
ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ‘ದಾದಾಸಹೇಬ್ ಫಾಲ್ಕೆ’ ಸಿನಿಮಾ ನಿರ್ದೇಶನದ ಬದಲು ಪ್ರೆಸೆಂಟ್ ಮಾಡಲು ಮುಂದಾದರು. ಈ ಚಿತ್ರವನ್ನು ನಿತಿನ್ ಕಕ್ಕರ್ ನಿರ್ದೇಶನ ಮಾಡಬೇಕಿತ್ತು. ಈ ಚಿತ್ರದಲ್ಲಿ ದಾದಾಸಾಹೇಬ್ ಫಾಲ್ಕೆ ಪಾತ್ರದಲ್ಲಿ ಜೂನಿಯರ್ ಎನ್ ಟಿಆರ್ ನಟಿಸಿದ್ದರು. ಈಗ ಸಿನಿಮಾ ನಿಂತಿದೆ ಎಂಬ ಸುದ್ದಿಯು ಹರಿದಾಡಿದೆ. ಹೀಗಿರುವಾಗಲೇ ಹಿರಾನಿ ನಿರ್ದೇಶನ ಮಾಡಬೇಕಿದ್ದ ಚಿತ್ರವೂ ನಿಂತಿದೆಯಂತೆ.
ದಾದಾಸಾಹೇಬ್ ಫಾಲ್ಕೆ ಸಿನಿಮಾ ಮಾಡುವ ವಿಚಾರದಲ್ಲಿ ಸ್ಪರ್ಧೆ ಏರ್ಪಟ್ಟಿತ್ತು ಎಂದರೂ ತಪ್ಪಾಗಲಾರದು. ನಿತಿನ್ ಅವರು ಈ ಸಿನಿಮಾ ಮಾಡಲು ಆಸಕ್ತಿ ತೋರಿಸಿದ್ದರೋ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಇದೇ ವಿಷಯವನ್ನು ಇಟ್ಟುಕೊಂಡು ಬಯೋಪಿಕ್ ಮಾಡಲು ನಿರ್ಧರಿಸಿದ್ದರು. ಈ ಚಿತ್ರಕ್ಕೆ ಅಮೀರ್ ಖಾನ್ ಹೀರೋ. ಆದರೆ, ಈಗ ಈ ಚಿತ್ರವೂ ಈಗ ನಿಂತಿದೆಯಂತೆ.
ಫಾಲ್ಕೆ ಕುಟುಂಬ ರಾಜ್‌ಕುಮಾರ್ ಹಿರಾನಿ ಪರವಾಗಿ ನಿಂತಿತ್ತು. ಅವರ ಸಿನಿಮಾನ ಕುಟುಂಬ ಬೆಂಬಲಿಸಿತ್ತು. ರಾಜಮೌಳಿ ವರ್ಷನ್‌ಗೆ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ, ರಾಜಮೌಳಿ ಸಿನಿಮಾ ನಿಂತಿದೆ. ಈಗ ಹಿರಾನಿ ಸಿನಿಮಾ, ಸ್ಕ್ರಿಪ್ಟ್ ಕಾರಣದಿಂದ ನಿಂತು ಹೋಗಿದೆ ಎನ್ನುತ್ತಿದ್ದಾರೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಇಂದಿನ ಸಿನಿಮಾದ ಮನರಂಜನೆಯ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿದೆ. ಬಯೋಪಿಕ್ ಮಾಡುವುದಾದರೂ ಅಲ್ಲಿ ಮಸಾಲೆ ಬೇಕು. ರಾಜ್‌ಕುಮಾರ್ ಹಿರಾನಿ ಸ್ಕ್ರಿಪ್ಟ್ ಆಮಿರ್‌ಗೆ ಡ್ರೈ ಎನಿಸಿದೆಯಂತೆ. ರಾಜ್ ಹಿರಾನಿ ಸಿನಿಮಾಗಳಲ್ಲಿ ಹಾಸ್ಯ ಪ್ರಧಾನ ಆಗಿದ್ದಾರೆ. ಆದರೆ, ಈ ಸ್ಕ್ರಿಪ್ಟ್‌ನಲ್ಲಿ ಅದು ಕಾಣಿಸದ ಕಾರಣ, ಸಿನಿಮಾದ ಹಿಂದೆ ಸರಿಯುವ ನಿರ್ಧಾರಕ್ಕೆ ಅಮೀರ್ ಬಂದಿದ್ದಾರಂತೆ. ಇದು ಚಿತ್ರ ನಿಂತಿದೆ. ಈಗ ರಾಜಮೌಳಿ ಅವರು ಫಾಲ್ಕೆ ಕುಟುಂಬವನ್ನು ಸಂಪರ್ಕಿಸುತ್ತಾರಾದರೂ ಕಾದು ನೋಡಬೇಕಾಗಿದೆ.
ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಿ ಗೆದ್ದರೇ ಅಮೀರ್ ಖಾನ್, ಗಳಿಸಿದ್ದೆಷ್ಟು?
ಅಮೀರ್ ಖಾನ್ ಹಾಗೂ ಹಿರಾನಿ ‘3 ಈಡಿಯಟ್ಸ್ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದರ ಜೊತೆಗೆ ‘ಪಿಕೆ’ ಸಿನಿಮಾ ಕೂಡ ಮಾಡಿತ್ತು. ಎರಡೂ ಸಿನಿಮಾಗಳು ಸೂಪರ್ ಹಿಟ್ ಆದವು. ಈ ಎನರ್ಜಿಯನ್ನು ಮ್ಯಾಚ್ ಮಾಡಲು ಮತ್ತೊಮ್ಮೆ ಸಾಧ್ಯವಾಗೋದು ಅನುಮಾನವೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.