Video: ಮಳೆಯಲ್ಲಿ ಕೊಚ್ಚಿ ಹೋದ ಬೆಳೆ; ಸಂಕಷ್ಟದಲ್ಲೂ ರೈತನ ಮುಖದಲ್ಲಿ ಮಾಸದ ನಗು

Video: ಮಳೆಯಲ್ಲಿ ಕೊಚ್ಚಿ ಹೋದ ಬೆಳೆ; ಸಂಕಷ್ಟದಲ್ಲೂ ರೈತನ ಮುಖದಲ್ಲಿ ಮಾಸದ ನಗು


ಭೂಮಿ ತಾಯಿಯನ್ನೇ ನಂಬಿ ಬದುಕುತ್ತಿರುವ ರೈತನ (ರೈತ) ಕಾಯ ಕೃಷಿಯೊಂದಿಗೆ ಈ ಮಳೆಯೂ ಆಟವಾಡುತ್ತದೆ. ಮಳೆ ಬಾರದೆ ಬರಗಾಲದಿಂದ ಬೆಳೆಯೆಲ್ಲಾ ನಾಶವಾದರೆ, ಇನ್ನು ಕೆಲವೊಮ್ಮೆ ಅತಿಯಾದ ಮಳೆಯಿಂದ ಬೆಳೆಯೆಲ್ಲಾ ಕೊಚ್ಚಿ ಹೋಗುತ್ತದೆ. ಇಂತಹ ದೃಶ್ಯಗಳನ್ನು ನೋಡಿದಾಗ ಎಂತಹವರಿಗಾದ್ರು ಕರುಳು ಚುರ್ ಎನ್ನುತ್ತೆ. ರೈತರ ಕಷ್ಟ ಎಷ್ಟು ವಿಡಿಯೋ ವೈರಲ್ ಆಗಿದೆ. ಹೌದು, ಭತ್ತದ ಕಟಾವಿಗೆ ಮಳೆ ಅಡ್ಡಿ ತಂದಿದ್ದು, ಮಳೆಯ ನಡುವೆಯೂ ರೈತರು ತಾನು ಬೆಳೆದ ಬೆಳೆಯನ್ನು ಮನೆಯ ಅಂಗಳಕ್ಕೆ ತಂದು ಇಷ್ಟು ಸಿಕ್ಕಿದ್ದು ಪುಣ್ಯ ಎಂಬಂತೆ ಪೈರಿನ ಭತ್ತವನ್ನು ಬೇರ್ಪಡಿಸುವ ದೃಶ್ಯವು ಕರುಳು ಹಿಂಡುವಂತಿದೆ. ಈ ವಿಡಿಯೋ ನೆಟ್ಟಿಗರ ಕಣ್ಣನ್ನು ಒದ್ದೆಯಾಗಿಸಿದೆ.

ಮಳೆ ತಂದ ಸಂಕಷ್ಟ: ರೈತನ ಪಾಡು ಹೇಗಿದೆ ನೋಡಿ

gowrishkothari ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ರೈತನ ಬದುಕಿನ ಸ್ಪಷ್ಟ ಚಿತ್ರಣ ಇಲ್ಲಿದೆ. ಮಳೆಯಿಂದ ಹಾಳಾದ ಬೆಳೆಯನ್ನು ಮನೆಯ ಅಂಗಳಕ್ಕೆ ತರುವುದನ್ನು ಕಾಣಬಹುದು. ಕಷ್ಟಪಟ್ಟು ಬೆವರು ಸುರಿಸಿ ಬೆಳೆದು ಬೆಳೆದು ಹಾಳಾಗಿದ್ರೂ ಕೂಡ ಈ ರೈತರ ಮುಖದಲ್ಲಿ ಮಾತ್ರ ನಗು ಮಾಸದೆ. ಮನೆಯ ಅಂಗಳದಲ್ಲಿ ಭತ್ತವನ್ನು ಬೇರ್ಪಡಿಸುತ್ತಿರುವ ಕೆಲಸದಲ್ಲಿ ರೈತರು ತೊಡಗಿದ್ದಾರೆ. ಆದರೆ, ಜೋರಾಗಿ ಸುರಿಯುತ್ತಿರುವ ಮಳೆಗೆ ಭತ್ತವೆಲ್ಲಾ ಒದ್ದೆಯಾಗಿ ನೀರಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಈ ಭತ್ತವನ್ನು ನೀರಿನಿಂದ ಬೇರ್ಪಡಿಸಿ ಬುಟ್ಟಿಯಲ್ಲಿ ತುಂಬಿಸುತ್ತಿರುವುದನ್ನು ಕಾಣಬಹುದಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ:ಕೃಷಿ ಕೆಲಸದಲ್ಲೇ ಈ ಜನರಿಗೆ ಖುಷಿ; ಇದು ಹಳ್ಳಿ ಬದುಕಿನ ಸುಂದರ ದೃಶ್ಯಕಾವ್ಯ

ಈ ವಿಡಿಯೋ ಇಪ್ಪತ್ತೈದು ಸಾವಿರಕ್ಕೂ ಅಧಿಕ ವೀಕ್ಷಣೆಗಳು ಇವೆ. ಒಬ್ಬ ಬಳಕೆದಾರ ಕೃಷಿಕರ ಕಷ್ಟ ಅವನಿಗಷ್ಟೇ ಗೊತ್ತು, ಕಷ್ಟ ಏನು ಎಂದು ಗದ್ದೆಯಲಿ ನಿಂತು ನೋಡಬೇಕು ಎಂದು ಹೇಳಿದರು. ಜರಡಿ ತರ ಇರೋ ಪ್ಲಾಸ್ಟಿಕ್ ಬುಟ್ಟಿಗೆ ಹಾಕಿ ನೀರು ಬೇಗ ಇಳಿಯುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಭಗವಂತ ರೈತರನ್ನು ಕಾಪಾಡು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *