ಬೆಂಗಳೂರು, ಫೆಬ್ರವರಿ 21: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಮತ್ತು ಸನಾತನ ಧರ್ಮದಲ್ಲಿ, ಚಪ್ಪಾಳೆ ಕೇವಲ ಸದ್ದು ಮಾಡುವ ಕ್ರಿಯೆಯಲ್ಲಿದೆ, ವಿಶೇಷ ಆಧ್ಯಾತ್ಮಿಕ ಹಾಗೂ ಕಾರ್ಯಪ್ರವೃತ್ತವಾಗಿದೆ.
ಚಪ್ಪಾಳೆಯನ್ನು ಸಂತೋಷ, ಯಶಸ್ಸು, ವಿಜಯ, ಪ್ರೋತ್ಸಾಹ ಮತ್ತು ಮೆಚ್ಚುಗೆಗಾಗಿ ನೀಡಲಾಗುತ್ತದೆ. ಭಜನೆ, ದೇವರ ಆರಾಧನೆ ಮತ್ತು ಸಂಕೀರ್ತನೆಗಳ ಸಮಯದಲ್ಲಿ ಚಪ್ಪಾಳೆ ತಟ್ಟುವುದರಿಂದ ಮನಸ್ಸು ಏಕಾಗ್ರವಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ಧನಾತ್ಮಕ ಶಕ್ತಿಯನ್ನು ಮತ್ತು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಚಪ್ಪಾಳೆಯು ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಮೂಡಿಸುತ್ತದೆ. ಆದರೆ ಅಪಹಾಸ್ಯ, ವ್ಯಂಗ್ಯ, ಅವಮಾನ ಅಥವಾ ಶೋಕದ ಸಮಯದಲ್ಲಿ ಚಪ್ಪಾಳೆ ತಟ್ಟಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಉಂಟುಮಾಡಬಹುದು. ಸರಿಯಾದ ಸಂದರ್ಭದಲ್ಲಿ ಚಪ್ಪಾಳೆ ತಟ್ಟುವುದರಿಂದ ಆಯುಷ್ಯ ವೃದ್ಧಿಯಾಗಿ, ಧನಾತ್ಮಕ ಶಕ್ತಿ ದೊರೆಯುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.