Daily Devotional: ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಏನಾಗುತ್ತೆ ಗೊತ್ತಾ?

Daily Devotional: ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಏನಾಗುತ್ತೆ ಗೊತ್ತಾ?


ಬೆಂಗಳೂರು, ಫೆಬ್ರುವರಿ 06: TV9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡಿದರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಅವರು ಹೇಳುವಂತೆ ನಮ್ಮ ಸನಾತನ ಧರ್ಮದಲ್ಲಿ ಋಣಾನುಬಂಧವು ಜೀವನದ ಎಲ್ಲ ಸಂಬಂಧಗಳಿಗೆ ಆಧಾರವಾಗಿದೆ. ಆಹಾರವು ಕೇವಲ ಹಸಿವನ್ನು ನೀಗಿಸದೆ, ದೇಹ, ಮನಸ್ಸು, ಭಾವನೆಗಳು ಮತ್ತು ಆಲೋಚನೆಗಳ ಮೇಲೆ ಆಳವಾದ ಪ್ರಭಾವವನ್ನು ಹೊಂದಿದೆ ಎಂದು ಹೇಳುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರವೂ ನಾವು ಸೇವಿಸುವ ಆಹಾರವು ನಮ್ಮ ಶಾಂತಿ ಮತ್ತು ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ.

ಅನ್ನವನ್ನು ಪರಬ್ರಹ್ಮ ಸ್ವರೂಪ ಮತ್ತು ಪ್ರಾಚೀನ ಕಾಲದಲ್ಲಿ ಆಹಾರ ಸೇವನೆಗೆ ಅನೇಕ ನಿಯಮಗಳು ಇದ್ದವು. ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ಊಟ ಮಾಡುವುದು ಅಷ್ಟು ಶುಭ ಅಥವಾ ಸಮಂಜಸವಲ್ಲ ಎಂದು ತಿಳಿಸಲಾಗಿದೆ. ಬದಲಿಗೆ, ಗಂಡ ಊಟ ಮಾಡಿದ ನಂತರ ಹೆಂಡತಿ ಅದೇ ತಟ್ಟೆಯಲ್ಲಿ ಊಟ ಮಾಡುವ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವುದು ಹೆಚ್ಚು ಸೂಕ್ತ. ಒಂದೇ ತಟ್ಟೆಯಲ್ಲಿ ಊಟ ಮಾಡುವುದರಿಂದ ದಂಪತಿಗಳಿಗೆ ಅಷ್ಟು ಶ್ರೇಯಸ್ಕರವಾಗುವುದಿಲ್ಲ ಮತ್ತು ಅನ್ನಪೂರ್ಣ ದೇವಿಗೂ ಸಮಾಧಾನವಾಗುವುದಿಲ್ಲ ಎಂಬ ನಂಬಿಕೆಯಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *