Headlines

Daily Devotional: ಮೂರು ದಾರಿಯಲ್ಲಿಟ್ಟ ನಿಂಬೆಹಣ್ಣು ದಾಟಿದ್ರೆ ಏನಾಗುತ್ತೆ ಗೊತ್ತಾ?

Daily Devotional: ಮೂರು ದಾರಿಯಲ್ಲಿಟ್ಟ ನಿಂಬೆಹಣ್ಣು ದಾಟಿದ್ರೆ ಏನಾಗುತ್ತೆ ಗೊತ್ತಾ?


ಬೆಂಗಳೂರು, ಫೆಬ್ರವರಿ 25: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮೂರು ದಾರಿಯಲ್ಲಿ ನಿಂಬೆಹಣ್ಣು ದಾಟಿದ್ರೆ ಏನಾಗುತ್ತೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ನಮ್ಮ ದೈನಂದಿನ ಜೀವನದಲ್ಲಿ, ಮೂರು ಅಥವಾ ನಾಲ್ಕು ರಸ್ತೆಗಳು ಸೇರುವ ಜಾಗಗಳಲ್ಲಿ ರಂಗೋಲಿ, ನಿಂಬೆಹಣ್ಣು, ಅರಿಶಿನ-ಕುಂಕುಮ, ಕುಂಬಳಕಾಯಿ, ತೆಂಗಿನಕಾಯಿ, ಸಣ್ಣ ಮಡಕೆಗಳು ಅಥವಾ ದೀಪಗಳನ್ನು ಇಟ್ಟು ವಿಶೇಷ ಪೂಜೆಗಳನ್ನು ಮಾಡುವುದನ್ನು ಗಮನಿಸುತ್ತೇವೆ. ಇವುಗಳ ಹಿಂದಿನ ಉದ್ದೇಶದ ಬಗ್ಗೆ ಅನೇಕರಿಗೆ ಕುತೂಹಲವಿರುತ್ತದೆ.

ಇಂತಹ ಆಚರಣೆಗಳನ್ನು ಪ್ರಮುಖವಾಗಿ ಮೂರು ಕಾರಣಗಳಿಗಾಗಿ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ. ನಿರ್ವಹಣೆ, ದೃಷ್ಟಿ ತೆಗೆಯಲು. ಕೆಲವು ಚೊಂಬು, ಸಗಣಿಯ ದೀಪಗಳನ್ನು ಸಹ ಇಡುತ್ತಾರೆ. ಎರಡನೆಯದಾಗಿ, ವಾಹನ ಅಪಘಾತಗಳು ನಡೆದ ಸ್ಥಳಗಳಲ್ಲಿ ಶಾಂತಿ ಮತ್ತು ಶುದ್ಧೀಕರಣಕ್ಕಾಗಿ ಪೂಜೆ ಮಾಡಲಾಯಿತು. ಮೂರನೆಯದಾಗಿ, ದೀರ್ಘಕಾಲದ ಕಾಯಿಲೆಗಳು, ನಿರಾಸಕ್ತಿ, ಬೇಜವಾಬ್ದಾರಿತನ, ನೆನಪಿನ ಶಕ್ತಿ ಕಡಿಮೆಯಾದಾಗ ದೇಹದಿಂದ ಋಣಾತ್ಮಕ ಮತ್ತು ದುಷ್ಟ ಶಕ್ತಿಗಳನ್ನು ಹೊರಹಾಕಲು ಈ ರೀತಿಯ ಪೂಜೆಗಳನ್ನು ಮಾಡುತ್ತಾರೆ ಎಂದು ಬಸವರಾಜ ಗುರೂಜಿ ಹೇಳಿದರು.



Source link

Leave a Reply

Your email address will not be published. Required fields are marked *