
ಈ ದಿನ ಪಾರಿವಾಳಗಳಿಗೆ ಕಾಳು- ಕಡಿ ಹಾಕಿದರೆ ಯತ್ನ ಕಾರ್ಯಗಳಿಗೆ ಅನುಕೂಲ ಆಗಲಿವೆ. ಇನ್ನು ಏನಾದರೊಂದು ಕಾರಣವನ್ನು ಹೇಳಿ, ನಿಮ್ಮ ಕೆಲಸವನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದಲ್ಲಿ ಅದಕ್ಕೆ ಪರಿಹಾರ ದೊರೆಯಲಿದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ಅಜೀರ್ಣ, ವಿಪರೀತ ಜ್ವರ ಈ ರೀತಿಯ ತೊಂದರೆಗಳು ಮಕ್ಕಳಿಗೆ ತಕ್ಷಣ ಸೂಕ್ತ ವೈದ್ಯೋಪಚಾರ ಕೊಡಿಸುವ ಕಡೆಗೆ ಗಮನ ಕೊಡಿ. ಸಾವಕಾಶವಾಗಿ ಮಾತನಾಡಿ, ಸಮಸ್ಯೆ ಬಗೆಹರಿಸಲಾಯಿತು ಎಂದುಕೊಂಡ ಒಂದು ವಿಕೋಪಕ್ಕೆ ಹೋಗುವುದರಿಂದ ಬಹಳ ಹಿಂಸೆ ಆಗಲಿದೆ. ಯಾವ ವ್ಯಕ್ತಿ ನಿಮ್ಮ ಮಾತನ್ನು ಮೀರುವುದಿಲ್ಲ ಎಂದು ಅಂದುಕೊಂಡಿರುತ್ತೀರೋ ಅಂಥವರೇ ಧ್ವನಿ ಏರಿಸಿ, ನಿಮ್ಮ ಅಭಿಪ್ರಾಯಗಳಿಗೆ- ಸಲಹೆಗಳಿಗೆ ವಿರುದ್ಧವಾಗಿ ಮಾತನಾಡಲಿದ್ದಾರೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನಿಮಗೆ ಮಾತು ನೀಡಿದವರು ಇನ್ಯಾರಿಗೋ ಅನುಕೂಲ ಮಾಡಿಕೊಡುವ ಸಲುವಾಗಿ ನೀಡಿದ್ದ ಭರವಸೆ ನೀಡಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಹಣ ಖರ್ಚು ಮಾಡಿ, ಮಾಡಿಕೊಂಡ ಸಿದ್ಧತೆ ವ್ಯರ್ಥವಾಗುತ್ತದೆ ಎಂಬುದು ನಿಮ್ಮ ಚಿಂತೆಗೆ ಗುರಿಯಾಗಲಿದೆ. ಎರಡು ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇದ್ದಲ್ಲಿ ಅವರ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ವೆಚ್ಚ ಆಗಲಿದೆ.
ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಕಾರಣಕ್ಕೆ ನಿಮಗೆ ಅಗತ್ಯವೇ ಇಲ್ಲದಿದ್ದರೂ ಕೆಲವು ವಸ್ತುಗಳನ್ನು ಈ ದಿನ ಖರೀದಿ ಮಾಡುವಂತೆ ಆಗಲಿದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಅಂತಾದರೆ ಇನ್ನೂ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳಬೇಕು. ನೀವಾಗಿಯೇ ದುಂಬಾಲು ಬಿದ್ದು ವಹಿಸಿಕೊಂಡಂಥ ಕೆಲಸಗಳನ್ನು ಗಡುವಿನೊಳಗೆ ಮುಗಿಸಿಕೊಡುವುದಕ್ಕೆ ಪ್ರಯತ್ನಿಸಿದೆ.
ಲೇಖನ- ಸ್ವಾತಿ ಎನ್.ಕೆ.