ಸಿಎಂ ಸ್ಥಾನಕ್ಕಾಗಿ ಸಚಿವರಿಗೆ ಬಿಗ್​ ಆಫರ್​ ಕೊಟ್ರಾ ಡಿ.ಕೆ. ಶಿವಕುಮಾರ್​?

ಸಿಎಂ ಸ್ಥಾನಕ್ಕಾಗಿ ಸಚಿವರಿಗೆ ಬಿಗ್​ ಆಫರ್​ ಕೊಟ್ರಾ ಡಿ.ಕೆ. ಶಿವಕುಮಾರ್​?


ಬೆಂಗಳೂರು, ನವೆಂಬರ್ 24: ಸಿಎಂ ಕುರ್ಚಿಗಾಗಿ ಪೈಪೋಟಿ ನಡೆಸುತ್ತಿರೋ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಸ್ಟ್ರಾಟಜಿ ಏನು ಎಂಬ ವಿಶೇಷ ಮಾಹಿತಿ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಸಿಎಲ್ಪಿ ಕರೆದರೆ ಏನು ಮಾಡಬೇಕು ಎಂಬ ಸಭೆಯೂ ಡಿಕೆಶಿ ಪ್ಲ್ಯಾನ್ ರೆಡಿಯಾಗಿದೆ. ಕಳೆದ ಬಾರಿ ಶಾಸಕಾಂಗ ಪಕ್ಷದ ಶಾಸಕರಿಂದ ಮತದಾನ ನಡೆದಿತ್ತು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರ ಶಾಸಕರು ಮತ ಚಲಾಯಿಸಿದ್ದರು. ಈ ವೇಳೆ ಸಿದ್ದರಾಮಯ್ಯ ಹೆಚ್ಚಿನ ಶಾಸಕರ ಬೆಂಬಲ ಪಡೆದಿದ್ದರು. ಆದರೆ ಅಂದು ಬಹಿರಂಗವಾಗಿ ಮತದಾನ ನಡೆದಿದ್ದು, ಯಾವ ಶಾಸಕರು ಯಾರ ಪರ ಎಂಬುದು ಗೊತ್ತಾಗಿತ್ತು. ಹೀಗಾಗಿ ಈ ಬಾರಿ ಸ್ಥಿತಿ ಮತಕ್ಕೆ ಹಾಕುವ ಹಂತ ತಲುಪಿದರೆ CLP ನಾಯಕನ ಆಯ್ಕೆಗೆ ಗೌಪ್ಯ ಮತದಾನ ನಡೆಸುವಂತೆ ಪಟ್ಟು ಹಿಡಿಯಲು ಡಿಕೆಶಿ ಬಣ ಪ್ಲ್ಯಾನ್ ಮಾಡಿದೆ. ಗೌಪ್ಯ ಮತದಾನ ನಡೆದರೆ ಹೆಚ್ಚು ಶಾಸಕರ ಬೆಂಬಲದ ಲೆಕ್ಕಾಚಾರ ಇವರದ್ದಾಗಿದ್ದು, 60ಕ್ಕೂ ಹೆಚ್ಚು ಶಾಸಕರ ಬೆಂಬಲ ಸಿಗಬಹುದೆಂಬ ನಿರೀಕ್ಷೆಯಲ್ಲಿ ಡಿಕೆಶಿ ಇದ್ದಾರೆ. ಹೀಗಾಗಿ ಒಬ್ಬೊಬ್ಬ ಶಾಸಕರನ್ನೂ ವಿಶ್ವಾಸಕ್ಕೆ ಪಡೆಯಲು ಯತ್ನ ನಡೆಸಿದ್ದು, ಸಚಿವರ ಮೇಲಿಂದ ಹಲವರಿಗೆ ಸಚಿವ ಸ್ಥಾನ ಮುಂದುವರಿಕೆಯ ಆಫರ್ ನೀಡಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *