ಶಾಸಕರ ವಿದೇಶ ಪ್ರವಾಸ: ವರದಿ ಕೇಳಿದ ಹೈಕಮಾಂಡ್ಚಿತ್ರದ ಕ್ರೆಡಿಟ್ ಮೂಲ: TV9 ನೆಟ್‌ವರ್ಕ್
ಬೆಂಗಳೂರು, ಫೆಬ್ರವರಿ 12: ಕರ್ನಾಟಕ ರಾಜಕಾರಣದಲ್ಲಿ ಕಾಂಗ್ರೆಸ್ (ಕಾಂಗ್ರೆಸ್) ಶಾಸಕರ ವಿದೇಶ ಪ್ರವಾಸ (ವಿದೇಶಿ ಪ್ರವಾಸ) ಇದೀಗ ಭಾರೀ ಚರ್ಚೆಗೆ. ಶಾಸಕರ ಫಾರಿನ್ ಟ್ರಿಪ್ ಪಕ್ಷದೊಳಗೇ ಅಸಮಾಧಾನದ ಧ್ವನಿ ಕೇಳುತ್ತಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗೆ ಯೋಜಿಸಲಾಗಿದೆ ಈ ಪ್ರವಾಸದ ಉದ್ದೇಶವೇನು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಹೈಕಮಾಂಡ್ ಮಟ್ಟದಲ್ಲಿ ಗಮನ ಸೆಳೆದಿದೆ. ವಿದೇಶ ಪ್ರವಾಸದ ವಿಚಾರ ಬಹಿರಂಗವಾದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ.
ಪಶುಸಂಗೋಪನಾ ಇಲಾಖೆಯ ಅಧ್ಯಯನ ಪ್ರವಾಸದ ಹೆಸರಿನಲ್ಲಿ ಕೆಲವು ಶಾಸಕರು ವಿದೇಶಕ್ಕೆ ತೆರಳಲು ಸಿದ್ಧರಾಗಿರುವುದು ದೃಢಪಟ್ಟಿದೆ. ಯಾವೆಲ್ಲ ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂಬುದೂ ಬಹಿರಂಗವಾಗಿದೆ. ಆದರೆ, ಆರಂಭದಲ್ಲಿ ಇದು ಸರ್ಕಾರಿ ಪ್ರವಾಸ ಎಂದು ಹೇಳಲಾಗಿದೆ. ನಂತರ ಖಾಸಗಿ ಪ್ರವಾಸವಾಗಿ ಬದಲಾಗುತ್ತಿದೆಯೇ ಎಂಬ ಅನುಮಾನಗಳು ಪಕ್ಷದೊಳಗೇ ಮೂಡಿವೆ. ಹೀಗಾಗಿ, ಕಾಂಗ್ರೆಸ್ ನಾಯಕರು ಪ್ರವಾಸದ ಕುರಿತು ಸಂಪೂರ್ಣ ವರದಿ ಸಲ್ಲಿಸಲು ಹೈಕಮಾಂಡ್ ಸೂಚನೆ ನೀಡಬೇಕಿದೆ.
ಪವರ್ ಪಾಲಿಟಿಕ್ಸ್ ಹೊತ್ತಲ್ಲಿ ಟೂರ್ ಪಾಲಿಟಿಕ್ಸ್
ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಶಾಸಕರ ವಿದೇಶಿ ಪ್ರವಾಸ ಅಗತ್ಯವಿತ್ತೇ ಎಂಬ ಪ್ರಶ್ನೆ ಕೂಡ ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ. ‘ಪವರ್ ಪಾಲಿಟಿಕ್ಸ್ ನಡೆಯುತ್ತಿರುವ ಹೊತ್ತಿನಲ್ಲಿ ಟೂರ್ ಪಾಲಿಟಿಕ್ಸ್ ಬೇಕಿತ್ತಾ?’ ಅಸಮಾಧಾನ ಕೆಲ ನಾಯಕರಿಂದ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಅಧ್ಯಯನ ಪ್ರವಾಸವೇ ಆಗಿದ್ದರೆ ಸರ್ಕಾರದಿಂದ ಅಧಿಕೃತ ಅನುಮತಿ ಪಡೆದಿದ್ದೀರಾ ಎಂದು ಹೈಕಮಾಂಡ್ ಪ್ರಶ್ನಿಸಿದೆ.
ಇದೊಂದೆಡೆ, ಇದು ಸಂಪೂರ್ಣವಾಗಿ ಅಧ್ಯಯನ ಪ್ರವಾಸ ಎಂದು ಕೆಲವು ಶಾಸಕರು ಸ್ಪಷ್ಟಪಡಿಸಿದ್ದಾರೆ, ಇನ್ನೂ ಕೆಲವರು ಪ್ರವಾಸದ ಉದ್ದೇಶದ ಬಗ್ಗೆ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಪ್ರವಾಸಕ್ಕೆ ಸರ್ಕಾರದಿಂದ ಎನ್ ಒಸಿ ನೀಡಲು ಸಿಎಂ ಕಚೇರಿ ಮುಂದಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್ ಕೌನ್ಸಲೇಟ್‌ಗಳಿಗೆ ವೀಸಾ ಪ್ರಕ್ರಿಯೆಗಾಗಿ ಸರ್ಕಾರದಿಂದ ಪತ್ರ ರವಾನೆಯಾಗಿದೆ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ.
ಇದನ್ನೂ ಓದಿ: ನಾಯಕತ್ವ ಜಂಜಾಟದ ನಡುವೆ ಸದ್ದು ಮಾಡಿದ ಶಾಸಕರ ಫಾರಿನ್ ಟ್ರ್ಯಾಪ್: ಈ ಪ್ರವಾಸದ ಹಿಂದಿನ ಗುಟ್ಟೇನು?
ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದು, ಅಧ್ಯಯನ ಪ್ರವಾಸವೇ ಅಥವಾ ಖಾಸಗಿ ಪ್ರವಾಸವೇ ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗಬೇಕಿದೆ. ಈ ನಡುವೆ ಹೈಕಮಾಂಡ್ ಸಂಪೂರ್ಣ ವರದಿ ಪ್ರಕರಣಕ್ಕೆ ಮತ್ತಷ್ಟು ಟ್ವಿಸ್ಟ್ ಕೊಟ್ಟಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 8:23 am, ಗುರು, 12 ಫೆಬ್ರವರಿ 26