
ಡಾಲಿ ಧನಂಜಯ್ (ಡಾಲಿ ಧನಂಜಯ್) ನಟ ಹಾಗೂ ನಿರ್ಮಾಪಕರಾಗಿ ಸದಾ ಹೊಸತನಕ್ಕೆ ತುಡಿಯುವ ವ್ಯಕ್ತಿ. ಸೀಮಿತ ಬಜೆಟ್ನಲ್ಲಿ ಹೊಸ ರೀತಿಯ ಕತೆಗಳನ್ನು ಹೇಳುತ್ತಲೇ ಬರುತ್ತಿದೆ. ತಾವು ನಿರ್ಮಾಣ ಮಾಡುವ ಜೊತೆಗೆ ಸಿನಿಮಾದ ಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಭಾವಂತರಿಗೆ ವೇದಿಕೆ ಕಲ್ಪಿಸುತ್ತಾ ಬರುತ್ತಿದ್ದಾರೆ. ‘ಬಡವರ ಮಕ್ಕಳು ಬೆಳಗಬೇಕು’ ಎಂಬ ಮಾತಿಗೆ ಬದ್ಧವಾಗಿ ನಡೆದುಕೊಳ್ಳುತ್ತಾ ಸಾಗಿದ್ದಾರೆ. ಕೆಲ ದಿನಗಳ ಕಾಲ ‘ಹೆಗ್ಗಣ ಮುದ್ದು’ ಸಿನಿಮಾ ಪ್ರಕಟಿಸಿದ ಡಾಲಿ ಧನಂಜಯ್ ಇದೀಗ ಮತ್ತೊಂದು ಹೊಸ ಸಿನಿಮಾವನ್ನು ತಮ್ಮ ನಿರ್ಮಾಣ ಸಂಸ್ಥೆಯಿಂದ ಘೋಷಿಸಿದ್ದು, ಈ ಸಿನಿಮಾಕ್ಕೆ ಡಾಲಿಯ ಎಲ್ಲ ಗೆಳೆಯರು ಒಂದಾಗಿದ್ದಾರೆ.
ಡಾಲಿ ಧನಂಜಯ್ ಮತ್ತು ಅವರ ಮೈಸೂರಿನ ಗೆಳೆಯರು ಕೆಇಬಿ ಹೆಸರಿನ ಯೂಟ್ಯೂಬ್ ಚಾನೆಲ್ ಮಾಡಿ ತಮಾಷೆಯ, ಜಾಗೃತಿಯ ಕಾಂಟೆಂಟ್ ಹಂಚಿಕೊಂಡರು. ಇದೀಗ ಆ ಕೆಇಬಿ ಮತ್ತು ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ಜೊತೆಯಾಗಿ ಹೊಸ ಸಿನಿಮಾ ಘೋಷಣೆ ಮಾಡಿದ್ದು, ಕೆಲ ದಿನಗಳ ಹಿಂದಷ್ಟೇ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್ನಲ್ಲಿ ಯಾರ ಮುಖವನ್ನೂ ತೋರಿಸಲಿಲ್ಲ, ಬದಲಿಗೆ ನಟರೆಲ್ಲ ಕ್ಯಾಮೆರಾ ಆಗಿ ನಿಂತಿದ್ದರು. ಸಿನಿಮಾದ ಹೆಸರನ್ನು ಸಹ ಬೇರೆ ಬೇರೆ ಭಾಷೆಗಳಲ್ಲಿ ನೀಡಲಾಯಿತು. ಜೊತೆಗೆ ಸಿನಿಮಾದ ಹೆಸರು ಗೆಸ್ ಮಾಡಿ ಎಂಬ ಸವಾಲನ್ನು ಸಹ ಚಿತ್ರತಂಡವು ಚಿತ್ರಕ್ಕೆ ನೀಡಿತ್ತು.
ಇದನ್ನೂ ಓದಿ: ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?
ಇದೀಗ ಎಲ್ಲ ನಟರ ಮುಖವನ್ನು ತೋರಿಸಲಾಗಿದೆ, ಜೊತೆಗೆ ಸಿನಿಮಾದ ಹೆಸರನ್ನು ಸಹ ಅನಾವರಣ ಮಾಡಲಾಗಿದೆ. ಡಾಲಿ ಪಿಕ್ಚರ್ಸ್ ಮತ್ತು ಕೆಇಬಿ ಒಟ್ಟಿಗೆ ಪ್ರೆಸೆಂಟ್ ಮಾಡುತ್ತಿರುವ ಈ ಸಿನಿಮಾದ ಹೆಸರು ‘ಮದರ್ ಪ್ರಾಮಿಸ್’ ಕನ್ನಡದಲ್ಲಿ ಹೇಳುವುದಾದರೆ ‘ತಾಯಾಣೆ’. ಸಿನಿಮಾದ ಪೋಸ್ಟರ್ ನೋಡಿದರೆ ಇದು ಹಾಸ್ಯಮಯ, ಭಾವುಕ ಜೊತೆಗೆ ಥ್ರಿಲ್ಲರ್ ಅಂಶವೂ ಇರುವ ಕತೆ ಎನಿಸುತ್ತದೆ.
ಮೈಸೂರು ಪೂರ್ಣ ಈ ಸಿನಿಮಾದ ಚಿತ್ರಕತೆ ಬರೆದಿದ್ದು, ಅವರ ನಿರ್ದೇಶನವನ್ನೂ ಮಾಡಲಿದ್ದಾರೆ. ಸಿನಿಮಾದಲ್ಲಿ ಮೈಸೂರು ಪೂರ್ಣ, ನಾಗಭೂಷಣ, ವಿನಯಾ ಪ್ರಸಾದ್, ಡಾಲಿ ಧನಂಜಯ್, ಗುರುದತ್ ಇವರ ಜೊತೆಗೆ ಇನ್ನೂ ಹಲವು ಜನಪ್ರಿಯ ಹಾಸ್ಯ ನಟರು ಸಹ ಸಿನಿಮಾದಲ್ಲಿ ನಟಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ