Horoscope Today 15 January : ಇಂದು ಈ ರಾಶಿಯವರ ಬಲ ಪ್ರದರ್ಶನ, ಗೆಲುವಿಗೆ ಹೋರಾಟ

Horoscope Today 15 January : ಇಂದು ಈ ರಾಶಿಯವರ ಬಲ ಪ್ರದರ್ಶನ, ಗೆಲುವಿಗೆ ಹೋರಾಟ


ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಗುರುವಾರ ಪೌಷ ಮಾಸ ಕೃಷ್ಣ ಪಕ್ಷದ ದ್ವಾದಶೀ ತಿಥಿ ತಿರಸ್ಕಾರ, ಆಜ್ಞಾಪಾಲನೆ, ಸ್ವಂತ ಕಾರ್ಯ, ಪ್ರಭಾವಿಗಳ ಭೇಟಿ, ಶಿಫಾರಸ್ಸು, ಕ್ರೀಡಾಸಕ್ತಿ, ಸಾಮಾಜಿಕ ಕಾರ್ಯಗಳು ಇಂದಿನ ವಿಶೇಷ. ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಪುರಸಭಾ : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಮಕರ, ಮಹಾನಕ್ಷತ್ರ : ಪೂರ್ವಾಷಾಢ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯ ಸೂರ್ಯನಕ್ಷತ್ರ : ಜ್ಯೇಷ್ಠ ಯೋಗ : ವೃದ್ಧಿ, ಕರಣ, – ೬ಸ್ತೈತಿಲ, – ೬ಸ್ತೈತಿಲ, – ೬ಸ್ತೈತಿ0 – 13 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13-59 – 15:24, ಯಮಗಂಡ ಕಾಲ 06:54 – 08:19, ಗುಳಿಕ ಕಾಲ 09:44 – 11:09

ಮೇಷ ರಾಶಿ :

ಉನ್ನತ ಅಭ್ಯಾಸದ ಉತ್ತಮ ವಿದ್ಯಾಭ್ಯಾಸಕ್ಕೆ ಮಾರ್ಗದರ್ಶನ ಅಭಾವವು ಹೆಚ್ಚು ತೋರುವುದು. ಆಮದು ವ್ಯವಹಾರದಲ್ಲಿ ನಿಮಗೆ ತೊಡಕಿರುವುದು. ಮನೆಯ ಎಷ್ಟೋ ವಿಚಾರಗಳನ್ನು ತಿಳಿಯುವ ಇಚ್ಛೆ ಇರದು. ಆಂತರಿಕ ಕಲಹವನ್ನು ಜಗಜ್ಜಾಹಿರ ಮಾಡಿಕೊಳ್ಳುವಿರಿ. ನಿಮ್ಮ ಅಗಾಧ ಜ್ಞಾನವು ಎಲ್ಲಿಯಾದರೂ ಸದುಪಯೋಗಕ್ಕೆ ಬರಲಿದೆ. ಇಂದು ಬಂಧುಗಳ ಕಾರಣಕ್ಕಾಗಿ ಧನವ್ಯಯದ ಸಾಧ್ಯತೆಯಿದೆ. ನಿಮ್ಮ ಆಸ್ತಿಯ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಹಳೆಯ ನೋವುಗಳು ಕಾಣಿಸಿಕೊಳ್ಳಬಹುದು. ಉದ್ಯೋಗದಲ್ಲಿ ಆಯ್ಕೆ ಸಮಸ್ಯೆಯು ಬರಬಹುದು.

ವೃಷಭ ರಾಶಿ :

ಪ್ರಯಾಣದಲ್ಲಿ ನಿಮಗೆ ಯಾರಾದರೂ ಶತ್ರುಗಳಾಗಬಹುದು. ಬರುವ ಹಣವು ಕೈಸೇರಿದರೂ ಖರ್ಚಿನ ಮುಕ್ತವಾಗಿರುವುದು ಮಕ್ಕಳಿಗೆ ಸಿಗುವ ಪುರಸ್ಕಾರದಿಂದ ನಿಮಗೆ ಸಂತೋಷವಾಗುತ್ತದೆ. ಅಪರೂಪದ ಮಿತ್ರರು ನಿಮ್ಮನ್ನು ಭೇಟಿ ಮಾಡುತ್ತಾರೆ. ಮನೆಗೆ ಅತಿಥಿಗಳ ಆಗಮನವಾಗಿದೆ. ನಿಮ್ಮ ಮಕ್ಕಳನ್ನು ಓದಲು ಹೊರಗೆ ಕಳುಹಿಸುವ ನಿರ್ಧಾರವಿರಲಿದೆ. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳಲು ನೀವು ಸಫಲರಾಗುವುದಿಲ್ಲ. ಹೂಡಿಕೆಯಿಂದ ಹಿಂಬಾಲಿಸುವ ಸಾಧ್ಯತೆಯಿದೆ. ಏಕಪಕ್ಷೀಯವಾದ ನಿರ್ಧಾರದಿಂದ ನಿಮ್ಮವರಿಗೆ ಬೇಸರವಾದೀತು.

ಮಿಥುನ ರಾಶಿ :

ವಿನಮ್ರತೆಯು ನಿಮ್ಮನ್ನು ಎತ್ತರಕ್ಕೆ ಏರಿಸುವುದು. ಹೇಳಿಕೊಳ್ಳಲಾಗದ ಸಂಕಟವನ್ನು ಮನಸ್ಸಿನಲ್ಲಿಯೇ ನುಂಗಬೇಕಾಗುವುದು. ಪ್ರಭಾವಿ ಗಣ್ಯರ ಜೊತೆ ಸಮಯವನ್ನು ಕಳೆಯುವಿರಿ. ವ್ಯವಹಾರದಲ್ಲಿ ಚುರುಕು ಸಾಲದು. ಉದ್ಯೋಗದಲ್ಲಿ ದಿನದಿಂದ ದಿನಕ್ಕೆ ಉಂಟಾದ ಒತ್ತಡದಿಂದ ಉದ್ಯೋಗವನ್ನು ಬದಲಿಸಲು ಯೋಚನೆ ಬರುವುದು. ಯಂತ್ರೋಪಕರಣದ ಮಾರಾಟಗಾರರಿಗೆ ಅಧಿಕ ಲಾಭವಾಗುವುದು. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ. ಮನೆತನದ ಕಾರಣದಿಂದ ನಿಮಗೆ ಗೌರವ ಪ್ರಾಪ್ತ ವಸ್ತು. ಮೇಲಧಿಕಾರಿಗಳನ್ನು ಮೆಚ್ಚಿಸುವಿರಿ.

ಕರ್ಕಾಟಕ ರಾಶಿ :

ಏಕಾಗ್ರತೆಯ ಕೊರತೆಯಿಂದ ನಿಮ್ಮ ಎಲ್ಲ ಕಾರ್ಯಗಳೂ ನಿಧಾನ. ಪರಿಶ್ರಮದಿಂದ ಧನಾರ್ಜನೆ ಮಾಡಿದ್ದು ನಿಮಗೆ ಅಧಿಕ ಸಂತೋಷವಾಗುತ್ತದೆ. ಕೃಷಿಯಲ್ಲಿ ದೂರದೃಷ್ಟಿಯ ಚಿಂತನೆಯನ್ನು ಮಾಡುವಿರಿ. ನಿಮ್ಮ ಮಾತುಗಳೇ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಉದ್ಯೋಗವಿಲ್ಲದೇ ಬೇಸರಗೊಂಡ ನಿಮಗೆ ಬೇರೆಕಡೆಯಲ್ಲಿ ಕೆಲಸವು ಸಿಗುವುದು. ಇಂದು ಸಂದರ್ಭವನ್ನು ನೋಡಿಕೊಂಡು ಮಾತನಾಡಿ. ನಿಮ್ಮ ಕೆಲಸದ ಸಮಯವು ಬದಲಾಗಲಿದೆ ಕಷ್ಟವಾದೀತು. ರಾಜಕೀಯ ಜೀವನವು ನಿಮ್ಮನ್ನು ತಂತ್ರವಾಗಿಸಬಹುದು. ನಿಮ್ಮನ್ನು ತಿಳಿದವರೇ ನಿಮ್ಮ ಬಗ್ಗೆ ಮಾತನಾಡಬಹುದು.

ಸಿಂಹ ರಾಶಿ :

ಆಸ್ತಿಯಲ್ಲಿ ಸಮ ಪಾಲು ಸಿಗದೇ ವಿವಾದ ಸೃಷ್ಟಿಯಾಗಬಹುದು. ಪಾಲುದಾರಿಕೆಯಲ್ಲಿ ನಿಮಗೆ ಸಣ್ಣ ಸಮಸ್ಯೆಗಳು ಹುಟ್ಟಿಕೊಳ್ಳಬಹುದು. ಇತರರ ಒತ್ತಾಯದ ಕಾರಣಕ್ಕೆ ನೀವು ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವಿರಿ. ಮಕ್ಕಳಿಗಾಗಿ ವಾಸಸ್ಥಳ ಬದಲಾಗಬಹುದು. ವಿವಾಹದ ಬಗ್ಗೆ ಬಂಧುಗಳ ಜೊತೆ ಗಂಭೀರವಾಗಿ ಚರ್ಚಿಸಿ. ಇಂದು ಮನಸ್ಸಿಗೆ ಹಿಡಿಸಿದವರ ಕೆಲಸವನ್ನು ಮಾತ್ರ ಬೇಗ ಮಾಡಿ ಮುಗಿಸಿ. ಸಂಗಾತಿಯ ಕಡೆಯಿಂದ ನಿಮಗೆ ಶುಭಸಮಾಚಾರವು ಗೊತ್ತಾಗುವುದು. ಇಂದಿನ ನಿಮ್ಮ ಪ್ರಯಾಣವು ನಿಮಗೆ ಹಿತಕರವಾದ ಅನುಭವವನ್ನು ನೀಡಬಹುದು. ತಪ್ಪು ಮಾಡಿದರೂ ಸಿಕ್ಕಿಕೊಳ್ಳದೇ ಇರುವಿರಿ.

ಕನ್ಯಾ ರಾಶಿ :

ನಿಮ್ಮ ಇಂದಿನವೂ ಮೌನ ಇತರರಿಗೆ ಚಿಂತೆಯಾಗುವುದು. ನಿಮಗೆ ಸಂಬಂಧಿಸದ ವಿಚಾರಗಳಲ್ಲಿ ಪ್ರವೇಶವನ್ನು ಪಡೆಯುವುದು ಬೇಡ. ಸರ್ಕಾರದ ಕಾರ್ಯಗಳನ್ನು ಬೇಗ ಮೂರನೇ ವ್ಯಕ್ತಿಗಳಿಂದ ಮುಗಿಸಿಕೊಳ್ಳಬಲ್ಲಿರಿ. ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ವಾಹನಕ್ಕಾಗಿ ಸಾಲ ಮಾಡಬೇಕಾಗುವುದು. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯು ಕಾಣಿಸುವುದು. ಮಕ್ಕಳನ್ನು ಪಡೆದುಕೊಳ್ಳುವ ಚಿಂತೆಯು ಕಾಡುವುದು. ಪ್ರೇಮದಲ್ಲಿ ಸಿಕ್ಕಿಕೊಂಡು ಕಷ್ಟಪಡುವಿರಿ. ಸಂಗಾತಿಯ ತೀರ್ಮಾನವನ್ನು ಒಪ್ಪುವುದು ಕಷ್ಟವಾದೀತು. ಮಕ್ಕಳ ವಿಚಾರವಾಗಿ ನಿಮಗೆ ದೂರಬರಬಹುದು.

ತುಲಾ ರಾಶಿ :

ಸಮಯ ಬರುವ ತನಕ ಕಾಯಬೇಕು. ಉದ್ಯೋಗದಲ್ಲಿ ಮಕ್ಕಳಿಗೆ ಪ್ರವೇಶವನ್ನು ಕೊಡುವಿರಿ. ಅಧಿಕ ಸಾಲವು ನಿಮ್ಮ ಮಾನಸಿಕ ಸ್ಥಿತಿಯನ್ನೇ ಬದಲಿಸಿತು. ಸಹೋದರರು ಮರೆತ ವಿಚಾರವನ್ನು ಮತ್ತೆ ನೆನಪಿಸಿಕೊಳ್ಳುತ್ತಾರೆ. ಬಂಧುಗಳು ನಿಮ್ಮನ್ನು ಬಹಳವಾಗಿ ದೂರುಗಳು. ಮನೆಯ ಕಾರ್ಯಗಳು ಇಂದು ಅಧಿಕವಾಗಿ ಇರಬಹುದು. ನೂತನ ವಾಹನದ ಖರೀದಿಗೆ ಪರವಾನಿಗೆ ಹೋಗುವಿರಿ. ಅನಾಯಾಸದಿಂದ ಸಂಪಾದನೆಯ ಮಾರ್ಗವನ್ನು ನೀವು ಅನುಭವಿಸುವಿರಿ. ಕೊಟ್ಟ ಮಾತಿಗೆ ಸರಿಯಾಗಿ ನಡೆದುಕೊಳ್ಳುವ ಪ್ರಯತ್ನ ಮಾಡಿರಿ. ನಿಮ್ಮ ಚಿಂತನೆಯನ್ನು ವಿಸ್ತರಿಸಿಕೊಳ್ಳುವುದು ಉತ್ತಮ.

ವೃಶ್ಚಿಕ ರಾಶಿ :

ಅಪರಿಚಿತರ ಜೊತೆ ಮಾತನಾಡಲು ನೀವು ಹಿಂಜರಿಯಬಹುದು. ಸ್ಮರಣಶಕ್ತಿಯ ದೋಷವು ಸ್ವಲ್ಪವೇ ಬರಲಿದೆ. ಅವಕಾಶಗಳು ತಪ್ಪಿಹೋಗಿ, ನಿಮ್ಮನ್ನೇ ನೀವು ಬೂದು ಮಾಡಿಕೊಳ್ಳಿರಿ. ನಿಮಗೆ ವಹಿಸಿದ ಕೆಲಸವನ್ನು ಅದ್ಭುತವಾಗಿ ಮಾಡಲು ಪ್ರಯತ್ನಿಸಿರಿ. ನಿಮ್ಮ ಕಾಯುವಿಕೆಗೆ ಫಲ ಸಿಕ್ಕಂತಾಗುವುದು. ಮಾತಿನ ಮಾಧುರ್ಯವು ಬರುವ ಸಂಕಟವನ್ನು ಕಡಿತ ಮಾಡುವುದು. ವೈಯಕ್ತಿಕ ಕಾರ್ಯದ ಕಾರಣ ಪ್ರಯಾಣ ಮಾಡುವಿರಿ. ಗೊತ್ತಿಲ್ಲದ ಕಾರ್ಯವನ್ನು ಮಾಡಲು ಉತ್ಸಾಹ ಇರಲಿದೆ. ಸಹೋದ್ಯೋಗಿಗಳು ನಿಮ್ಮೆದುರು ಅಹಂಕಾರವನ್ನು ತೋರಿಸುತ್ತದೆ. ನಿಮ್ಮ ನಿಲುವಿನಲ್ಲಿ ನೀವಿರುವಿರಿ.

ಧನು ರಾಶಿ :

ಹೊಂದಾಣಿಕೆಯನ್ನು ಮಾಡಿಕೊಳ್ಳುವುದು ನಿಮ್ಮ ಅಂತಸ್ತು ಕಡಿಮೆ ಎಂಬ ಭಾವನೆಯು ನಿಮ್ಮ ತಲೆಯಲ್ಲಿ ಇರುತ್ತದೆ. ಗುಣಾತ್ಮಕ ಚಿಂತನೆಯನ್ನು ಮಾಡಿ. ಏನೇ ಬಂದರೂ ಎಲ್ಲವೂ ವಿಧಿ ನಿಯಮ ಎಂಬ ನಿರ್ಧಾರಕ್ಕೆ ಬರುವಿರಿ. ನಿಮ್ಮ ಬುದ್ಧಿಗಿಂತ ಕೌಶಲಕ್ಕೆ ಹೆಚ್ಚು ಒತ್ತು. ವಿರುದ್ಧಾಹರ ಸೇವೆಯು ನಿಮ್ಮ ಆರೋಗ್ಯವನ್ನು ಕೆಡಲಿದೆ. ಇತರ ವಸ್ತುವಿನ ಬಗ್ಗೆ ಬರುವ ಮೋಹವು ನಿಮ್ಮನ್ನು ಕೆಡಿಸಬಹುದು. ಆತ್ಮಪ್ರಶಂಸೆಯು ಕಿರಿಕಿರಿ ತರಿಸುವುದು. ಸಾಧಿಸಬೇಕು ಎಂಬ ಮಹದಾಸೆ ಇದ್ದರೂ ಅದು ಕ್ಷಣಿಕ. ಕಲಾವಿದರು ಪ್ರಶಂಸೆಯಿಂದ ಬೀಗುವುದು ಸಹಜ, ವಾಸ್ತವ ಗೊತ್ತಿರಲಿ. ಅಕಾರಣವಾಗಿ ಕೋಪ ಮಾಡಬೇಕಾಗುವುದು.

ಮಕರ ರಾಶಿ :

ಸಮಯವು ಸದುಪಯೋಗವಾಗಬೇಕಾದರೆ ಅದರ ಬಗ್ಗೆ ಪೂರ್ಣ ಗಮನಕೊಟ್ಟು ಸರಿಮಾಡಿಕೊಳ್ಳಿ. ನೂತನದ ವಾಹನದಿಂದ ನಿಮಗೆ ಸಂತೋಷ ಕಾರ್ಯಕ್ರಮ. ಇರುವ ಸಂಪನ್ಮೂಲವನ್ನು ಯೋಗ್ಯರೀತಿಯಲ್ಲಿ ಬಳಸಿ. ದಾಂಪತ್ಯದಲ್ಲಿ ಬರುವ ತಿರುವುಗಳನ್ನು ನೀವೇ ಕುಳಿತು ಸರಿಮಾಡಿಕೊಳ್ಳುವುದು ಉತ್ತಮ. ಸೇವಾ ಮನೋಭಾವವು ನಿಮ್ಮಲ್ಲಿ ಜಾಗರೂಕವಾಗಿದೆ. ಜನರ ಜೊತೆ ಬೆರೆಯಲು ಹಿಂದೇಟು ಹಾಕುವಿರಿ. ನಿಮ್ಮ ವ್ಯಕ್ತಿತ್ವದಿಂದ ಕೆಲವರಿಗೆ ಹೆಮ್ಮೆ. ಉದ್ಯೋಗ ವೃದ್ಧಿಯ ಕುರಿತು ಅಧಿಕಾರಿಗಳ ಜೊತೆ ಚರ್ಚಿಸಿ. ಸಂಗಾತಿಗೆ ನಿಮ್ಮ ಪ್ರೀತಿ ಕಡಿಮೆಯಾಗಿರುವುದು. ವಿಲಾಸಿ ಜೀವನದ ಕನಸಿನಲ್ಲಿ ಇರುವಿರಿ. ಪ್ರೀತಿಯನ್ನು ಕುಟುಂಬದ ಜೊತೆ ಹಂಚಿಕೊಳ್ಳುವಿರಿ.

ಕುಂಭ ರಾಶಿ :

ಧನಾರ್ಜನೆಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುವಂತೆ ಉತ್ತಮ ಆದಾಯವನ್ನು ಆಯ್ಕೆ ಮಾಡಿಕೊಳ್ಳಿ. ನಿರೀಕ್ಷೆಯ ಮಟ್ಟಕ್ಕೆ ಹೋಗುವುದು ಕಷ್ಟವಾದರೂ ಸ್ವಲ್ಪ ನೆಮ್ಮದಿಯು ಇರಲಿದೆ. ಸ್ತ್ರೀಯರಿಗೆ ಅಭದ್ರತೆಯನ್ನು ಕಾಡಬಹುದು. ಕೃಷಿಯಲ್ಲಿ ಚಂಚಲವಾದ ಮನಸ್ಸನ್ನು ಇಟ್ಟುಕೊಳ್ಳುವಿರಿ. ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯಲ್ಲಿ ನೀವು ಇರುವಿರಿ. ಮಕ್ಕಳ ವಿಚಾರದಲ್ಲಿ ನೀವು ಮೃದುವಾಗುವಿರಿ. ಬಂಧುಗಳ ಅನಿರೀಕ್ಷಿತ ಭೇಟಿಯಾಗಿ ಸಂತೋಷ ಕೊಡುವರು. ಯಾರ ಮಾತನ್ನೂ ಕೇಳಿದ ಚಿತ್ತಚಾಂಚಲ್ಯವು ಇರಲಿದೆ. ಸಂಗಾತಿಯ ಜೊತೆ ಮನಸ್ತಾಪ ಬರುವ ಕಾರಣ, ನಿಮ್ಮ ಕೆಲಸ ಕಾರ್ಯಗಳಲ್ಲಿ ಒಂದಿಲ್ಲೊಂದು ಕಿರಿಕಿರಿ ಇರುವುದು. ಭಾವನಾತ್ಮಕವಾಗಿ ನಿಮಗೆ ಸೋ ಆಗಿರುತ್ತದೆ.

ಮೀನ ರಾಶಿ :

ಅಸಹಜ ವರ್ತನೆಯು ನಿಮ್ಮನ್ನು ಮಿತ್ರರಿಂದ ದೂರವಾಗಿಸುವುದು. ನಿಮ್ಮ ನಕಾರಾತ್ಮಕ ಜನಪ್ರಿಯತೆಯು ನಿಮಗೆ ಬೇಸರ ಕೊಡುವುದು. ಮಿತ್ರರ ಸಹಕಾರವನ್ನು ಬಹಳ ದಿನಗಳ ಅನಂತರ ಕೇಳುವಿರಿ. ಆದರೆ ಅವರಿಂದ ಅದು ಸಿಗದು. ನಿಮ್ಮ ಗುರಿಯ ಬಗ್ಗೆ ಸ್ಪಷ್ಟವಾದ ನಿರ್ಧಾರವಿರಲಿ. ಸ್ನೇಹಿತರಿಂದ ಉಡುಗೊರೆ ಸಿಗಬಹುದು. ನಿಮ್ಮನ್ನು ವಿರೋಧಿಸುವವರ ನಡುವೆ ಬೆಳೆಯಲು ಹಂಬಲಿಸುವಿರಿ. ಯಾರ ಮಾತನ್ನೂ ಕೇಳಿದ ಚಿತ್ತಚಾಂಚಲ್ಯವು ಇರಲಿದೆ. ಶರೀರ ಪೀಡೆಯು ಕಂಡೀತು. ಆಂತರಿಕ ಕಲಹವು ಎಲ್ಲರಿಗೂ ಗೊತ್ತಾಗುವಂತೆ ಮಾಡಿಕೊಳ್ಳುವಿರಿ. ಮಾಡಿಕೊಳ್ಳುವಿರಿ. ನಿಮ್ಮ ಹಣವನ್ನು ಪಡೆದುಕೊಳ್ಳುವುದು.

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *