
ಟಿವಿ9’ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ದೋಷ ನಿವಾರಣೆಗೆ ಹೋಮಗಳನ್ನು ಮನೆಯಲ್ಲಿ ಮಾಡಬೇಕೇ, ದೇವಸ್ಥಾನದಲ್ಲಿ ಮಾಡಬೇಕೇ?ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ.ಬದುಕಿನಲ್ಲಿನ ಸಂಕಷ್ಟಗಳು ಎದುರಾದಾಗ, ದಿಕ್ಕು ತೋಚದಂತಾಗ, ಸಾಡೇಸಾತಿ, ಅರ್ಧಾಷ್ಟಮ, ಕರ್ಮ ಫಲಗಳಂತಹ ಸಮಸ್ಯೆಗಳಿಂದ ಬಳಲುತ್ತಿರುವಾಗ, ಅಥವಾ ಯಾವುದೇ ವೈಫಲ್ಯಗಳು ಕಾಡಿದಾಗ, ಮನುಷ್ಯ ದೈವಿಕ ಕಾರ್ಯಗಳನ್ನು ಎದುರಿಸುತ್ತಾನೆ. ಹೋಮ, ಹವನ, ಪೂಜೆಗಳಿಗೆ ಪರಿಹಾರ ಎಂಬ ನಂಬಿಕೆ ಇದೆ. ಆದರೆ, ಹೋಮಗಳನ್ನು ಮನೆಯಲ್ಲಿ ಮಾಡುವುದು ಉತ್ತಮವೇ ಅಥವಾ ದೇವಸ್ಥಾನಗಳಲ್ಲಿ ಮಾಡುವುದು ಶ್ರೇಷ್ಠವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಭವಿಸುತ್ತದೆ ಎಂದು ಗುರೂಜಿ ಹೇಳಿದ್ದಾರೆ.
ಅಭಿವೃದ್ಧಿಗಾಗಿ, ಶ್ರೇಯಸ್ಸಿಗಾಗಿ, ಆರೋಗ್ಯಕ್ಕಾಗಿ ಅಥವಾ ಸಮೃದ್ಧಿಗಾಗಿ ಮಾಡುವ ಹೋಮಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದು ಸೂಕ್ತ. ಉದಾಹರಣೆಗೆ, ವಾಸ್ತು ಪೂಜೆ, ಗಣಹೋಮ, ಸತ್ಯನಾರಾಯಣ ಸ್ವಾಮಿ ಹೋಮಗಳನ್ನು ಮನೆಯಲ್ಲಿ ಮಾಡಬಹುದು. ಆದರೆ, ಸರ್ಪದೋಷ, ಮೃತ್ಯುದೋಷ, ಗ್ರಹದೋಷಗಳಂತಹ ದೋಷ ನಿವಾರಣಾ ಹೋಮಗಳು ಮತ್ತು ಶಾಂತಿ ಪೂಜೆಗಳನ್ನು ಸಂಬಂಧಪಟ್ಟ ದೇವಾಲಯಗಳಲ್ಲಿ ಮಾಡುವುದು ಹೆಚ್ಚು ಫಲಪ್ರದವಾಗಿದೆ ಎಂದು ಡಾ. ಬಸವರಾಜ್ ಗುರೂಜಿಯ ಸಲಹೆ.