ಬೆಂಗಳೂರು, ಜನವರಿ 25: ರಥಸಪ್ತಮಿಯು ಹಿಂದೂ ಧರ್ಮದ ಮಹಾ ಪರ್ವ ಕಾಲಗಳಲ್ಲಿ ಒಂದಾಗಿದ್ದರೆ, ಜಗದ ಚಕ್ಷು ಹಾಗೂ ಬ್ರಹ್ಮಾಂಡದ ಶಕ್ತಿ ಸೂರ್ಯ ಭಗವಾನರ ಜನ್ಮದಿನವಾಗಿ ಆಚರಿಸದಿದ್ದರೆ. ಮಾಘ ಮಾಸದ ಶುಕ್ಲಪಕ್ಷದ ಏಳನೇ ದಿನವಾದ ಸಪ್ತಮಿಯಂದು ಈ ವಿಶೇಷ ಆಚರಣೆ ನಡೆಯುತ್ತಿದೆ. ಈ ದಿನ ಸೂರ್ಯನ ಲಹರಿಗಳು ಇಡೀ ಬ್ರಹ್ಮಾಂಡದ ಮೇಲೆ ವಿಶೇಷ ಪ್ರಭಾವ ಬೀರುತ್ತವೆ ಎಂದು ನಂಬಲಾಗಿದೆ. ರಥಸಪ್ತಮಿ ದಿನದಂದು ಆಚರಿಸಬೇಕಾದ ಪ್ರಮುಖ ವಿಧಾನಗಳಲ್ಲಿ ಏಳು ಎಕ್ಕದ ಎಲೆಗಳನ್ನು ತಲೆ, ಮೊಣಕಾಲು ಮತ್ತು ಪಾದಗಳ ಮೇಲೆ ಇಟ್ಟುಕೊಂಡು ಸೂರ್ಯನ ಸ್ಮರಣಾರ್ಥವಾಗಿ ಸ್ನಾನ ಮಾಡುವುದು. ಈ ಸ್ನಾನವು ಆಯುರಾರೋಗ್ಯ, ಐಶ್ವರ್ಯ, ಉತ್ಪನ್ನ ಮತ್ತು ಧನಾತ್ಮಕ ಶಕ್ತಿಯನ್ನು ನೀಡಿ, ಮಾಟಮಂತ್ರ, ಕೆಟ್ಟ ಶಕ್ತಿಗಳನ್ನು ದೂರ ಮಾಡುತ್ತದೆ. ಜನ್ಮದ ಪಾಪಗಳನ್ನು ಕಳೆದು ಮನಸ್ಸನ್ನು ಶುದ್ಧೀಕರಿಸಿದ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.