ಬೆಂಗಳೂರು, ಫೆಬ್ರುವರಿ 03: ಅಂಗಶಾಸ್ತ್ರದ ಪ್ರಕಾರ, ನಮ್ಮ ದೇಹದ ಅಂಗಗಳು ವ್ಯಕ್ತಿತ್ವ ಮತ್ತು ಅದೃಷ್ಟದ ಬಗ್ಗೆ ಹಲವು ವಿಷಯಗಳನ್ನು ಹೇಳುತ್ತವೆ. ಅದರಲ್ಲೂ ಹೆಬ್ಬೆರಳಿಗಿಂತ ಉದ್ದವಾದ ಎರಡನೇ ಕಾಲ್ಬೆರಳನ್ನು ಹೊಂದಿರುವವರು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಇಂತಹ ವ್ಯಕ್ತಿಗಳು ಸೂಕ್ಷ್ಮ ಬುದ್ಧಿಯುಳ್ಳವರಾಗಿರುತ್ತಾರೆ ಮತ್ತು ಸನ್ನಿವೇಶಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಆದರೂ, ಇವರು ಸ್ವಲ್ಪ ಮುಂಗೋಪಿಗಳಾಗಿರಬಹುದು ಈ ಬಗ್ಗೆ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ.
ಜೀವನದ ಅದೃಷ್ಟವನ್ನು ಗಮನಿಸಿದಾಗ, ಅವರಿಗೆ 50-50ರಷ್ಟು ಅದೃಷ್ಟ ಇರುತ್ತದೆ. ಆರಂಭಿಕ 50% ಅಥವಾ ಇತರ ವಿದ್ಯಾಭ್ಯಾಸ, ವಿವಾಹ ಹೊಂದಾಣಿಕೆಗಳಲ್ಲಿ ಸಣ್ಣ ಮಟ್ಟದ ಸಮಸ್ಯೆಗಳನ್ನು ಎದುರಿಸಬಹುದು. ನಂತರದ 50% ಆದರೆ ಎಲ್ಲ ಕ್ಷೇತ್ರಗಳಲ್ಲಿಯೂ ಯಶಸ್ಸು ಗಳಿಸುತ್ತಾರೆ. ಈ ಬೆರಳನ್ನು ಚಂದ್ರನ ಬೆರಳು ಎಂದೂ ಕರೆಯಲಾಗುತ್ತದೆ. ಇವರಿಗೆ ಪ್ರಯಾಣ, ಹೊಸ ಕ್ಷೇತ್ರಗಳ ಭೇಟಿ ಮತ್ತು ಕುತೂಹಲ ಹೆಚ್ಚು. ರಾಜಕೀಯ ಸ್ಥಾನಮಾನ ಮತ್ತು ಸತತ ಸಾಧಕರಾಗುವ ಯೋಗವೂ ಇರುತ್ತದೆ. ಇಂತಹ ವ್ಯಕ್ತಿಗಳು ಕೋಪ ಮತ್ತು ಊಹಾಪೋಹಗಳನ್ನು ನಿಯಂತ್ರಿಸಿದರೆ ಹೆಚ್ಚಿನ ಶುಭ ಫಲಗಳನ್ನು ಪಡೆಯುತ್ತಾರೆ ಎಂದು ಶಾಸ್ತ್ರಗಳು ಹೇಳುತ್ತವೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.