ಮಕ್ಕಳ ನೆಚ್ಚಿನ ಬಣ್ಣಬಣ್ಣದ 'ಕ್ರಾಕ್ಸ್' ಚಪ್ಪಲಿಗಳಲ್ಲಿದೆಯೇ ಹಾರ್ಮೋನ್ ಏರುಪೇರು ಮಾಡುವ ವಿಷ?

ಮಕ್ಕಳ ನೆಚ್ಚಿನ ಬಣ್ಣಬಣ್ಣದ 'ಕ್ರಾಕ್ಸ್' ಚಪ್ಪಲಿಗಳಲ್ಲಿದೆಯೇ ಹಾರ್ಮೋನ್ ಏರುಪೇರು ಮಾಡುವ ವಿಷ?

ಮಕ್ಕಳ ನೆಚ್ಚಿನ ಬಣ್ಣಬಣ್ಣದ 'ಕ್ರಾಕ್ಸ್' ಚಪ್ಪಲಿಗಳಲ್ಲಿದೆಯೇ ಹಾರ್ಮೋನ್ ಏರುಪೇರು ಮಾಡುವ ವಿಷ?

Crocs health risks for kids: ನಾವು ಆರಾಮದಾಯಕ ಎಂದು ಭಾವಿಸುವ ಈ ಪ್ಲಾಸ್ಟಿಕ್ ಪಾದರಕ್ಷೆಗಳಲ್ಲಿ ಹಾರ್ಮೋನ್‌ಗಳ ಸಮತೋಲನವನ್ನೇ ಹಾಳುಮಾಡುವ ವಿಷಕಾರಿ ರಾಸಾಯನಿಕಗಳು ಅಡಗಿವೆ. ವಿಶೇಷವಾಗಿ ಬೆಳೆಯುವ ವಯಸ್ಸಿನ ಮಕ್ಕಳ ಮೇಲೆ ಇದು ಸದ್ದಿಲ್ಲದೆ ಗಂಭೀರ ಪರಿಣಾಮ ಬೀರುತ್ತಿದೆ.

ಹಿಂದಿನ ಕಾಲದಲ್ಲಿ ಜನರು ಮರದ ಪಾದರಕ್ಷೆಗಳು ಅಥವಾ ನೈಸರ್ಗಿಕ ಚರ್ಮದ ಚಪ್ಪಲಿಗಳನ್ನು ಬಳಸುತ್ತಿದ್ದರು. ಆದರೆ ಕಾಲ ಬದಲಾದಂತೆ ಮಾರುಕಟ್ಟೆಯಲ್ಲಿ ಆಕರ್ಷಕ, ಬಣ್ಣಬಣ್ಣದ ಮತ್ತು ಕೈಗೆಟುಕುವ ದರದಲ್ಲಿ ಸಿಗುವ ಪ್ಲಾಸ್ಟಿಕ್ ಹಾಗೂ ಫೋಮ್ ಚಪ್ಪಲಿಗಳು (ಕ್ರಾಕ್ಸ್ ಮಾದರಿಯ) ಲಗ್ಗೆ ಇಟ್ಟಿವೆ.

ನೋಡಲು ಸುಂದರ ಮತ್ತು ಧರಿಸಲು ಆರಾಮದಾಯಕ ಎನಿಸುವ ಈ ಪಾದರಕ್ಷೆಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ತಜ್ಞ ವೈದ್ಯರಾದ ಡಾ. ಪುನೀತ್ ಬಿ. ಠಾಕೂರ್ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಈ ಪ್ಲಾಸ್ಟಿಕ್ ಚಪ್ಪಲಿಗಳ ಹಿಂದೆ ಗಂಭೀರ ಆರೋಗ್ಯದ ಅಪಾಯಗಳು ಅಡಗಿವೆ.

ವಿಷಕಾರಿ ರಾಸಾಯನಿಕಗಳ ಅಸ್ತಿತ್ವಹೆಚ್ಚಿನ ಫೋಮ್ ಮತ್ತು ಕ್ರಾಕ್ಸ್ ಮಾದರಿಯ ಪಾದರಕ್ಷೆಗಳಲ್ಲಿ ‘ಥಾಲೇಟ್ಸ್’ (Phthalates) ಮತ್ತು ‘PFAS’ ನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ.

ಹಾರ್ಮೋನ್ ಏರುಪೇರುವಿಜ್ಞಾನದ ಭಾಷೆಯಲ್ಲಿ ಇವುಗಳನ್ನು ‘ಎಂಡೋಕ್ರೈನ್ ಡಿಸ್ರಪ್ಟರ್ಸ್’ (Endocrine Disruptors) ಎಂದು ಕರೆಯಲಾಗುತ್ತದೆ. ಇವು ಚರ್ಮದ ಮೂಲಕ ದೇಹವನ್ನು ಪ್ರವೇಶಿಸಿ ಹಾರ್ಮೋನ್‌ಗಳ ಸಮತೋಲನವನ್ನು ಹಾಳುಮಾಡುತ್ತವೆ.

ಮಕ್ಕಳ ಚರ್ಮವು ಅತ್ಯಂತ ನಾಜೂಕಾಗಿರುತ್ತದೆ ಮತ್ತು ಅವರ ದೇಹದ ಬೆಳವಣಿಗೆಯ ಹಂತದಲ್ಲಿರುತ್ತದೆ. ಈ ಕೆಮಿಕಲ್ಸ್‌ಗಳು ಮಕ್ಕಳಲ್ಲಿ ಅಕಾಲಿಕ ಪ್ರೌಢಾವಸ್ಥೆ (Early Puberty), ಹಾರ್ಮೋನಿನ ಅಸಮತೋಲನ ಮತ್ತು ಭವಿಷ್ಯದಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.

ಹಾರ್ಮೋನ್‌ಗಳು ನಮ್ಮ ದೇಹದ ಬೆಳವಣಿಗೆ, ಮೂಡ್, ಚಯಾಪಚಯ ಕ್ರಿಯೆ ಮತ್ತು ಒಟ್ಟಾರೆ ವಿಕಾಸವನ್ನು ನಿಯಂತ್ರಿಸುತ್ತವೆ. ಪ್ಲಾಸ್ಟಿಕ್ ಚಪ್ಪಲಿಗಳ ಸತತ ಸಂಪರ್ಕದಿಂದ ಈ ಸಂಪೂರ್ಣ ವ್ಯವಸ್ಥೆಯು ನಿಧಾನವಾಗಿ ಹಾನಿಗೊಳಗಾಗಬಹುದು.

ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕಾಗಿ ಪಾದರಕ್ಷೆಗಳನ್ನು ಖರೀದಿಸುವಾಗ ಈ ಕೆಳಗಿನ ಆಯ್ಕೆಗಳನ್ನು ಪರಿಗಣಿಸಿ:ನೈಸರ್ಗಿಕ ರಬ್ಬರ್‌ನಿಂದ ಮಾಡಿದ ಚಪ್ಪಲಿಗಳು.ಕ್ಯಾನ್ವಾಸ್ ಸ್ನೀಕರ್ಸ್.ನೈಸರ್ಗಿಕ ಬಟ್ಟೆ ಅಥವಾ ಸೆಣಬಿನಿಂದ (Jute) ತಯಾರಿಸಿದ ಪಾದರಕ್ಷೆಗಳು.

“ನೀವು ಪ್ಲಾಸ್ಟಿಕ್ ಅಥವಾ ಫೋಮ್ ಚಪ್ಪಲಿಗಳನ್ನು ಧರಿಸಲೇಬೇಕಾದ ಸಂದರ್ಭ ಬಂದರೆ, ಯಾವಾಗಲೂ ಸಾಕ್ಸ್ (Socks) ಧರಿಸಿ ಬಳಸಿ. ಇದು ಚರ್ಮದ ಜೊತೆ ಕೆಮಿಕಲ್ಸ್‌ಗಳ ನೇರ ಸಂಪರ್ಕವನ್ನು ತಪ್ಪಿಸಲು ಸಹಾಯ ಮಾಡುತ್ತದೆ.”
View this post on Instagram
A post shared by Dr Puneet B. Thakur (@dr_puneetofficial)

Source link

Leave a Reply

Your email address will not be published. Required fields are marked *