ನಾಯಕ ಸೂರ್ಯಗೆ 100ಕ್ಕೆ 100 ಅಂಕ ನೀಡಿದ ಕ್ರಿಕೆಟ್ ಅಭಿಮಾನಿಗಳು; ಸರಣಿ ಸಾಧನೆಗಳು ಇಲ್ಲಿವೆ

ನಾಯಕ ಸೂರ್ಯಗೆ 100ಕ್ಕೆ 100 ಅಂಕ  ನೀಡಿದ ಕ್ರಿಕೆಟ್ ಅಭಿಮಾನಿಗಳು; ಸರಣಿ ಸಾಧನೆಗಳು ಇಲ್ಲಿವೆ

ನಾಯಕ ಸೂರ್ಯಗೆ 100ಕ್ಕೆ 100 ಅಂಕ  ನೀಡಿದ ಕ್ರಿಕೆಟ್ ಅಭಿಮಾನಿಗಳು; ಸರಣಿ ಸಾಧನೆಗಳು ಇಲ್ಲಿವೆ

ಸೂರ್ಯಕುಮಾರ್ ಯಾದವ್ ಅವರ ನಾಯಕತ್ವದಲ್ಲಿ ಭಾರತ ತಂಡವು ಟಿ20 ವಿಶ್ವಕಪ್ ಮತ್ತು ಏಷ್ಯಾಕಪ್ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಸೋಲಿಲ್ಲದ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು 16 ಬಾರಿ 200+ ರನ್ ಗಳಿಸಿ, ಎಲ್ಲಾ ಪಂದ್ಯಗಳಲ್ಲೂ ಜಯಭೇರಿ ಬಾರಿಸಿರುವುದು ವಿಶೇಷ.

ಭಾರತಕ್ಕೆ ವಿಶ್ವಕಪ್‌ ಗೆಲ್ಲಿಸಿಕೊಟ್ಟ ನಾಯಕರ ಸಾಲಿಗೆ ಸೂರ್ಯಕುಮಾರ್‌ ಯಾದವ್‌ ಕೂಡ ಸೇರ್ಪಡೆಗೊಂಡಿದ್ದಾರೆ. ಎಂ.ಎಸ್.ಧೋನಿ, ರೋಹಿತ್‌ ಶರ್ಮಾ ಬಳಿಕ ಭಾರತವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಹಿರಿಮೆ ಸೂರ್ಯಗೆ ಸಂದಿದೆ. ಸೂರ್ಯಕುಮಾರ್‌, ಭಾರತ ತಂಡದ ನಾಯಕರಾಗಿ 100ಕ್ಕೆ 100 ಅಂಕ ಪಡೆದಿದ್ದಾರೆ. ಅವರ ನಾಯಕತ್ವದ ಅಂಕಿ-ಅಂಶ, ಟಿ20ಯಲ್ಲಿ ಅವರನ್ನು ವಿಶ್ವದ ಅಗ್ರ ನಾಯಕರ ಸಾಲಿನಲ್ಲಿ ನಿಲ್ಲಿಸುತ್ತದೆ.

ತವರು ನೆಲದಲ್ಲಿ ವಿಶ್ವಕಪ್‌ ಟ್ರೋಫಿ ಗೆದ್ದ ವಿಶ್ವದ ಮೊದಲ ನಾಯಕ ಎನ್ನುವ ದಾಖಲೆಯನ್ನು ಸೂರ್ಯಕುಮಾರ್‌ ಬರೆದಿದ್ದಾರೆ. ನಾಯಕರಾಗಿ ತಂಡಕ್ಕೆ ಹೊಸ ಚೈತನ್ಯ ತುಂಬಿದ ಸೂರ್ಯರ ವೃತ್ತಿಬದುಕಿನ ಶೋಭೆ, ವಿಶ್ವಕಪ್‌ ಗೆಲುವಿನಿಂದ ಹೆಚ್ಚಾಗಿದೆ.

2024ರ ಟಿ20 ವಿಶ್ವಕಪ್‌ ಗೆದ್ದ ದಿನದಂದೇ ಅಂ.ರಾ. ಟಿ20ಗೆ ರೋಹಿತ್‌ ಶರ್ಮಾ ನಿವೃತ್ತಿ ಘೋಷಿಸಿದರು. ಆ ಬಳಿಕ ಭಾರತ ಟಿ20 ತಂಡದ ಪೂರ್ಣಾವಧಿ ನಾಯಕರಾಗಿ ನೇಮಕಗೊಂಡ ಸೂರ್ಯ, ತಂಡವನ್ನು ನಿರಂತರವಾಗಿ ಯಶಸ್ಸಿನಡೆಗೆ ಮುನ್ನಡೆಸಿದ್ದಾರೆ.

2024ರ ವಿಶ್ವಕಪ್‌ ಫೈನಲ್‌ ಬಳಿಕ ಭಾರತ ತಂಡ ಒಟ್ಟು 45 ಪಂದ್ಯಗಳನ್ನಾಡಿದ್ದು, ಇದರಲ್ಲಿ 37ರಲ್ಲಿ ಗೆದ್ದಿದೆ. ಸೋತಿರುವುದು ಕೇವಲ 5 ಪಂದ್ಯಗಳಲ್ಲಿ. 2 ಪಂದ್ಯಗಳು ಫಲಿತಾಂಶ ಕಂಡಿಲ್ಲ. ಇನ್ನು, ಸೂರ್ಯ ನಾಯಕತ್ವದಲ್ಲಿ ಭಾರತ ಟಿ20 ಸರಣಿಯನ್ನೇ ಸೋತಿಲ್ಲ. ಸತತ 7 ಸರಣಿಗಳಲ್ಲಿ ಭಾರತ ಜಯಭೇರಿ ಬಾರಿಸಿದೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ (ತವರಿನಲ್ಲಿ, ತವರಿನಾಚೆ), ಇಂಗ್ಲೆಂಡ್‌ ಹಾಗೂ ವಿಶ್ವಕಪ್‌ಗೂ ಮುನ್ನ ನ್ಯೂಜಿಲೆಂಡ್‌ ವಿರುದ್ಧವೂ ಸರಣಿ ಜಯಿಸಿತು.

ಏಷ್ಯಾಕಪ್‌ ಜಯ ಸೂರ್ಯಕುಮಾರ್‌ ನಾಯಕತ್ವದಲ್ಲಿ ಭಾರತ ತಂಡ ಏಷ್ಯಾಕಪ್‌ ಸಹ ಜಯಿಸಿದೆ. 2025ರ ಏಷ್ಯಾಕಪ್‌ನಲ್ಲಿ ಭಾರತ ತಂಡ ಬದ್ಧವೈರಿ ಪಾಕಿಸ್ತಾನವನ್ನು 3 ಬಾರಿ ಬಗ್ಗುಬಡಿಯಿತು. ಭಾರೀ ವಿವಾದಕ್ಕೆ ಕಾರಣವಾದ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಸೂರ್ಯ ತಂಡವನ್ನು ಮುನ್ನಡೆಸಿದ ರೀತಿ, ಅವರಲ್ಲಿರುವ ನಾಯಕತ್ವ ಗುಣಗಳನ್ನು ಎತ್ತಿತೋರಿಸಿತು.

ಇದನ್ನೂ ಓದಿ: ICC ಟಿ20 ವಿಶ್ವಕಪ್ ಟ್ರೋಫಿಯನ್ನು ತಯಾರಿಸುವ ರಾಜಸ್ಥಾನದ ಜೈಪುರದ ವ್ಯಕ್ತಿ ಯಾರು?

ಸೂರ್ಯಕುಮಾರ್‌ರ ನಾಯಕತ್ವದಲ್ಲಿ ಭಾರತ ತಂಡ ಕೇವಲ 51 ಪಂದ್ಯಗಳಲ್ಲಿ (2026ರ ವಿಶ್ವಕಪ್‌ ಫೈನಲ್‌ಗೂ ಮುನ್ನ) 16 ಬಾರಿ ಇನ್ನಿಂಗ್ಸಲ್ಲಿ 200ಕ್ಕೂ ಹೆಚ್ಚು ರನ್‌ ದಾಖಲಿಸಿದೆ. ಅಂದರೆ ಸರಾಸರಿ ಪ್ರತಿ 3 ಪಂದ್ಯದಲ್ಲಿ ಭಾರತ 200+ ರನ್‌ ಕಲೆಹಾಕಿದೆ. ವಿಶೇಷ ಎಂದರೆ ಈ ಎಲ್ಲಾ 16 ಪಂದ್ಯಗಳಲ್ಲೂ ಭಾರತ ಗೆದ್ದಿದೆ.

ಇದನ್ನೂ ಓದಿ: ಅಹಮದಾಬಾದಲ್ಲಿ ಟೀಂ ಇಂಡಿಯಾ ಅದೃಷ್ಟ ಚೇಂಜ್ ಆಗಿದ್ದು ಹೇಗೆ? ತನ್ನ ಲಕ್ ತಾನೇ ಬದಲಾಯಿಸಿಕೊಂಡ ಕ್ಷಣ ಯಾವುದು?

Source link

Leave a Reply

Your email address will not be published. Required fields are marked *