Daily Devotional: ಅಳಿಲು ಮನೆಯೊಳೆಗೆ ಬಂದರೆ ಅದರ ವಿಶೇಷತೆ ಏನು ಗೊತ್ತಾ?

Daily Devotional: ಅಳಿಲು ಮನೆಯೊಳೆಗೆ ಬಂದರೆ ಅದರ ವಿಶೇಷತೆ ಏನು ಗೊತ್ತಾ?


ಬೆಂಗಳೂರು, ಫೆಬ್ರವರಿ 16: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಅಳಿಲು ಮನೆಯೊಳಕ್ಕೆ ಬಂದರೆ ಅದರ ವಿಶೇಷತೆ ಏನು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ನಂಬಿಕೆಗಳ ಪ್ರಕಾರ, ಅಳಿಲು ಶ್ರೀರಾಮಚಂದ್ರನಿಗೆ ಸಹಾಯ ಮಾಡಿದ ಪವಿತ್ರ ಪ್ರಾಣಿ ಮತ್ತು ಲಕ್ಷ್ಮಿಯ ಸಂಕೇತ ಕೂಡ ಹೌದು. ಅಳಿಲನ್ನು ನೋಡುವುದೇ ಶುಭ. ಆದರೆ ಅದನ್ನು ಸ್ಪರ್ಶಿಸಲು ಹೋಗಬಾರದು. ಅಳಿಲು ಮನೆ ಒಳಕ್ಕೆ ಬಂದರೆ ಶುಭ. ಇದರಿಂದ ಸಂಪತ್ತು ವೃದ್ಧಿಯಾಗುತ್ತದೆ, ದುಷ್ಟ ಜನರ ಸಹವಾಸದಿಂದ ದೂರವಾಗಬಹುದು, ಆರ್ಥಿಕವಾಗಿ ಸುಧಾರಣೆ ಮತ್ತು ಕೆಲಸ ಕಾರ್ಯಗಳಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ. ಅಧಿಕಾರ ಯೋಗವೂ ದೊರೆಯುವ ಸಾಧ್ಯತೆ ಇರುತ್ತದೆ. ಬೆಳಗಿನ ಜಾವ ಅಳಿಲ ದರ್ಶನವಾದರೆ ಆ ದಿನದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ಅಚಾತುರ್ಯದಿಂದ ವಾಹನದಿಂದ ಅಳಿಲಿಗೆ ಹಾನಿಯಾದರೆ, ಶ್ರೀರಾಮಚಂದ್ರನ ಮೆರವಣಿಗೆಯಲ್ಲಿ ಭಾಗವಹಿಸುವುದು ಅಥವಾ ಅನ್ನದಾನ ಮಾಡುವುದು ಸೂಕ್ತ ಪ್ರಾಯಶ್ಚಿತ್ತವಾಗಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *