ಮನೆಯಲ್ಲಿ ತಯಾರಿಸುವ ಸಸ್ಯಾಹಾರ, ಮಾಂಸಾಹಾರ ಅಡುಗೆ ವೆಚ್ಚದಲ್ಲಿ ಇಳಿಕೆ; ತರಕಾರಿ, ಕೋಳಿ ಬೆಲೆ ಇಳಿಕೆ ಪರಿಣಾಮ

ಮನೆಯಲ್ಲಿ ತಯಾರಿಸುವ ಸಸ್ಯಾಹಾರ, ಮಾಂಸಾಹಾರ ಅಡುಗೆ ವೆಚ್ಚದಲ್ಲಿ ಇಳಿಕೆ; ತರಕಾರಿ, ಕೋಳಿ ಬೆಲೆ ಇಳಿಕೆ ಪರಿಣಾಮ


ನವಂಬರ್, ಡಿಸೆಂಬರ್ 9: ಮನೆಯಲ್ಲಿ ಅಡುಗೆ ಕಳೆದ ತಿಂಗಳು ಕಡಿಮೆಯಾಯಿತು. ಕ್ರಿಸಿಲ್ನ ವರದಿಯ ಪ್ರಕಾರ ನವೆಂಬರ್ನಲ್ಲಿ ಮನೆಯಲ್ಲಿ ಆಹಾರ ತಯಾರಿಸುವ ವೆಚ್ಚ ಶೇ. 13ರಷ್ಟು ಕಡಿಮೆ ಆಗಿದೆ. ಸಸ್ಯಾಹಾರ ಮತ್ತು ಮಾಂಸಾಹಾರ ಅಡುಗೆ ತಯಾರಿಕೆಯ ವೆಚ್ಚ ಸಮಾನವಾಗಿ ಇಳಿಕೆ ಕಂಡಿವೆ. ದೇಶಾದ್ಯಂತ ಹಣದುಬ್ಬರ (ಹಣದುಬ್ಬರ) ಇಳಿಕೆಗೆ ಅನುಗುಣವಾಗಿ ಈ ಅಡುಗೆ ವೆಚ್ಚವೂ ಕಡಿಮೆ ಆಗಿರುವುದು ಗಮನಾರ್ಹ.

ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ಸಾಕಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಸಸ್ಯಾಹಾರ ಊಟ ತಯಾರಿಸುವ ವೆಚ್ಚ ಕಡಿಮೆಯಾಗಿದೆ. ಇನ್ನು, ಬ್ರಾಯ್ಲರ್ ಕೋಳಿಗಳ ಬೆಲೆಯಲ್ಲಿ ಶೇ. 12 ಕಡಿಮೆ ಆಗಿರುವ ಮಾಂಸಾಹಾರ ಊಟದ ತಯಾರಿಕೆಯ ವೆಚ್ಚವೂ ಕಡಿಮೆಯಾಗಿದೆ. ಮನೆಗಳಲ್ಲಿ ತಯಾರಾಗುವ ಮಾಂಸಾಹಾರ ಅಡುಗೆಯಲ್ಲಿ ಅರ್ಧದಷ್ಟು ಕೋಳಿ ಮಾಂಸದ್ದಾಗಿರುತ್ತದೆ. ಹೀಗಾಗಿ, ಕೋಳಿಗಳ ಬೆಲೆ ಕಡಿಮೆಯಾಗಿದೆ ಮಾಂಸಾಹಾರ ಅಡುಗೆಯ ವೆಚ್ಚವೂ ಇಳಿದಿದೆ.

ಇದನ್ನೂ ಓದಿ: ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ತಯಾರಕರಲ್ಲಿ ಭಾರತದ ಮೂರು ಕಂಪನಿಗಳು

ಕುತೂಹಲದ ಸಂಗತಿ ಎಂದರೆ, ಹಿಂದಿನ ತಿಂಗಳಿಗೆ ವೆಚ್ಚ, ಅಂದರೆ ಅಕ್ಟೋಬರ್ ತಿಂಗಳಿಗೆ ಸಸ್ಯಾಹಾರ ಊಟದ ಆಗುವ ನವೆಂಬರ್‌ನಲ್ಲಿ ಶೇ. 2% ಆಗಿದೆ. ಆದರೆ, ಮಾಂಸಾಹಾರ ಅಡುಗೆ ವೆಚ್ಚ ಶೇ. 1ರಷ್ಟು ಕಡಿಮೆ ಆಗಿದೆ.

ಸಸ್ಯಾಹಾರ ಅಡುಗೆ ವೆಚ್ಚ ತುಸು ಏರಿಕೆ ಆಗಲು ಪ್ರಮುಖ ಕಾರಣವಾದ ಆಲೂಗಡ್ಡೆ ಮತ್ತು ಟೊಮೆಟೋ ಬೆಲೆಗಳು ಅಕ್ಟೋಬರ್‌ಗಿಂತ ನವೆಂಬರ್‌ನಲ್ಲಿ ಹೆಚ್ಚು ಇದ್ದದ್ದು. ಬ್ರಾಯ್ಲರ್ ಕೋಳಿಗಳ ಬೆಲೆ ಅಕ್ಟೋಬರ್ ಗಿಂತ ನವೆಂಬರ್ ನಲ್ಲಿ ಶೇ. 5ರಷ್ಟು ಇಳಿಕೆಯಾಗಿದೆ. ಹೋಮ್ ಮೇಡ್ ನಾನ್-ವೆಜ್ ಥಾಲಿ ವೆಚ್ಚ ಕಡಿಮೆಯಾಗಿದೆ.

ಇದನ್ನೂ ಓದಿ: ಬೆಲೆ ಏರಿಕೆಯಲ್ಲಿ ಭರ್ಜರಿ ಕುಸಿತ; ಅಕ್ಟೋಬರ್ನಲ್ಲಿ ಹಣದುಬ್ಬರ ದರ ಕೇವಲ ಶೇ. 0.25

ಟೊಮೆಟೋ ಮತ್ತು ಆಲೂಗಡ್ಡೆ ಬೆಲೆಗಳು ಅಕ್ಟೋಬರ್‌ಗೆ ಆಗಿದ್ದು ನವೆಂಬರ್‌ನಲ್ಲಿ ಏರಿಕೆಯಾಗಿದ್ದರೂ, ಹಿಂದಿನ ವರ್ಷದ ನವೆಂಬರ್‌ನಲ್ಲಿ ಇದು ಸಾಕಷ್ಟು ಕಡಿಮೆಯಾಗಿದೆ. ಟೊಮೆಟೋ ಬೆಲೆ ಶೇ. 17 ಮತ್ತು ಆಲೂ ಬೆಲೆ ಶೇ. 29ರಷ್ಟು ಕಡಿಮೆ ಆಗಿದೆ. ಈರುಳ್ಳಿ ಬೆಲೆಯೂ ಶೇ. 53ರಷ್ಟು ಕಡಿಎ ಆಗಿದೆ. ಭಾರತೀಯರ ಅಡುಗೆಗಳಲ್ಲಿ ಈ ಮೂರೂ ಸರಕುಗಳ ಬಳಕೆ ಅತಿಹೆಚ್ಚು ಇರುತ್ತದೆ. ಹೀಗಾಗಿ, ಇವುಗಳ ಬೆಲೆಯು ಅಡುಗೆ ವೆಚ್ಚದ ಮೇಲೆ ಪ್ರಭಾವ ಬೀರಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *