ಬೆಂಗಳೂರು, (ನವೆಂಬರ್ 26): ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನಾಚರಣೆ, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು. ಈ ವೇಳೆ ಚಾಮರಾಜನಗರದ ತೇಜಸ್ ಚಕ್ರವರ್ತಿ ಎಂಬ ಬಾಲಕ ನೋಡದೆ ಸಂವಿಧಾನ ಪೀಠವನ್ನು ಓದಿ ಎಲ್ಲರ ಗಮನಸೆಳೆದಿದ್ದಾನೆ. ಬಳಿಕ ಸಿದ್ದರಾಮಯ್ಯ ಬಾಲಕ ಚಕ್ರವರ್ತಿ ಮಾತನಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಚಕ್ರವರ್ತಿಗೆ ಸನ್ಮಾನಿಸಿ ಗೌರವಿಸಲಾಯ್ತು.