ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ! 47 ಎಕರೆ ಭೂಮಿ ವಸತಿ ವಲಯಕ್ಕೆ ಬದಲಿಸಲು ಹುನ್ನಾರ?

ಮುಡಾ ಈಗ MDA ಆಗಿ ಬದಲಾದರೂ ಇನ್ನೂ ನಿಲ್ಲದ ಅಕ್ರಮ! 47 ಎಕರೆ ಭೂಮಿ ವಸತಿ ವಲಯಕ್ಕೆ ಬದಲಿಸಲು ಹುನ್ನಾರ?


ಮೈಸೂರು, ಫೆಬ್ರವರಿ 13: ಮುಡಾ ಈಗ ಎಂಡಿಎ (MDA)ಆಗಿ ಹೆಸರು ಬದಲಾದರೂ ಅಕ್ರಮಗಳು ನಿಲ್ಲಲಿಲ್ಲ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಆರೋಪ ಮಾಡಿದ್ದಾರೆ. 2025ರ ಆಗಸ್ಟ್ 8ರಂದು ನಡೆದ ಎಂಡಿಎ ಮೊದಲ ಸಭೆಯಲ್ಲೇ 4.27 ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ 47 ಕೃಷಿ ವಲಯದ ಭೂಮಿಯನ್ನು ವಸತಿಗೆ ಬದಲಿಸಲು ಹುನ್ನಾರ ನಡೆದಿದೆ ಎಂದು ದೂರಲಾಗಿದೆ. ಮುಡಾ ಪ್ರಭಾರ ಆಯುಕ್ತ ರಕ್ಷಿತ್, ಪರಿಷತ್ ಸದಸ್ಯ ಮಧುೇಗೌಡ ಹಾಗೂ ನಗರಾಭಿವೃದ್ಧಿ ಸಚಿವ ಭೈರ ಸುರೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸರ್ಕಾರಕ್ಕೆ ಅನುಕೂಲವಾಗುವಂತೆ ಕಾನೂನು ಉಲ್ಲಂಘನೆಯಾಗಿದೆ ಎಂದು ಹೇಳಿ, ಎಲ್ಲರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *