
ಆದರೆ ನ್ಯಾಯಾಲಯ ಇದು ಕೌಟುಂಬಿಕ ವಿವಾದವಲ್ಲ ಎಂದು ಹೇಳಿ ವಿದೇಶಾಂಗ ಸಚಿವಾಲಯದ ಸಹಾಯ ಪಡೆಯುವಂತೆ ಕೇಳಿಕೊಂಡಿತು. ಸೆಲೀನಾ ಹಾಗೂ ಅವರ ಸೋದರನ ಮಧ್ಯೆ ಸಂಬಂಧ ಹಳಸಿದ್ದರು, ತಾನು 2024 ರಿಂದಲೂ ಸೆಲೀನಾ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ಚಾರುಲ್ ಹೇಳಿದ್ದಾರೆ. ವಿಕ್ರಾಂತ್ ಅವರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಇಬ್ಬರು ಒಟ್ಟಾಗಿ ಕೆಲಸ ಮಾಡಲು ಇಬ್ಬರ ನಡುವಿನ ಸಂಬಂಧವನ್ನು ಮರುಸ್ಥಾಪಿಸುವಂತೆ ನ್ಯಾಯಾಲಯ ಕೇಳಿದೆ.
ಪ್ರಕರಣದ ವರದಿ ಮಾಡುವುದನ್ನು ತಡೆಯಲು ಚಾರುಲ್ ಪರ ವಕೀಲರು ಕೋರಿದಾಗ, ಮಾಧ್ಯಮಗಳ ಮೇಲೆ ನಿಷೇಧ ಹೇರಲು ನ್ಯಾಯಾಲಯ ನಿರಾಕರಿಸಿತು. ಆದರೆ ನ್ಯಾಯಾಲಯದ ಅನುಮತಿಯಿಲ್ಲದೆ ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು ಎಂದು ಸೆಲೀನಾ ಮತ್ತು ಚಾರುಲ್ ಅವರಿಗೆ ತಿಳಿಸಿತು.
ಇದನ್ನೂ ಓದಿ: ಕೊಲೆಯಾದ ಪತ್ನಿ ಜೀವಂತವಾಗಿ ಪತ್ತೆ: ಆಧಾರ್ ಕಾರ್ಡ್ ಅಪ್‌ಡೇಟ್ ನೀಡಿತ್ತು ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್