
ಚಿತ್ರರಂಗದವರು (ಚಲನಚಿತ್ರ ಉದ್ಯಮ) ಎಂದೊಡನೆ ಪಾರ್ಟಿ ಮಾಡುವವರು, ಐಶಾರಾಮಿ, ಸ್ವೇಚ್ಛೆಯ ಜೀವನ ನಡೆಸುವವರು ಎಂಬ ಕಲ್ಪನೆ ಹಲವರಿಗಿದೆ. ಅದರಲ್ಲೂ ಡ್ರಗ್ಸ್ ಜೊತೆಗೆ ಚಿತ್ರರಂಗವನ್ನು ಸದಾ ಲಿಂಕ್ ಮಾಡಲಾಗಿದೆ. ಇದು ಒಂದು ಹಂತಕ್ಕೆ ನಿಜವಾದರೂ ಎಲ್ಲರೂ ಹೀಗೆಯೇ ಇರುತ್ತಾರೆ ಎಂದೂ ಇಲ್ಲ. ಇದೀಗ ತೆಲಂಗಾಣದ ಶಾಸಕನೋರ್ವ ತೆಲುಗು ಚಿತ್ರರಂಗದ ಸ್ಟಾರ್ ನಟರುಗಳ ಬಗ್ಗೆ ನೀಡಿರುವ ಹೇಳಿಕೆ ತೀವ್ರ ವಿವಾದ ಎಬ್ಬಿಸಿದೆ. ಶಾಸಕನ ಹೇಳಿಕೆಗೆ ಪರ-ವಿರೋಧ ಅಭಿಪ್ರಾಯಗಳು ಕಂಡುಬರುತ್ತಿವೆ.
ತೆಲಂಗಾಣದ ಕಾಂಗ್ರೆಸ್ ಶಾಸಕ ಅನಿರುದ್ಧ್ ರೆಡ್ಡಿ ಇತ್ತೀಚೆಗೆ ಮಾತನಾಡಿ, ‘ತೆಲುಗು ಚಿತ್ರರಂಗದ ಎಲ್ಲ ಪ್ರಮುಖ ಸ್ಟಾರ್ ನಟರು ಅವರ ಸಿನಿಮಾ ಬಿಡುಗಡೆ ಮಾಡುವ ಮುಂಚೆಯೇ ಡ್ರಗ್ಸ್ ಪರೀಕ್ಷೆಗೆ ಒಳಗಾಗಬೇಕು’ ಎಂದಿದ್ದರು. ಆ ಮೂಲಕ ಸ್ಟಾರ್ ನಟರ ಡ್ರಗ್ಸ್ ವ್ಯಸನಿಗಳು ಎಂಬರ್ಥದ ಮಾತುಗಳನ್ನು ಆಡಿದ್ದರು. ಅನಿರುದ್ಧ್ ರೆಡ್ಡಿ ಅವರ ಈ ಹೇಳಿಕೆಗೆ ನಟರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜಕಾರಣಿಗಳ ವಿರುದ್ಧ ಡ್ರಗ್ಸ್ ಪ್ರಕರಣಗಳು ದಾಖಲಾಗಿರುವುದನ್ನು ಅನಿರುದ್ಧರೆಡ್ಡಿಗೆ ನೆನಪಿಸಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾ ಅಧ್ಯಕ್ಷ ಮಂಚು ವಿಷ್ಣು, ‘ನಟರಿಗೆ ಇಂತಹ ನಿಯಮಗಳು ಜಾರಿಗೆ ಬಂದರೆ, ಈ ರಾಜಕಾರಣಿಗಳಿಗೆ ಕೂಡ ಚುನಾವಣೆಗೆ ಮುನ್ನ ರೀತಿಯ ಪರೀಕ್ಷೆಗಳನ್ನು ನಡೆಸಬೇಕು’. ಇದೇ ವಿಷಯವಾಗಿ ನಟ ರಾಹುಲ್ ರಾಮಕೃಷ್ಣ ಕೂಡ ಹೇಳಿಕೆ ನೀಡಿದ್ದಾರೆ, ‘ನಾನು ಡ್ರಗ್ ಪರೀಕ್ಷೆಗೆ ಸಿದ್ಧನಿದ್ದೇನೆ, ಆದರೆ ರಾಜಕಾರಣಿಗಳು ನಿಯಮಿತವಾಗಿ ಲೈ ಡಿಟೆಕ್ಟರ್ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಗಾಗಬೇಕು’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಟಾಲಿವುಡ್ ಬಗ್ಗೆ ಅಸಮಾಧಾನ? ಜೂ ಎನ್ ಟಿಆರ್-ನೀಲ್ ಸಿನಿಮಾ ಆಫರ್ ತಿರಸ್ಕರಿಸಿದ ನಟ
ಇತ್ತೀಚೆಗಷ್ಟೇ ರೋಹಿತ್ ರೆಡ್ಡಿಯ ಫಾರ್ಮ್ ಹೌಸ್ ಮೇಲೆ ನಡೆದ ದಾಳಿಯಲ್ಲಿ ಕೆಲ ರಾಜಕಾರಣಿಗಳು ಡ್ರಗ್ಸ್ ಸೇವಿಸಿ ಸಿಕ್ಕಿ ಹಾಕಿಕೊಂಡಿದ್ದರು. ಅದರಲ್ಲಿ ಶಾಸಕರು ಮತ್ತು ಸಂಸದರು ಸಹ ಇಬ್ಬರು. ಆದರೆ ಈಗ ಶಾಸಕ ಸಿನಿಮಾ ರಂಗದವರು ಡ್ರಗ್ಸ್ ವ್ಯಸನಿಗಳು ಎಂದಿರುವುದು ಸಿನಿಮಾ ರಂಗದವರಿಗೆ ಸಿಟ್ಟು ತರಿಸಿದೆ. ಅವರ ಅಭಿಮಾನಿಗಳು ಸಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ