
ಹರಿಯುವ ನೀರಿನಲ್ಲಿ ಬಾದಾಮಿ, ಒಣ ಹಣ್ಣುಗಳು ಹಾಗೂ ಆರು ನಾಣ್ಯಗಳನ್ನು ಬಿಡುವುದರಿಂದ ವಿಳಂಬವಾದ ಕಾರ್ಯಗಳಿಗೆ ವೇಗ ದೊರೆಯುತ್ತದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳು ಬಾಕಿ ಉಳಿದಿವೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಹಣಕಾಸಿನ ಹರಿವಿಗೆ ಯಾವುದೇ ಅಭಾವ ಇರುವುದಿಲ್ಲ. ಆದರೆ ಅದನ್ನು ಉಳಿಸಿಕೊಳ್ಳುವುದೇ ಮುಖ್ಯ. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಲಹೆ ಕೇಳಬಹುದು— ತರ್ಕಬದ್ಧವಾಗಿ ಆಲೋಚಿಸಿದ ನಂತರ ಮಾತನಾಡಿ. ಪ್ರೀತಿಯಲ್ಲಿ ಅನುಮಾನ ಅಥವಾ ಶಂಕೆ ಬೇಡ; ಸಂಬಂಧ ಗಟ್ಟಿಯಾಗಿ ಇರುವುದಕ್ಕೆ ನಂಬಿಕೆ ಬಹಳ ಮುಖ್ಯವಾಗುತ್ತದೆ. ಮನೆಯ ಕಿರಿಯರ ಆರೋಗ್ಯ ಸಮಸ್ಯೆ ಒತ್ತಡದಲ್ಲಿ ಸಿಲುಕಿಕೊಳ್ಳುವಂತೆ ಮಾಡಲಿದೆ. ನಿಮಗೆ ಸ್ವಲ್ಪ ವಿಶ್ರಾಂತಿ ಅಗತ್ಯ ಇರುತ್ತದೆ. ವಿದ್ಯಾರ್ಥಿಗಳು ಗೊಂದಲ ತಪ್ಪಿಸಿ.
ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರಶ್ನೆ ಮಾಡುವ ಅಭ್ಯಾಸವನ್ನು ಬಿಡಬೇಡಿ. ಇದರಿಂದ ನಿಮ್ಮ ಕಲಿಕೆ ವೇಗವಾಗಿ ಸಾಗುತ್ತದೆ. ವಿಷಯ ಚರ್ಚೆಯು ಹೊಸ ಜ್ಞಾನ- ಅವಕಾಶಗಳ ಬಗ್ಗೆ ಮಾಹಿತಿ ಸಿಗುವಂತೆ ಮಾಡುತ್ತದೆ. ಪರಿಣಾಮಕಾರಿ ಸಂವಹನ ಯಶಸ್ಸಿನ ಹಾದಿ ಆಗಲಿದೆ. ಇಂದು ನಿಮ್ಮ ಮನಸ್ಸಿನ ದೃಢತೆಗೆ ಪರೀಕ್ಷೆಯ ದಿನವಾಗಿ ಇರುತ್ತದೆ. ಕೆಲಸದಲ್ಲಿ ಒತ್ತಡ ಇದ್ದರೂ ನಿಮ್ಮ ಸಕಾರಾತ್ಮಕ ಚಿಂತನೆಯಿಂದಾಗಿ ಪರಿಹಾರ ಹುಡುಕಿಕೊಳ್ಳುತ್ತೀರಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಹಣಕಾಸಿಗೆ ಸಣ್ಣ ಹೊಸ ಒಪ್ಪಂದಗಳು ಅಥವಾ ಲಾಭವೂ ಆಗಬಹುದು. ಕುಟುಂಬದಲ್ಲಿ ಯಾರಾದರೂ ನಿಮ್ಮ ಸಹಾಯಕ್ಕಾಗಿ ಎದುರುನೋಡುವ ಪ್ರಸ್ತಾವವನ್ನು ಮಾಡಲಿದ್ದಾರೆ— ನಿಮ್ಮಿಂದ ಸಾಧ್ಯವಿದ್ದಲ್ಲಿ ಖಂಡಿತಾ ಸಹಕಾರ ನೀಡಿರಿ. ಪ್ರೀತಿಯಲ್ಲಿ ನೇರವಂತಿಕೆಯು ಸಂಬಂಧವನ್ನು ಬಲಪಡಿಸುತ್ತದೆ. ಈ ದಿನ ಸಾಧ್ಯವಾದಷ್ಟೂ ಕಡಿಮೆ ಮಸಾಲೆ ಪದಾರ್ಥಗಳನ್ನು ಸೇವಿಸಿ ಮತ್ತು ಹೆಚ್ಚು ವಿಶ್ರಾಂತಿಯನ್ನು ಪಡೆದುಕೊಳ್ಳಿ.
ಲೇಖನ- ಸ್ವಾತಿ ಎನ್.ಕೆ.