Headlines

ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?

ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರಿಕೆ; ಬ್ಯಾರಲ್​ಗೆ ಒಂದು ಡಾಲರ್ ಬೆಲೆ ಹೆಚ್ಚಿದಂತೆ ಭಾರತಕ್ಕೆ ಹೊರೆ ಎಷ್ಟು ಹೆಚ್ಚುತ್ತೆ ಗೊತ್ತಾ?


ಜನವರಿ, ಮಾರ್ಚ್ 2: ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮವಾಗಿ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ (ಕಚ್ಚಾ ತೈಲ ಬೆಲೆಗಳು) ಹೆಚ್ಚುತ್ತಿದೆ. ಸೋಮವಾರದ ವಹಿವಾಟಿನಲ್ಲಿ ಬ್ರೆಂಟ್ ಕ್ರೂಡ್ ತೈಲ ಬ್ಯಾರಲ್‌ಗೆ 80 ಡಾಲರ್ ಬೆಲೆ ದಾಟಿದೆ. ಬ್ಯಾರಲ್‌ಗೆ 60 ಡಾಲರ್ ಆಸುಪಾಸಿನ ಬೆಲೆಯಲ್ಲಿ ತೈಲ ಖರೀದಿ ಭಾರತಕ್ಕೆ ಈಗ ಬೆಲೆ ಏರಿಕೆ ಬಿಸಿ ಆರ್ಥಿಕವಾಗಿ ತಾಗಲಿದೆ. ತೈಲ ಬೆಲೆ ಹಲವು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೋಗಿದೆ.

ಕಚ್ಛಾ ತೈಲ ಬೆಲೆ ಏರಿಕೆಯಿಂದ ಭಾರತಕ್ಕೆ ಏನು ನಷ್ಟ?

ಭಾರತಕ್ಕೆ ಅಗತ್ಯವಾದ ಬಹುಪಾಲು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಲ್ಲಿ ಇರಾನ್ ಹಾಗೂ ಕೊಲ್ಲಿ ರಾಷ್ಟ್ರಗಳದ್ದು ಸಿಂಹಪಾಲು. ಭಾರತದ ಒಟ್ಟಾರೆ ಆಮದಿನಲ್ಲಿ ತೈಲ ಮತ್ತು ಚಿನ್ನದ ಪಾಲು ಬಹಳ ಹೆಚ್ಚು. ಭಾರತದಲ್ಲಿ ಕರೆಂಟ್ ಅಕೌಂಟ್ ಡೆಫಿಸಿಟ್ ಅಧಿಕ ಮಟ್ಟದಲ್ಲಿದೆ. ಹೀಗಾಗಿ, ಆಮದು ಹೆಚ್ಚಿದಂತೆ ಭಾರತದ ಆಮದು ವೆಚ್ಚವೂ ಹೆಚ್ಚುತ್ತಾ ಹೋಗುತ್ತದೆ. ಸಿಎಡಿ ಅಥವಾ ಕರೆಂಟ್ ಅಕೌಂಟ್ ಡೆಫಿಸಿಟ್ ಕೂಡ ಹಿಗ್ಗುತ್ತಾ ಹೋಗುತ್ತದೆ.

ಇದನ್ನೂ ಓದಿ: ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಫಲ; ಭಾರತದಲ್ಲಿ ಚಿನ್ನದ ಬೆಲೆ ಸದ್ಯದಲ್ಲೇ 20,000 ರೂ ಮುಟ್ಟುತ್ತಾ?

ಒಂದು ಬ್ಯಾರಲ್ ಕಚ್ಚಾ ತೈಲದ ಬೆಲೆಯಲ್ಲಿ ಒಂದು ಡಾಲರ್ ಏರಿದರೆ ಭಾರತದ ವಾರ್ಷಿಕ ಆಮದು ವೆಚ್ಚ 2 ಬಿಲಿಯನ್ ಡಾಲರ್ ಹೆಚ್ಚುವರಿಯಾಗಿ ಹೊರೆ ಬೀಳುತ್ತದೆ. ಅಂದರೆ, ಸುಮಾರು 19,000 ಕೋಟಿ ರೂನಷ್ಟು ಹೆಚ್ಚುವರಿ ಹೊರೆಯನ್ನು ಭಾರತ ಹೊರಕ್ಕೆ.

ಪಶ್ಚಿಮ ಏಷ್ಯಾದ ಮೇಲೆ ತೈಲಕ್ಕೆ ಅವಲಂಬನೆ

ಭಾರತ ತನಗೆ ಬೇಕಾದ ಶೇ. 50ಕ್ಕೂ ಹೆಚ್ಚು ತೈಲವನ್ನು ಇರಾನ್ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಮಾಡಿಕೊಳ್ಳುತ್ತದೆ. ಶೇ. 35-50ರಷ್ಟು ತೈಲವು ಹಾರ್ಮುಜ್ ಜಲಸಂಧಿ ಮೂಲಕ ಬರಬೇಕು. ರಷ್ಯಾ, ಅಮೆರಿಕದಿಂದಲೂ ಭಾರತ ತೈಲ ಪೂರೈಕೆ ಪಡೆಯುವುದರಿಂದ ಕೊಲ್ಲಿ ಪ್ರದೇಶದ ಮೇಲೆ ಹೆಚ್ಚಿನ ಅವಲಂಬನೆ ಇಲ್ಲ ಎಂದು ಸಮಾಧಾನದ ಸಂಗತಿ. ಆದರೂ ಕೂಡ ಹಾರ್ಮುಜ್ ಹಾದಿಗೆ ತಡೆ ಬಿದ್ದರೆ ತೈಲ ಪೂರೈಕೆಯಲ್ಲಿ ವ್ಯತ್ಯಯ ಆಗಿ ಬೆಲೆ ಏರಿಕೆಯಾಗುತ್ತದೆ.

ಇದನ್ನೂ ಓದಿ: ಯುದ್ಧದಿಂದ ತೈಲ ಪೂರೈಕೆ ನಿಂತು ಹೋದರೆ ಭಾರತಕ್ಕೆ ಗತಿ ಏನು? ದೇಶದಲ್ಲಿರುವ ಪೆಟ್ರೋಲ್ ಎಷ್ಟು ದಿನಕ್ಕೆ ಆಗುತ್ತೆ?

ರಷ್ಯಾ ಕೂಡ ತೈಲ ಬೆಲೆ ಹೆಚ್ಚಿಸಿದೆ. ಅಮೆರಿಕದ ತೈಲ ಬೆಲೆಯು ಏರಿಕೆಯಾಗಿದೆ. ಹೀಗಾಗಿ, ಭಾರತ ತೈಲ ಪಡೆಯಲು ಹೆಚ್ಚಿನ ಬೆಲೆ ಸಿಗುವುದು ಅನಿವಾರ್ಯವೇ. ಒಂದು ಅಂದಾಜು ಪ್ರಕಾರ 80 ಡಾಲರ್ ಆಸುಪಾಸು ಇರುವ ತೈಲ ಬೆಲೆ ಮುಂದಿನ ದಿನಗಳಲ್ಲಿ 100 ಡಾಲರ್ ದಾಟಿ 110 ಡಾಲರ್ ಸಮೀಪಕ್ಕೆ ಹೋಗಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *