Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 20ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 20ರ ದಿನಭವಿಷ್ಯ


ಸಂಖ್ಯಾಶಾಸ್ತ್ರದ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 20 ರ ದಿನಭವಿಷ್ಯ

ಈ ದಿನ ಗಣಪತಿ ಅಥರ್ವಶೀರ್ಷ ಪಠಣ ಅಥವಾ ಶ್ರವಣ ಮಾಡಿ. ಗಣಪತಿ ಅಥರ್ವಶೀರ್ಷವನ್ನು ಪಠಿಸುವುದರಿಂದ ಸಕಲ ವಿಘ್ನಗಳು ನಿವಾರಣೆಯಾಗುತ್ತವೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಹಳೇ ವಿಚಾರಗಳನ್ನು ಕೆದಕುವುದಕ್ಕೆ ಹೋಗಬೇಡಿ. ತಂದೆ ಅಥವಾ ಸಮಾನರ ಜೊತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಬಹುದು. ನೀವು ಬಹಳ ಉತ್ಸಾಹದಿಂದ ಮಾಡಿದ ಕೆಲಸಗಳು, ನಿರ್ಧಾರಗಳನ್ನು ಬಹಳ ಕಡಿಮೆ ಮಾಡಿ ಮಾತನಾಡುವ ಸಾಧ್ಯತೆಯಿದೆ. ಈ ಕೆಲಸದಲ್ಲಿ ನೀವು ಹಾಕಿದ ಶ್ರಮ, ತೋರಿಸಿದ ನಿಷ್ಠೆ ಗೊತ್ತಿರುವ ವ್ಯಕ್ತಿಗಳು ಸಹ ಇಂತಹ ಸನ್ನಿವೇಶದಲ್ಲಿ ನಿಮ್ಮ ಬೆಂಬಲಕ್ಕೆ ಬರುವುದಿಲ್ಲ.

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ವೃತ್ತಿನಿರತರಿಗೆ ಒಂದು ಬಗೆಯ ನಿರಾಸಕ್ತಿ ಕಾಡಲಿದೆ. ನಿಮ್ಮಲ್ಲಿ ಕೆಲವರಿಗೆ ನಿದ್ದೆಯ ಸಮಸ್ಯೆ ಕೂಡ ಆಗಬಹುದು. ಒಂದು ವೇಳೆ ಇದು ಗಂಭೀರವಾದ ಸಮಸ್ಯೆ ಎಂದೆಂದಿಗೂ ಎನಿಸಿದರೂ ಅದನ್ನು ಭೇಟಿ ಮಾಡಿ, ಸೂಕ್ತ ಔಷಧೋಪಚಾರ ಮಾಡಿಕೊಳ್ಳುವುದು ಒಳ್ಳೆಯದು. ಲೇವಾದೇವಿ ವ್ಯವಹಾರ ಮಾಡುವವರಿಗೆ ಕೆಲವು ಬೆಳವಣಿಗೆಗಳಿಂದ ಆತಂಕ ಕಾಡುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ದಿಢೀರನೇ ಹಣಕಾಸಿನ ಹೊಂದಾಣಿಕೆ ಮಾಡಿಕೊಳ್ಳಬೇಕಾಗಲಿದೆ. ನಿಮ್ಮ ಸ್ನೇಹಿತರಿಗೋ ಅಥವಾ ಆಪ್ತರಿಗೋ ಮಾಡಿಕೊಡಬೇಕು ಎಂದುಕೊಂಡ ವಾಹನ, ಸೈಟು ಅಥವಾ ಮನೆಯನ್ನು ನೀವೇ ಖರೀದಿಸುವ ಸಾಧ್ಯತೆಗಳಿವೆ. ನೀವು ತುಂಬಾ ಶ್ರಮ ಪಟ್ಟಿರುತ್ತೀರಿ. ಆದರೆ ನೀವು ಯಾರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಇಷ್ಟೆಲ್ಲ ಶ್ರಮ ಹಾಕಿರುತ್ತೀರೋ ಆ ವ್ಯಕ್ತಿಯೇ ಅದನ್ನು ಸದ್ಯಕ್ಕೆ ಬೇಡ ಎಂದು ಹೇಳುವಂಥ ಸಾಧ್ಯತೆಗಳಿವೆ.

ಲೇಖನ- ಸ್ವಾತಿ ಎನ್.ಕೆ.



Source link

Leave a Reply

Your email address will not be published. Required fields are marked *