
ಬೆಂಗಳೂರು, ಮಾ.2: ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮಾರ್ಚ್ 2, ಭಾನುವಾರದ ದ್ವಾದಶ ರಾಶಿಗಳ ಫಲಗಳನ್ನು ವಿವರಿಸಿದ್ದಾರೆ. ವಿಶ್ವ ವಸನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ ಚತುರ್ದಶಿ ದಿನವಾದ ಇಂದು ಬೆಳಗ್ಗೆ 5:57ಕ್ಕೆ ಚತುರ್ದಶಿ ಮುಗಿದು ಹುಣ್ಣಿಮೆ ಇರುತ್ತದೆ. ಆಶ್ಲೇಷ ನಕ್ಷತ್ರ, ಅತಿಗಂಡ ಯೋಗ, ವಣಿಕ ಕರಣವಿರುವ ಈ ದಿನದ ರಾಹುಕಾಲ ಬೆಳಗಿನ ಜಾವ 8:03 ರಿಂದ 9:32 ರವರೆಗೆ ಇರುತ್ತದೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ, ಶುಭಕಾಲ 9:33 ರಿಂದ 11:02 ರವರೆಗೆ ಇದೆ. ಇಂದು ಶುಕ್ರ ಗ್ರಹವು ಕುಂಭ ರಾಶಿಯಿಂದ ಮೀನ ರಾಶಿಗೆ (ಉಚ್ಚ ಸ್ಥಾನ) ಬೆಳಗಿನ ಜಾವ 1:01ಕ್ಕೆ ಸಂಚಾರ ಮಾಡಿದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಕಟಕ ರಾಶಿಯಲ್ಲಿ ಇರುತ್ತಾನೆ. ಕಾಮದಹನದ ಹಬ್ಬವೂ ಇಂದು ಆಚರಿಸಲಿದೆ. ಕನಕಗಿರಿ ಧ್ವಜ, ತುರುವೇಕೆರೆ ಬೆಟ್ಟದ ರಥ, ನೇರಳೆಕಟ್ಟೆ ಜಾತ್ರೆ, ದೇವರಾಯನದುರ್ಗದಲ್ಲಿ ರಥೋತ್ಸವ ನಡೆಯುವ ಪರ್ವದಿನ ಕೂಡ ಇದೆ. ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಶುಭ ಆಚರಿಸುವವರಿಗೆ ಗುರೂಜಿ ಕೋರಿದ್ದಾರೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ, ಕೌಟುಂಬಿಕ, ಉದ್ಯೋಗ ಸಂಬಂಧಿತ ವಿಷಯಗಳಲ್ಲಿ ಆಗುವ ಬದಲಾವಣೆಗಳು, ಅದೃಷ್ಟ ಸಂಖ್ಯೆ, ಶುಭ ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ