Headlines

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 5ರ ದಿನಭವಿಷ್ಯ

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 5ರ ದಿನಭವಿಷ್ಯ


ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಫೆಬ್ರವರಿ 5ರ ದಿನಭವಿಷ್ಯ

ಈ ದಿನ ನಿಮ್ಮಿಂದ ಸಾಧ್ಯವಾದಾಗ ಕನಿಷ್ಠ ಹನ್ನೊಂದು ಬಾರಿ ಮೃತ್ಯುಂಜಯ ಮಂತ್ರವನ್ನು ಹೇಳಿಕೊಳ್ಳಿ. ಅದು ಸಾಧ್ಯವಾಗದಿದ್ದಲ್ಲಿ ಯೂಟ್ಯೂಬ್ ಅಥವಾ ಬೇರೆ ಯಾವುದಾದರೂ ಮಾಧ್ಯಮದ ಮೂಲಕ ಹನ್ನೊಂದು ಬಾರಿ ಮೃತ್ಯುಂಜಯ ಮಂತ್ರವನ್ನು ಕೇಳಿಸಿಕೊಳ್ಳಿ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಈ ದಿನ ನಿಧಾನವಾಗಿ ಶುರುವಾಯಿತು ಎಂದೆನಿಸಿದರೂ ಮಧ್ಯಾಹ್ನದಿಂದ ನಿಮ್ಮ ಚಟುವಟಿಕೆ. ಕೆಲಸದಲ್ಲಿನ ಒತ್ತಡ ಕಡಿಮೆಯಾಗಲಿದೆ, ಹೊಸ ಕೆಲಸ- ಕಾರ್ಯಗಳಿಗೆ ಗಮನ ನೀಡಲು ಅವಕಾಶ ದೊರೆಯಲಿದೆ. ಒಂದು ಕೆಲಸ ಮಾಡಿಕೊಟ್ಟಿದ್ದೀರಿ, ಹಿಂದಿನ ಬಾಕಿ ಬಿಲ್‌ಗಳು ಉಳಿದುಹೋಗಿವೆ ಎಂದಾದಲ್ಲಿ ಅದರ ವಸೂಲಾತಿಗೆ ಏನು ಮಾಡಬೇಕು ಎಂಬ ಬಗ್ಗೆ ನಿಮ್ಮ ಗಮನ ನೀಡಲಾಯಿತು.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಇನ್ನು ನೀವು ಬೇರೆಯವರಿಗೆ ಕೊಡಬೇಕಾದ ಹಣ ಉಳಿದು ಹೋಗಿದ್ದರೆ ಸಮಯಕ್ಕೆ ಸಿಗುವುದು ಒಳ್ಳೆಯದು. ಕುಟುಂಬದಲ್ಲಿ ಮಕ್ಕಳ ವಿಚಾರವಾಗಿ ಸಂತಸದ ಸುದ್ದಿ ಬರುತ್ತದೆ. ಸಂಗಾತಿಗೆ ಚಿಕ್ಕ- ಪುಟ್ಟ ವಿಷಯಗಳಿಗೆ ಭಿನ್ನಾಭಿಪ್ರಾಯ ಉಂಟಾದರೂ ಸಂಜೆ ವೇಳೆಗೆ ಸರಿಯಾಗಲಿದೆ. ನಿಮ್ಮ ಹಳೆಯ ಸ್ನೇಹಿತರು ಮತ್ತೆ ಸಂಪರ್ಕಕ್ಕೆ ಬರಲಿದ್ದಾರೆ. ಗ್ಯಾಜೆಟ್‌ಗಳು ಖರೀದಿಸಬೇಕಿದ್ದಲ್ಲಿ ಆತುರ ಬೇಡ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಒಂದಲ್ಲಾ ಒಂದು ಕಾರಣಕ್ಕಾಗಿ ನೀವು ಮಾಡಬೇಕು ಎಂದುಕೊಂಡ ಕೆಲವು ಕೆಲಸಗಳು ವಿಳಂಬವಾಗುವ ಸಾಧ್ಯತೆಯಿದೆ. ಹಾಗಂತ ಆತುರ ಮಾಡುವ ಅಗತ್ಯವಿಲ್ಲ. ಹಣಕಾಸಿನ ವಿಷಯದಲ್ಲಿ ಎಲ್ಲರೂ ಸಲಹೆ ನೀಡುವದನ್ನು ಪಾಲಿಸಬೇಕು. ಒಂದು ವೇಳೆ ಅವು ಪ್ರಯೋಜನಕ್ಕೆ ಬಾರದು ಎಂದೆನಿಸಿದರೆ ಕೇಳಿಸಿಕೊಳ್ಳುವ ಅಗತ್ಯವೂ ಇಲ್ಲ.

ಲೇಖನ- ಸ್ವಾತಿ ಎನ್.ಕೆ.

 



Source link

Leave a Reply

Your email address will not be published. Required fields are marked *