ಸಾರಿಗೆ ನೌಕರರಾಯ್ತು ಈಗ ಗುತ್ತಿಗೆದಾರರ ಸರದಿ: ಬಾಕಿ ಬಿಲ್​​ಗೆ ಆಗ್ರಹಿಸಿ ಮಾ.6ರಂದು ಪ್ರತಿಭಟನೆಗೆ ಕರೆ

ಸಾರಿಗೆ ನೌಕರರಾಯ್ತು ಈಗ ಗುತ್ತಿಗೆದಾರರ ಸರದಿ: ಬಾಕಿ ಬಿಲ್​​ಗೆ ಆಗ್ರಹಿಸಿ ಮಾ.6ರಂದು ಪ್ರತಿಭಟನೆಗೆ ಕರೆ


ಗುತ್ತಿಗೆದಾರರ ಸಂಘದಿಂದ ಸುದ್ದಿಗೋಷ್ಠಿಚಿತ್ರ ಕ್ರೆಡಿಟ್ ಮೂಲ: ಟಿವಿ9 ಕನ್ನಡ

ತುಮಕೂರು, ಫೆಬ್ರವರಿ 24: ಬಾಕಿ ಬಿಲ್ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿರುವ ಗುತ್ತಿಗೆದಾರರ ಸಂಘ, ಮಾ. 6 ರಂದು ಪ್ರತಿಭಟನೆ ನಡೆಸಲು ಮುಂದಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ತುಮಕೂರು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಲಾಯಿತು, ಕಳೆದ ಮೂರು ವರ್ಷಗಳಲ್ಲಿ ಸುಮಾರು 37 ಸಾವಿರ ಕೋಟಿ ರೂ. ಬಿಲ್ ಬಾಕಿ ಉಳಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.

ಸರ್ಕಾರದ ಕೆಲವು ಇಲಾಖೆಗಳಲ್ಲಿ ಪ್ಯಾಕ್ ಸಿಸ್ಟಮ್ ಅವ್ಯಾಹತವಾಗಿ ನಡೆಯುತ್ತಿದ್ದು, ಗುತ್ತಿಗೆದಾರರ ಸಮಸ್ಯೆಗಳನ್ನು ಪರಿಹರಿಸುವಂತೆ ಹಲವಾರು ಬಾರಿ ಮನವಿ ಕೊಟ್ಟರೂ ಸರ್ಕಾರ ಕಾರ್ಯನಿರ್ವಹಿಸುತ್ತಿಲ್ಲ. ಸೌಜನ್ಯಕ್ಕೂ ನಮ್ಮನ್ನು ಕರೆದು ಮಾತನಾಡುವ ಕೆಲಸ ಆಗಿಲ್ಲ. ನಮಗೆ ಜಿಎಸ್‌ಟಿ ಸೇರಿದಂತೆ ಸಮಸ್ಯೆಗಳಿದ್ದು, ಮುಖ್ಯಮಂತ್ರಿಗಳ ಜೊತೆ ಮಾತನಾಡಿದರೂ ಯಾವುದೇ ಸಮಸ್ಯೆ ಬಗೆಹರಿಯುತ್ತಿಲ್ಲ. ಹೀಗಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿರೋದಾಗಿ ಸಂಘ. ಸುಮಾರು 15 ಸಾವಿರ ಜನ ಸೇರಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುವಂತೆ ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ: ಬಾಕಿ ಬಿಲ್ ಬಿಲ್ ಮಾಡದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತ; ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೆದ್ದ ಗುತ್ತಿಗೆದಾರರ ಸಂಘ

ಯಾವ್ಯಾವ ಇಲಾಖೆಯಲ್ಲಿ ಎಷ್ಟು ಹಣ ಬಾಕಿ?

  • ಲೋಕೋಪಯೋಗಿ ಇಲಾಖೆ (PWD) – 8,370.76 ಕೋಟಿ ರೂ.
  • ಬೃಹತ್ ನೀರಾವರಿ ಇಲಾಖೆ – 13,000 ಕೋಟಿ ರೂ.
  • ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ – 3,800 ಕೋಟಿ ರೂ.
  • ಸಣ್ಣ ನೀರಾವರಿ ಇಲಾಖೆ – 3,000 ಕೋಟಿ ರೂ.
  • ನಗರಾಭಿವೃದ್ಧಿ ಇಲಾಖೆ – 2,000 ಕೋಟಿ ರೂ.
  • ವಸತಿ ಇಲಾಖೆ – 2,600 ಕೋಟಿ ರೂ.
  • ಕಾಮಗಾರಿ ಇಲಾಖೆ – 2,000 ಕೋಟಿ ರೂ.
  • ಜಿಬಿಎ – 2,600 ಕೋಟಿ ರೂ.

ಮೇಲಿನ ಎಲ್ಲಾ ಇಲಾಖೆಗಳು ಗುತ್ತಿಗೆದಾರರಿಗೆ ಬಾಕಿ ಬಿಲ್ ಮೊತ್ತ ಒಟ್ಟು 37,370.76 ಕೋಟಿ ರೂಪಾಯಿಗಳಿವೆ. ಇದರಿಂದ ಗುತ್ತಿಗೆದಾರರು ವಿಷ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 16 ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೂರಾರು ಜನ ಗುತ್ತಿಗೆದಾರರು ಮನೆ-ಮಠ ಬಿಟ್ಟುಹೋಗಿದ್ದಾರೆ. ಹೀಗಾಗಿ ಸರ್ಕಾರವನ್ನು ಪ್ರಚೋದಿಸುವ ಮುಷ್ಕರ ಮಾಡಬಹುದಾಗಿದೆ. ಒಂದು ದಿನ ಶಾಂತಿಯುತವಾಗಿ ಪ್ರತಿಭಟನೆ ನಡೆಯಲಿದ್ದು, ಸರ್ಕಾರವು ಕಾರ್ಯನಿರ್ವಹಿಸದಿದ್ದರೆ ಹೋರಾಟ ಮಾಡೋದಾಗಿ ಸಂಘವನ್ನು ಹೊಂದಿದೆ. ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮಯ್ಯ ಸೇರಿದಂತೆ ರಾಜ್ಯ ಮತ್ತು ಜಿಲ್ಲಾ ಸಂಘದ ಪದಾಧಿಕಾರಿಗಳು ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *