ದಿನ ಭವಿಷ್ಯ: ಇಂದು ಈ ರಾಶಿಯವರು ಅಧಿಕಾರಕ್ಕೆ ತಂತ್ರಗಳ ಮಾಡುವರು

ದಿನ ಭವಿಷ್ಯ: ಇಂದು ಈ ರಾಶಿಯವರು ಅಧಿಕಾರಕ್ಕೆ ತಂತ್ರಗಳ ಮಾಡುವರು


ದಿನ ಭವಿಷ್ಯ: ಇಂದು ಈ ರಾಶಿಯವರು ಅಧಿಕಾರಕ್ಕೆ ತಂತ್ರಗಳನ್ನು ಮಾಡುತ್ತಾರೆ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ವಾರ್ಷಿಕ : ವಸಂತ, ಚಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ಉತ್ತರಾಭಾದ್ರ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಮಘಾ, ಯೋಗ : ಶೂಲಿ, ಕರಣ : ಬವ, 6 ಸೂರ್ಯೋದಯ – 2 – 5 ಸ್ತ 6 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:32 – 17:04, ಯಮಗಂಡ ಕಾಲ 09:25 – 10:57, ಗುಳಿಕ ಕಾಲ 12:29 – 14:00

ಮೇಷ ರಾಶಿ :

ನಿಮ್ಮ ನಡವಳಿಕೆಯು ನಿಮ್ಮನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಳ್ಳುತ್ತದೆ. ಕಛೇರಿಯ ಕೆಲಸಗಳನ್ನು ಯಾವುದೇ ನಿರ್ಬಂಧವಿಲ್ಲದೇ ಮಾಡುವಿರಿ. ಹೂಡಿಕೆಯ ವಿಚಾರವಾಗಿ ಚರ್ಚಿಸಿ. ಹಳೆಯ ಪ್ರೇಮಿಗಳ ಅನಿರೀಕ್ಷಿತ ಭೇಟಿ, ಮನದೊಳಗೆ ಆನಂದ. ಸಹಾಯ ಮಾಡಲು ಹೋಗಿ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಜಾಣ್ಮೆಯ ವ್ಯವಹಾರದಿಂದ ಇಂದು ವ್ಯಾಪಾರದಲ್ಲಿ ಲಾಭ ಪಡೆಯಿರಿ. ಅನಿರೀಕ್ಷಿತವಾಗಿ ಸಿಕ್ಕ ಸಂಪತ್ತನ್ನು ಯಾರಿಗಾದರೂ ಕೊಡುವಿರಿ. ದುರ್ವ್ಯಸನವು ನಿಮ್ಮನ್ನು ತಡೆದುಕೊಳ್ಳಬಹುದು.

ವೃಷಭ ರಾಶಿ :

ವೈವಾಹಿಕ ಸುಖವು ಕ್ಷೀಣಿಸಬಹುದು. ದಾಂಪತ್ಯದಲ್ಲಿ ಸ್ವಪ್ರತಿಷ್ಠೆಯು ಕಾಣಿಸಿಕೊಳ್ಳಬಹುದು. ಬಂಧಗಳು ನಿಮ್ಮ ಕಷ್ಟಕ್ಕೆ ನೆರವಾಗುತ್ತವೆ. ಹೊಸ ಪರಿಚಯದಲ್ಲಿ ಆತ್ಮೀಯತೆ ಬೆಳೆಯುವುದು. ಅತಿಯಾದ ಆಸೆಯನ್ನು ತೋರಿಸಬೇಕಾದೀತು. ವಿದ್ಯಾರ್ಥಿಗಳು ಶುಭ ಫಲಿತಾಂಶದಿಂದ ಸಂತೋಷಪಡುತ್ತಾರೆ. ನಿಮ್ಮ ಅಪೂರ್ಣ ಕಾರ್ಯಗಳನ್ನು ಇಂದು ಪೂರ್ಣಮಾಡಿಕೊಳ್ಳಿ. ಪೂರ್ವಪುಣ್ಯವು ನಿಮ್ಮನ್ನು ಕಾಪಾಡಲಿದೆ.

ಮಿಥುನ ರಾಶಿ :

ಉದ್ಯಮವನ್ನು ಚುರುಕುಗೊಳಿಸಬೇಕು. ನಿಮ್ಮ ವ್ಯಕ್ತಿತ್ವ ಮತ್ತು ಆರೋಗ್ಯದ ಮೇಲೆ ಉತ್ತಮ ಪರಿಣಾಮ. ಕಿವಿಯಲ್ಲಿ ದೋಷ ಕಾಣಿಸುವುದು. ಆದಾಯದ ಮೂಲಗಳೂ ಬಲಗೊಳ್ಳುತ್ತವೆ. ಇಂದು ನೀವು ಅನುಭವಸ್ಥರ ಮಾರ್ಗದರ್ಶನವನ್ನು ತೆಗೆದುಕೊಳ್ಳಬೇಕು. ಸೃಜನಾತ್ಮಕ ಕೆಲಸದಿಂದ ಹೆಚ್ಚಿನ ಯಶಸ್ಸನ್ನು ಸಾಧಿಸುವಿರಿ. ಸಂಗಾತಿಗಳಿಬ್ಬರೂ ದೂರಾಗುವ ಯೋಚನೆ ಮಾಡಬಹುದು. ನಿಮ್ಮ ಮಾತು ನಿಷ್ಪಕ್ಷಪಾತದಿಂದ ಇರಲಿ.

ಕರ್ಕಾಟಕ ರಾಶಿ :

ಸಾಲ ಕೊಟ್ಟವರ ಮಾತಿನಿಂದ ಇಂದು ನೆಮ್ಮದಿ ಹಾಳಾಗುವುದು. ನಿಮ್ಮ ತಪ್ಪನ್ನು ಎಲ್ಲರೂ ಒಪ್ಪಿಕೊಳ್ಳಲು ಆಗದು. ಅಧಿಕ ಆಸ್ತಿಯೇ ನಿಮಗೆ ತೊಂದರೆಯನ್ನು ಉಂಟುಮಾಡಬಹುದು. ಕಠಿಣ ಪರಿಶ್ರಮಕ್ಕೆ ನೀವು ಸರಿಯಾದ ಫಲಿತಾಂಶಗಳನ್ನು ಪಡೆಯುತ್ತೀರಿ. ನಿಮ್ಮ ತಪ್ಪಿಗೆ ಕ್ಷಮೆ ಕೇಳುವವರೆಗೂ ಪರಿಚಿತರು ನಿಮ್ಮನ್ನು ಬಿಡಲಾರರು. ನೀವು ಹೊಸ ವಾಹನವನ್ನು ಸ್ನೇಹಿತರ ಒತ್ತಾಯಕ್ಕೆ ಖರೀದಿಸಿ. ಒಂದೇ ತರದ ಜೀವನವು ನಿಮಗೆ ಬೇಸರವಾಗುವುದು.

ಸಿಂಹ ರಾಶಿ :

ಇಂದು ಮಾಡಿದ ಕಠಿಣ ಕೆಲಸವು ಮುಂದಿನ ದಿನಗಳಲ್ಲಿ ಖಚಿತವಾದ ಫಲಿತಾಂಶವನ್ನು ನೀಡಲಿದೆ. ಇಂದು ಕೆಲವು ಕೆಲಸಗಳಲ್ಲಿ ಅನಿರೀಕ್ಷಿತ ಲಾಭದ ಪರಿಸ್ಥಿತಿ ಇದೆ. ನೀವು ಇಂದು ನಿಮ್ಮ ಕುಟುಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡವರು. ಪ್ರೋತ್ಸಾಹಿಸಲು, ಅವರ ಸಾಧನೆಗಾಗಿ ಸಮ್ಮಾನಿಸಬಹುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದ ಕಾರಣ ಸಿಟ್ಟಾಗಬಹುದು. ಆದಾಯದ ಮೂಲಗಳ ಸಂಖ್ಯೆ ಹೆಚ್ಚುಮಾಡಿಕೊಳ್ಳಿ. ಬಹಳ ದಿನಗಳಿಂದ ಮರೆತುಹೋಗಿದ್ದ ಸಂಗತಿಯನ್ನು ಯಾರಾದರೂ ನೆನಪಿಸಿಕೊಳ್ಳುತ್ತಾರೆ.

ಕನ್ಯಾ ರಾಶಿ :

ನಿಮ್ಮ ಪ್ರಮುಖ ಕೆಲಸಕ್ಕೆ ಸಂಬಂಧಿಸಿದ ರೂಪರೇಷೆಯನ್ನು ಮಾಡಿ. ಮಾತನ್ನು ಕಡಿಮೆ ಮಾಡಿ ಕಾರ್ಯದಲ್ಲಿ ತೋರಿಸಿ. ಅನಪೇಕ್ಷಿತ ವಿಚಾರದ ಬಗ್ಗೆ ಚರ್ಚೆ ಬೇಡ. ನಿಮ್ಮಲ್ಲಿ ಇರುವುದನ್ನು ಹಂಚಿ ಸ್ವೀಕರಿಸಿ. ಸುಮ್ಮನೆ ಸಮಯವನ್ನು ಹಾಳು ಮಾಡಿಕೊಳ್ಳುವಿರಿ. ಉದ್ಯಮದಲ್ಲಿ ಕಡಿಮೆ ಲಾಭವು ಸಮಾಧಾನ ತರದು. ಉದ್ಯೋಗದಲ್ಲಿ ಒತ್ತಡವನ್ನು ನಿಭಾಯಿಸಲು ಒದ್ದಾಡುವಿರಿ. ತಂದೆಯ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಗಬಹುದು. ಕೋಪದಿಂದ ಶಾಂತವಾಗಲು ಹಲವಾರು ದಾರಿಗಳನ್ನು ಕಂಡಿವೆ. ಸ್ತ್ರೀಯರನ್ನು ಅಪರಿಚಿತರು ಕಾಡಬಹುದು.

ತುಲಾ ರಾಶಿ :

ಮನಸ್ಸಿನಿಂದ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಭಾವನೆಗಳಲ್ಲಿ ಬರುವ ಮೂಲಕ ನೀವು ಹಾನಿ ಮಾಡಬಹುದು. ಇಂದು ನೀವು ಆಕರ್ಷಕ ವ್ಯಕ್ತಿಗಳಾಗಿ ಕಾಣುವಿರಿ. ಕೃಷಿಯ ಕೆಲಸದಲ್ಲಿ ನಿಮ್ಮ ಉತ್ಸಾಹ ಕಡಿಮೆಯಾಗಲಿದೆ. ನಿಮ್ಮ ಕಾರ್ಯ ಸಾಮರ್ಥ್ಯದ ಆಧಾರದ ಮೇಲೆ, ಯಾವುದೇ ಪ್ರಮುಖ ಕೆಲಸವನ್ನು ಉತ್ತಮ ರೀತಿಯಲ್ಲಿ ನೀವು ಮಾಡಲು ಸಾಧ್ಯವಾಗುತ್ತದೆ. ನೀವು ಕಷ್ಟದಲ್ಲಿ ಸುಖವನ್ನು ಕಾಣುವ ಮಾರ್ಗವನ್ನು ಹುಡುಕಿಕೊಳ್ಳಿ. ಅಮೂಲ್ಯ ವಸ್ತುಗಳ ಸಂಪಾದನೆಯಾಗಲಿದೆ.

ವೃಶ್ಚಿಕ ರಾಶಿ :

ನಿಮ್ಮ ಆದಾಯದ ಮೂಲಗಳಿಂದ ಆದಾಯವು ಕಡಿಮೆಯಾಗಬಹುದು. ಜೀವನದಲ್ಲಿ ಕೆಲವು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತೀರಿ. ಹೊಸದನ್ನು ಮಾಡಲು ಯೋಚಿಸಿ. ನಿಮ್ಮೊಳಗಿನ ಹೊಸ ಶಕ್ತಿಯ ಪರಿಣಾಮವನ್ನು ನೀವು ಅನುಭವಿಸುವಿರಿ. ಅನಗತ್ಯ ಚಟುವಟಿಕೆಗಳಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡಬೇಡಿ. ಮನೆಯವರ ಜೊತೆ ವಾಗ್ವಾದಕ್ಕೆ ನಿಲ್ಲುವಿರಿ. ಸಂತಾನ ಸಂತೋಷವನ್ನು ನೀವು ಇಂದು ಅನುಭವಿಸುವಿರಿ.

ಧನು ರಾಶಿ :

ಸಕಾರಾತ್ಮಕ ಮನೋಭಾವವನ್ನು ಇಟ್ಟುಕೊಳ್ಳುವುದರಿಂದ, ಶೀಘ್ರದಲ್ಲೇ ವಿಷಯಗಳು ಸಾಮಾನ್ಯವಾಗುತ್ತವೆ. ಕೆಲವು ದಿನಗಳಿಂದ ಯಾವುದೇ ಸಮಸ್ಯೆಗೆ ಇಂದು ಸ್ವಲ್ಪ ಪರಿಹಾರ ದೊರೆಯಲಿದೆ. ಮಕ್ಕಳ ಗಮನವೂ ಅವರ ಅಧ್ಯಯನದ ಕಡೆಗೆ ಇರುತ್ತದೆ. ನಿಮ್ಮ ಮಾತುಗಳು ಇತರರಿಗೆ ಇಷ್ಟವಾಗುವುದು. ಆರ್ಥಿಕವಾದ ಸಂತೃಪ್ತಿಯು ನಿಮ್ಮ ಮುಖದಲ್ಲಿ ಇರಲಿದೆ. ಅನ್ಯರು ನಿಮ್ಮ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುವುದು ನಿಮಗೆ ಇಷ್ಟವಾಗದು. ನಿಮಗೆ ಬೇಕಾದ ಸಹಾಯವು ಸರಿಯಾದ ಸಮಯಕ್ಕೆ ಸಿಗುವುದು.

ಮಕರ ರಾಶಿ :

ಕುಶಲ ಕಾರ್ಯದಲ್ಲಿ ಆಸಕ್ತಿ ಹೆಚ್ಚಿರುವುದು. ಯಾವುದೇ ಸ್ಥಗಿತಗೊಂಡ ಸರ್ಕಾರಿ ಕೆಲಸಗಳು ಇಂದು ಪೂರ್ಣಗೊಳ್ಳಬಹುದು. ಆದ್ದರಿಂದ ನಿಮ್ಮ ಸಂಪೂರ್ಣ ಗಮನವನ್ನು ಅದರ ಮೇಲೆ ಇರಿಸಿ. ಯಾವುದೇ ವ್ಯಕ್ತಿಯೊಂದಿಗೆ ಚರ್ಚಿಸುವಾಗ ಅವರ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಬೇಡಿ. ಅಪರಿಚಿತರ ಮಾತು ನಿಮಗೆ ಸಮಾಧಾನವನ್ನು ಕೊಡಬಹುದು. ಯಾರ ಮಾತನ್ನೂ ನೀವು ಕೇಳಲಾರಿರಿ. ಉದ್ಯೋಗದಲ್ಲಿ ನಿಮ್ಮ ಸ್ಥಾನವು ಬದಲಾಗುವುದು. ಸಮಯವೂ ಬದಲಾಗಲು ಹೊಂದಿಕೊಳ್ಳುವುದು ಕಷ್ಟವಾದೀತು.

ಕುಂಭ ರಾಶಿ :

ಇಂದು ಸಾಮಾಜಿಕ ಚಟುವಟಿಕೆಗಳಿಗೆ ನಿಮ್ಮದಾದ ಕೊಡುಗೆ ಇರಲಿದೆ. ಉದ್ಯೋಗದ ಸ್ಥಳದಲ್ಲಿ ನಿಮ್ಮ ಮೇಲಧಿಕಾರಿಗಳ ವರ್ತನೆಯು ನಿಮ್ಮನ್ನು ಅಸಮಾಧಾನಗೊಳಿಸಬಹುದು. ನಿಮ್ಮ ತಂದೆಯ ಜೊತೆ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳಲು ಬಯಸುವಿರಿ. ನೀವು ಕೇಳಿದ ಸಾಲವು ನಿಮಗೆ ದೊರೆಯಬಹುದು. ಖರ್ಚಿನ ವಿಚಾರದಲ್ಲಿ ಕೈ ಹಿಂದೆ ಮಾಡುವುದು ಒಳ್ಳೆಯದು. ಜವಾಬ್ದಾರಿಗಳಿಂದ ನೀವು ಮುಕ್ತರಾಗಿ ಸಂತೋಷಿಸುವಿರಿ. ಅಪರಿಚಿತರು ನಿಮಗೆ ತೊಂದರೆ ಕೊಡುವವರು.

ಮೀನ ರಾಶಿ :

ನಿಮಗೆ ಯಾರನ್ನು ದ್ವೇಷಿಸಲೂ ಬಲವಾದ ಕಾರಣ ಇರದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಷ್ಟಪಡುವ ಬಯಕೆ ಇರಲಿದೆ. ಕೆಲವು ಪ್ರಮುಖ ವ್ಯಕ್ತಿಗಳ ಯಶಸ್ಸು ನಿಮಗೆ ಹೆಚ್ಚು ಉತ್ತೇಜನ ನೀಡಿದೆ. ನಿರಂತರ ಓಡಾಟದಲ್ಲಿರುಬ ನಿಮ್ಮನ್ನು ಕಂಡು ಮನೆಯಲ್ಲಿ ಬೇಸರ. ನಿಮಗೆ ಯಾವುದೂ ಅನವಶ್ಯಕ ಖರ್ಚು ಎಂದು ಕಂಡರೆ ಹೇಗಾದರೂ ಮಾಡಿ ನಿಲ್ಲಿಸಿ. ಬಂಧನದಂತೆ ಅನ್ನಬಹುದು. ಅಪರಿಚಿತರ ಜೊತೆ ಸಲುಗೆ ಬೇಡ. ಸಂಗಾತಿಯ ಆಲೋಚನೆಗಳು ನಿಮಗೆ ಇಷ್ಟವಾಗಬಹುದು. ಇತರರಿಗೂ ಸಂತೋಷವಾಗುವಂತೆ ಇರುವಿರಿ.

-ಲೋಹಿತ ಹೆಬ್ಬಾರ್-8762924271 (ಯಾವ ಅಪ್ಲಿಕೇಶನ್ ಮಾತ್ರ)



Source link

Leave a Reply

Your email address will not be published. Required fields are marked *