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ಆಗಮಿಸಿದ ಡಿಕೆ ಶಿವಕುಮಾರ್, ಸಿಎಂ ಜೊತೆ ಉಪಾಹಾರಕ್ಕೆ ಜೊತೆಯಾದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಿನ ಸಂಪೂರ್ಣ ಪಕ್ಷ ಸಂಘಟನೆ, 2028ರ ಚುನಾವಣೆ ಅಂತಾ ಹೇಳುತ್ತಾ ಒಗ್ಗಟ್ಟನ್ನು ಪ್ರದರ್ಶಿಸಿದರು. ಆದರೆ ಈ ಬ್ರೇಕ್ಫಾಸ್ಟ್, ಒಗ್ಗಟ್ಟಿನ ಜಪ ಎಲ್ಲವೂ ದಿಢೀರ್ ಆಗಿದ್ದಲ್ಲ. ಈ ಕುರ್ಚಿ ಕದನ ಕ್ಲೈಮ್ಯಾಕ್ಸ್ ನ ಕಥೆ, ಚಿತ್ರಕತೆ, ನಿರ್ದೇಶನ ಎಲ್ಲವೂ ಮಾಡಿದ್ದು ಹೈಕಮಾಂಡ್ ನ ಒಂದು ಕರೆ ಬಳಿಕವೇ.
ಫೋನ್ ಕಾಲ್, ಬ್ರೇಕ್ ಫಾಸ್ಟ್ಗೆ ಹೈಕಮಾಂಡ್ ಆ್ಯಕ್ಷನ್, ಕಟ್?
ಇಷ್ಟು ದಿನ ಕೊಟ್ಟ ಮಾತು, ನಂಬಿಕೆ, ಹೈಕಮಾಂಡ್ ಒಪ್ಪಂದ ಅಂತಾ ಟ್ವೀಟ್, ಮಾತುಗಳ ಮೂಲಕ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಮಾತಿಗೆ ಕೌಂಟರ್ ಮಾತು, ಟ್ವೀಟ್ಗೆ ಮತ್ತೊಂದು ಟ್ವೀಟ್ ಮಾಡುತ್ತಲೇ ಕೊಟ್ಟ ಮಾತಿನ ಕದನಕ್ಕೆ ಬಂದು ನಿಂತಿತ್ತು. ಇದೀಗ ಈ ಪಟ್ಟದಾಟಕ್ಕೆ ತೆರೆ ಬಿದ್ದಿದೆ. ಆದರೆ ಈ ಬ್ರೇಕ್ ಫಾಸ್ಟ್ಗೆ ಹೈಕಮಾಂಡ್ ತೆರೆಮರೆಯಲ್ಲೇ ಎಲ್ಲವೂ ಪ್ಲ್ಯಾನ್ ಮಾಡಿತ್ತು. ಈ ಖುದ್ದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಶಾಸಕ ಎ.ಎಸ್ ಪೊನ್ನಣ್ಣಗೆ ಹೈಕಮಾಂಡ್ನಿಂದ ಕರೆಬಂದಿತ್ತು. ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮಾಡಿ ಡಿಕೆ ಶಿವಕುಮಾರ್ ಜೊತೆ ಮಾತುಕತೆ ಮಾಡಬೇಕು ಅಂತಾ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ
ಹೈಕಮಾಂಡ್ ಫೋನ್ ಕಾಲ್ ಬಗ್ಗೆ ಸಿದ್ದರಾಮಯ್ಯ ಹೇಳಿದ್ದು, ಮೊನ್ನೆಯೇ ವೇಣುಗೋಪಾಲ್ ಪೊನ್ನಣ್ಣಗೆ ಹೈಕಮಾಂಡ್ ಕರೆ ಮಾಡಿದ್ದರು. ಡಿ.ಕೆ ಶಿವಕುಮಾರ್ ಅವರನ್ನು ಬ್ರೇಕ್ ಫಾಸ್ಟ್ ಗೆ ಕರೆಯಿರಿ ಅಂತಾ. ಬಳಿಕ ಡಿಕೆ ಶಿವಕುಮಾರ್ ಅವರು ಕರೆ ನೀಡಿದರು. ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಡಿಕೆ ಶಿವಕುಮಾರ್ ಕರೆದಿದ್ದರು. ಹೈಕಮಾಂಡ್ ಬ್ರೇಕ್ ಫಾಸ್ಟ್ ಗೆ ಕರೆಯಲು ಹೇಳಿದ್ದರು. ನಮ್ಮ ಮನೆಯಲ್ಲೇ ಬ್ರೇಕ್ ಫಾಸ್ಟ್ ಮಾಡುವಂತೆ ಹೇಳಿದ್ದೆ. ಇನ್ನೊಂದು ದಿನ ಊಟಕ್ಕೆ ಬರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿಎಂ ಮತ್ತು ಡಿಸಿಎಂ ನಡುವೆ ಮಧ್ಯಸ್ಥಿಕೆ ವಹಿಸಿದ್ರಾ ಶಾಸಕ ಪೊನ್ನಣ್ಣ?
ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಎ.ಎಸ್. ಪೊನ್ನಣ್ಣ, ಜೊತೆಗಿದ್ದ ಕಾರಣಕ್ಕೆ ಫೋನ್ ಕೊಟ್ಟೆ. ಅವರ ಜೊತೆಗಿದ್ದ ಕಾರಣ ಫೋನ್ ಕೊಡಿ ಅಂದರು. ಹೈಕಮಾಂಡ್ ಹೇಳಿದ್ದಕ್ಕೆ ನಾನು ಫೋನ್ ಕೊಟ್ಟೆ. ಇದನ್ನು ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.