ಬೆಂಗಳೂರು, ಅಕ್ಟೋಬರ್ 17: ಇಂದು ಧನ ತ್ರಯೋದಶಿ. ದೀಪಾವಳಿಯನ್ನು ನಾವು 5 ವಿಶೇಷ ದಿನಗಳಾಗಿ ಆಚರಿಸುತ್ತೇವೆ. ಅದರಲ್ಲಿ ಧನ ತ್ರಯೋದಶಿಯೂ ಒಂದು.ಈ ದಿನ ಮನೆ ಶುದ್ಧಿ ಮಾಡುವುದು, ದೀಪಗಳನ್ನು ತರುವುದು, ನೀರು ತುಂಬಿಸಿಕೊಳ್ಳುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ. ಈ ಧನ ತ್ರಯೋದಶಿ ದಿನಪೂಜಾ ವಿಧಿವಿಧಾನ ಹೇಗಿರಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಸಂಸ್ಥೆಯ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.