Headlines

11 ದಿನಗಳ ಕಬ್ಬನ್ ಪಾರ್ಕ್​​ ಪುಷ್ಪಮೇಳಕ್ಕೆ ಚಾಲನೆ: ಕಣ್ಮನ ಸೆಳೆದ ಬಗೆ ಬಗೆಯ ಹೂಗಳು

11 ದಿನಗಳ ಕಬ್ಬನ್ ಪಾರ್ಕ್​​ ಪುಷ್ಪಮೇಳಕ್ಕೆ ಚಾಲನೆ: ಕಣ್ಮನ ಸೆಳೆದ ಬಗೆ ಬಗೆಯ ಹೂಗಳು


ಬೆಂಗಳೂರು, ನವೆಂಬರ್ 27: ಕಬ್ಬನ್ ಪಾರ್ಕ್‌ನಲ್ಲಿ ಇಂದಿನಿಂದ ಡಿ.7ರವರೆಗೆ ನಡೆಯುತ್ತಿದೆ ಫಲಪುಷ್ಪ ಪ್ರದರ್ಶನಕ್ಕೆ ಸಿಎಸ್ ಶಾಲಿನಿ ರಜನೀಶ್ ಚಾಲನೆ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಪ್ರಾರಂಭ, 10 ವರ್ಷಗಳ ಬಳಿಕ ಕಬ್ಬನ್ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಫಲಪುಷ್ಪ ಪ್ರದರ್ಶನಕ್ಕೆ 20ರಿಂದ 25 ಸಾವಿರ ಹೂವು ಕುಂಡಗಳ ಬಳಕೆಯಾಗಿದೆ. ಕಬ್ಬನ್ ಉದ್ಯಾನವನದ ಬ್ಯಾಂಡ್ ಸ್ಟ್ಯಾಂಡ್, ಬಾಲಭವನ
ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಬಳಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆ ತನಕ ವೀಕ್ಷಣೆಗೆ ಅವಕಾಶ ಇರಲಿದೆ. ವಯಸ್ಕರಿಗೆ 30 ರೂ. ಹಾಗೂ ಮಕ್ಕಳಿಗೆ 10 ರೂ. ಟಿಕೆಟ್ ದರ ನಿಗದಿ ಮಾಡಲಾಗಿದೆ. ಸಮವಸ್ತ್ರ ಧರಿಸಿದ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ. ಹೂವಿನ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಪ್ಯಾರಾಚೂಟ್ ರೆಜಿಮೆಂಟ್ ತರಬೇತಿ ಕೇಂದ್ರದಿಂದ ಚಾಲನೆಗೊಂಡ ಆರ್ಮಿ ರೈಫಲ್ಸ್ ಹಾಗೂ ಶಸ್ತ್ರಾಸ್ತ್ರ ನೋಡುರ ಗಮನ ಸೆಳೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *