Headlines

ನೈಜೀರಿಯಾದಲ್ಲಿ ಕುಳಿತು ಬೆಂಗಳೂರು ಮೂಲದ ವ್ಯಕ್ತಿಗೆ ದೋಖಾ: 2.16 ಕೋಟಿ ರೂ. ಮರಳಿಸಿದ್ದು ಗೋಲ್ಡನ್​​ ಅವರ್​​!

ನೈಜೀರಿಯಾದಲ್ಲಿ ಕುಳಿತು ಬೆಂಗಳೂರು ಮೂಲದ ವ್ಯಕ್ತಿಗೆ ದೋಖಾ: 2.16 ಕೋಟಿ ರೂ. ಮರಳಿಸಿದ್ದು ಗೋಲ್ಡನ್​​ ಅವರ್​​!


ಬೆಂಗಳೂರು, ಜನವರಿ 20: ಸೈಬರ್ ವಂಚನೆ ಪ್ರಕರಣಗಳು ಮಾಮೂಲು ಎಂಬಷ್ಟರ ಮಟ್ಟಿಗೆ ಹೆಚ್ಚಿದ್ದು, ಕೋಟಿ ಕೋಟಿ ಹಣ ವಂಚಕರು ಲಪಟಾಯಿಸುವ ಪ್ರಕರಣಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ಯಾವುದಾದರೂ ವಂಚನೆಗೆ ಒಳಗಾದವರು ತುರ್ತಾಗಿ ಈ ಬಗ್ಗೆ ಕೇಸ್ ದಾಖಲಿಸಿದವರು ಕಳೆದುಕೊಂಡ ಹಣವನ್ನು ಮರಳಿ ಪಡೆಯಲು ಪ್ರಕರಣವೊಂದು ದಾಖಲಾಗಿದೆ. ಗೋಲ್ಡನ್ ಅವರ ಕಂಪ್ಲೇಂಟ್ ನೀಡಿದ್ದ ಕಾರಣ ವಂಚಕರ ಪಾಲಾಗುತ್ತಿದ್ದ ಬರೋಬ್ಬರಿ 2.16 ಕೋಟಿ ಹಣ ಮರಳಿ ಕೈಸೇರಿದೆ.

ಘಟನೆ ಏನು?

ಗ್ರೂಪ್ ಫಾರ್ಮ್ ಮತ್ತು ರೆಡ್ಡೀಸ್ ಲ್ಯಾಬೋರೇಟರಿ ಎಂಬ ಕಂಪನಿಗಳ ನಡುವೆ ವ್ಯವಹಾರವಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಖದೀಮರು ನಕಲಿ ಇಮೇಲ್ ಐಡಿ ಮೂಲಕ ಸೈಬರ್ ವಂಚನೆ ನಡೆಸಿದ್ದರು. ಗ್ರೂಪ್ ಫಾರ್ಮ್ ಕಂಪನಿಯ ಅಕೌಂಟೆಂಟ್ ಹೆಸರಲ್ಲಿ ರೆಡ್ಡೀಸ್ ಲ್ಯಾಬೋರೇಟರಿಗೆ ಇಮೇಲ್ ಬಂದಿದೆ, ಇದನ್ನು ಗಮನಿಸಿದ ರೆಡ್ಡೀಸ್ ಲ್ಯಾಬೋರೇಟರಿ 2.16 ಕೋಟಿ ರೂಪಾಯಿ ಹಣವನ್ನು ಪೇಮೆಂಟ್ ಮಾಡಿತ್ತು. ಹಣ ಪಾವತಿ ವಿಚಾರ ಗೊತ್ತಾಗಿದ್ದೇ ತಡ ಗ್ರೂಪ್ ಫಾರ್ಮಾ ಅಕೌಂಟೆಂಟ್ ಈ ಬಗ್ಗೆ ದೂರು ದಾಖಲಿಸಿದ್ದರು. ನೈಜೀರಿಯಾದಲ್ಲಿ ಕುಳಿತ ವಂಚಕನೋರ್ವ ನೀಡಿದ್ದ ಸ್ಥಳೀಯ ಮಹಿಳೆ ಪಟೇಲ್ ದಾಕ್ಷ್ಯಾ ಬೆನ್ ಹೆಸರಿನ ನಕಲಿ ಖಾತೆಗೆ ಹಣ ವರ್ಗಾವಣೆ ಆಗಿರೋದು ತನಿಖೆ ವೇಳೆ ಗೊತ್ತಾಗಿತ್ತು.

ಇದನ್ನೂ ಓದಿ: ಸೈಬರ್ಮ್ ಬಗ್ಗೆ ದೂರು ನೀಡುವುದು ಹೇಗೆ?; 24 ಗಂಟೆಗಳ ಕಾಲ ತೆರೆದಿರುತ್ತೆ ಈ ಪೋರ್ಟಲ್

ಇನ್ನು ಈ ಬಗ್ಗೆ ಮಾಹಿತಿ ಸಿಕ್ಕಿದ್ದೇ ತಡ ದೂರು ಪಡೆದ ಒಂದೇ ಗಂಟೆಯಲ್ಲಿ ಅಕೌಂಟ್ ಜಾಲಾಡಿದ್ದ ಸೈಬರ್ ಕ್ರೈಂ ಪೊಲೀಸರು, ಹಣ ವರ್ಗಾವಣೆಯಾಗದಂತೆ ಅಕೌಂಟ್ ಫ್ರೀಜ್ ಮಾಡಿದ್ದರು. ಬಳಿಕ ಕೋರ್ಟ್ ಮೂಲಕ 2.16 ಕೋಟಿ ಹಣ ಬಿಡುಗಡೆಗೆ ಆದೇಶ ಪಡೆದು, ಹಣವನ್ನ ವಾಪಸ್ ನೀಡಲಾಗಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್, ಸೈಬರ್ ವಂಚನೆ ಬಗ್ಗೆ ಡಿಸೆಂಬರ್ ನಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದು 30 ನಿಮಿಷಗಳಲ್ಲಿ ನಮಗೆ ದೂರು ಬಂದಿದ್ದು, ಈ ಗೋಲ್ಡನ್ ಅವರ ಕಂಪ್ಲೇಂಟ್ ಕೊಟ್ಟರೆ ಅಕೌಂಟ್ ಫ್ರೀಜ್ ಆಗಬಹುದು. ಜೊತೆಗೆ ಪ್ರಕರಣ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಅಕೌಂಟ್ ಹೋಲ್ಡರ್, ಅಕೌಂಟ್ ಕ್ರಿಯೇಟರ್ ಬಗ್ಗೆ ಪರಿಶೀಲನೆ ಮಾಡಲಾಗಿತ್ತು ಎಂದು.

ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *