Headlines

Daily Devotional: ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?

Daily Devotional: ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ?


ಬೆಂಗಳೂರು, ಫೆಬ್ರವರಿ 14: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಶಿವರಾತ್ರಿಯ ಪರ್ವಕಾಲದಲ್ಲಿ ಶಿವನ ಆರಾಧನೆಗೆ ಬಿಲ್ವಪತ್ರೆಯು ಅತ್ಯಂತ ಪ್ರಮುಖವಾಗಿದೆ. ಶಿವನಿಗೆ ಅತಿ ಪ್ರಿಯವಾದ ಪತ್ರೆಯಾಗಿರುವ ಬಿಲ್ವಪತ್ರೆಯನ್ನು ಹಿಂದೂ ಧರ್ಮದಲ್ಲಿ ಶ್ರೀವೃಕ್ಷ ಎಂದೂ ಕರೆಯುತ್ತಾರೆ. ಇದು ಮಹಾಲಕ್ಷ್ಮಿಗೂ ಪ್ರಿಯವಾಗಿದೆ. ಬಿಲ್ವಪತ್ರೆಯ ಮೂರು ದಳಗಳು ಸತ್ವ, ರಜೋ, ತಮೋಗುಣಗಳ ಪ್ರತೀಕ ಹಾಗೂ ಶಿವನ ತ್ರಿನೇತ್ರಗಳ ಸಂಕೇತ.

“ಏಕಬಿಲ್ವಂ ಶಿವಾರ್ಪಣಂ” ಎಂಬಂತೆ, ಭಕ್ತಿಯಿಂದ ಶಿವನಿಗೆ ಬಿಲ್ವಪತ್ರೆ ಅರ್ಪಿಸಿದರೆ ಕೋಟಿ ಕನ್ಯಾದಾನ ಮಾಡಿದ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಶುದ್ಧವಾದ, ಹರಿದಿರದ ಮೂರು ಎಲೆಗಳ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಮೂರು ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ. ಇದು ಕೇವಲ ನಂಬಿಕೆಯ ಆಧಾರವಾಗಿದೆ, ಶ್ರದ್ಧೆಯಿಂದ ಪೂಜೆ ಮಾಡುವುದು ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *