ಬೆಂಗಳೂರು, ಫೆಬ್ರವರಿ 22: TV9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಹೋಮದ ಬಳಿಕ ಅದರ ತಿಲಕಧಾರಣೆಯಿಂದ ಆಗುವ ಲಾಭಗಳೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಹೋಮ ತಿಲಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ಅಗತ್ಯ. ಕೇಸರಿ, ಚಂದನ, ವಿಭೂತಿ, ಗಂಧ ಇತ್ಯಾದಿಗಳನ್ನು ಹಣೆಗೆ ಧರಿಸುವ ಪದ್ಧತಿಯಲ್ಲಿ ಹೋಮದ ತಿಲಕ ಅತ್ಯಂತ ವಿಶೇಷವಾಗಿದೆ. ಗಣಹೋಮ, ಚಂಡಿ ಹೋಮ, ಮೃತ್ಯುಂಜಯ ಹೋಮ, ಸುದರ್ಶನ ಹೋಮ ಸೇರಿದಂತೆ ಯಾವುದೇ ಹೋಮದ ಬಳಿಕ ದೊರೆಯುವ ತಿಲಕವನ್ನು ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವವರೆಗೆ ಧರಿಸಬಹುದು. ಇದು ಸುಮಾರು ಒಂದು ತಿಂಗಳ ಅವಧಿಯಾಗಿರುತ್ತದೆ. ನಂತರ ಇದನ್ನು ನೀರಿಗೆ ಅರ್ಪಿಸಬಹುದು ಅಥವಾ ತುಳಿಯದ ಜಾಗದಲ್ಲಿ ಇಡಬಹುದು.
ತಿಲಕವನ್ನು ಹಣೆಗೆ ಧರಿಸುವುದರಿಂದ ಆಜ್ಞಾ ಚಕ್ರ ಜಾಗೃತವಾಗುತ್ತದೆ. ಇದು ದೈವಿಕ ಶಕ್ತಿಯ ಸಂಕೇತವಾಗಿದೆ, ಸಾತ್ವಿಕ ಗುಣಗಳನ್ನು ಹೊಂದಿದೆ. ಹೋಮದ ಭಸ್ಮದಲ್ಲಿರುವ ತುಪ್ಪ, ಸಕ್ಕರೆಗಳು ಮತ್ತು ಸವಿತ್ತುಗಳು ಔಷಧೀಯ ಗುಣಗಳನ್ನು ಹೊಂದಿವೆ. ಈ ಭಸ್ಮವನ್ನು ಹಣೆಗೆ ತೆಗೆದುಕೊಳ್ಳುವುದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗಿ, ಆಲೋಚನಾ ಶಕ್ತಿ ವೃದ್ಧಿ ಹಾಗೂ ಮಾನಸಿಕ ಒತ್ತಡ ಕಡಿಮೆಯಾಗುತ್ತವೆ. ಇದು ಧನಾತ್ಮಕ ಶಕ್ತಿಯನ್ನು ನೀಡಿ, ನಮ್ಮ ಜೀವನದ ವಿವಿಧ ಕ್ಷೇತ್ರಗಳಿಗೆ ಶುಭ ಫಲಗಳನ್ನು ನೀಡುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.