
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 02 ಫೆಬ್ರವರಿ 2026 ರ ದ್ವಾದಶ ರಾಶಿಗಳ ಫಲಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಸೋಮವಾರದಂದು, ವಿಶ್ವಾಸ ನಾಮ ಸಂವತ್ಸರ, ಆಶ್ಲೇಷ ನಕ್ಷತ್ರ ಮತ್ತು ಆಯುಷ್ಮಾನ್ ಯೋಗವಿದೆ. ರವಿ ಮಕರ ರಾಶಿಯಲ್ಲೂ, ಚಂದ್ರ ಕಟಕ ರಾಶಿಯ ಆಶ್ಲೇಷ ನಕ್ಷತ್ರದಲ್ಲೂ ಸಂಚಾರ ಮಾಡಲಿದ್ದಾರೆ. ರಾಹುಕಾಲ ಬೆಳಿಗ್ಗೆ 8:11 ರಿಂದ 9:38 ರವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಬೆಳಿಗ್ಗೆ 9:39 ರಿಂದ 11:06 ರವರೆಗೆ ಇರುತ್ತದೆ.
ಮೇಷ ರಾಶಿಯವರಿಗೆ ಆರು ಗ್ರಹಗಳು ಶುಭಫಲವಿದ್ದು, ಆರ್ಥಿಕವಾಗಿ ಹಾಗೂ ಕೆಲಸ ಕಾರ್ಯಗಳಲ್ಲಿ ಉತ್ತಮ ಪ್ರಗತಿ ಕಾಣುವರು. ವೃಷಭ ರಾಶಿಯವರಿಗೆ ಐದು ಗ್ರಹಗಳ ಶುಭಫಲದಿಂದ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ಮಿಥುನ ರಾಶಿಯವರಿಗೆ ನಾಲ್ಕು ಗ್ರಹಗಳ ಶುಭಫಲವಿದ್ದು, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕಟಕ ರಾಶಿಯವರಿಗೆ ಚಂದ್ರನ ಸಂಚಾರದಿಂದ ಐದು ಗ್ರಹಗಳು ಶುಭಫಲವಿದ್ದು, ರಾಜಕೀಯವಾಗಿ ಮತ್ತು ವೃತ್ತಿಪರ ಕ್ಷೇತ್ರದಲ್ಲಿ ಪ್ರಗತಿಯಾಗಿದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.