ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ಡಿಸಿಎಂ ದೆಹಲಿ ಪ್ರವಾಸ: ಡಿ.ಕೆ. ಶಿವಕುಮಾರ್​ ನಡೆಯೇ ಕುತೂಹಲ

ಬಜೆಟ್ ಪೂರ್ವಭಾವಿ ಸಭೆ ಬಿಟ್ಟು ಡಿಸಿಎಂ ದೆಹಲಿ ಪ್ರವಾಸ: ಡಿ.ಕೆ. ಶಿವಕುಮಾರ್​ ನಡೆಯೇ ಕುತೂಹಲ


ಬೆಂಗಳೂರು, ಫೆಬ್ರವರಿ 09: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿರುವ ಬಜೆಟ್ ಪೂರ್ವಭಾವಿ ಸಭೆಯನ್ನು ಬಿಟ್ಟು ದೆಹಲಿಗೆ ಪ್ರಯಾಣ ಬೆಳೆಸುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಪ್ರಿಯಾಂಕಾ ಗಾಂಧಿ ಅವರು ಅಸ್ಸಾಂ ಚುನಾವಣೆಗೆ ಕರೆದಿರುವ ಸಭೆಯಲ್ಲಿ ಭಾಗವಹಿಸಿದ ಡಿ.ಕೆ. ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಾರೆ. ಆದರೆ, ಈ ಭೇಟಿಯು ಕೇವಲ ಚುನಾವಣಾ ಸಭೆಯ ಕಾರಣಕ್ಕೆ ಸೀಮಿತವಾಗಿಲ್ಲ, ಬದಲಾಗಿ ರಾಜ್ಯ ರಾಜಕಾರಣದಲ್ಲಿ ಪರೋಕ್ಷ ಸಂದೇಶ ರವಾನಿಸುವ ಉದ್ದೇಶವಿದೆ ಎಂದು ವಿವರಿಸಲಾಗಿದೆ. ಬಜೆಟ್ ಸಿದ್ಧತೆಗೆ ವಿರೋಧ ಹಾಗೂ ತಮ್ಮ ನಾಯಕತ್ವದ ಮಹತ್ವಾಕಾಂಕ್ಷೆಯನ್ನು ಹೈಕಮಾಂಡ್‌ಗೆ ಮತ್ತು ಬೆಂಬಲಿಗರಿಗೆ ತಲುಪಿಸುವ ಪ್ರಯತ್ನವಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *