Headlines

ಕೋರ್ಟ್​​ ಆವರಣದಲ್ಲಿ ಗಣಪತಿ ದೇಗುಲಕ್ಕೆ ವಿರೋಧ: ಚಿಕ್ಕಮಗಳೂರಿನಲ್ಲೊಂದು ಹೊಸ ವಿವಾದ

ಕೋರ್ಟ್​​ ಆವರಣದಲ್ಲಿ ಗಣಪತಿ ದೇಗುಲಕ್ಕೆ ವಿರೋಧ: ಚಿಕ್ಕಮಗಳೂರಿನಲ್ಲೊಂದು ಹೊಸ ವಿವಾದ


ಚಿಕ್ಕಮಗಳೂರು, (ಜನವರಿ 20): ನಗರದ ಹೊರವಲಯದ ಹೌಸಿಂಗ್ ಬೋರ್ಡ್ ಬಳಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಜಿಲ್ಲಾ ನ್ಯಾಯಾಲಯದ (ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯ) ಕಟ್ಟಡ ಕಾಮಗಾರಿ ನಡೆಯುತ್ತಿದೆ. ಸಂಪೂರ್ಣ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ,ಈ ನೂತನ ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಆವರಣದೊಳಗೆ ಗಣಪತಿ ದೇವಾಲಯ (ಗಣಪತಿ ದೇವಸ್ಥಾನ) ನಿರ್ಮಾಣಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ. ದಲಿತ ಸಂಘಟನೆಗಳ ಒಕ್ಕೂಟ (ದಲಿತ ಸಂಘಟನೆಗಳು) ಕೋರ್ಟ್ ನ ಗಣಪತಿ ದೇಗುಲ ನಿರ್ಮಾಣಕ್ಕೆ ವಿರೋಧ ಮಾಡಿದ್ದು, ಈ ಸಂಬಂಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮಟ್ಟಿಲೇರಿವೆ. ಇದರ ಬೆನ್ನಲ್ಲೇ ವಕೀಲರು ಹಾಗೂ ಸಂಘಟನೆ ಸದಸ್ಯರ ನಡುವೆ ಪರ ವಿರೋಧದ ಚರ್ಚೆ ತಾರಕಕ್ಕೇರಿದೆ.

ದಲಿತ ಸಂಘಟನೆಗಳ ವಿರೋಧ ಏಕೆ?

ದಲಿತ ಸಂಘಟನೆಗಳ ಒಕ್ಕೂಟವು ನ್ಯಾಯಾಲಯದ ಸರ್ವಧರ್ಮಕ್ಕೆ ಸೇರಿದ್ದು, ಸರ್ವಧರ್ಮ ಸಮಾನತೆಯ ಸರ್ವ ಜಾತಿಗಳಿಗೆ ಸಂವಿಧಾನಿಕ ಸಮಾನತೆಯನ್ನಾಪಾದಿಸುವ ನ್ಯಾಯಾಲಯದ ಮುಂದೆ ಒಂದು ಧರ್ಮದ ದೇವಾಲಯ ನಿರ್ಮಾಣದಿಂದ ಧಾರ್ಮಿಕ ಭಾವನೆಯನ್ನ ಏರಿದಂತೆ ಮಾಡಿದೆ. ಸರ್ವಧರ್ಮ ಸಮಾನತೆಗೆ ಧಕ್ಕೆ ತಂದಂತೆ. ಆದ್ದರಿಂದ ಗಣಪತಿ ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಬಾರದು ಎಂದು ಪಟ್ಟು ಹಿಡಿದಿವೆ.

ಇದನ್ನೂ ನೋಡಿ: ಹಾಸನದಲ್ಲೊಂದು ವ್ಯಕ್ತಿಕಾರಿ ಘಟನೆ: ಶಾಲಾ ಬಾಲಕಿಯನ್ನು ಹಿಂಬಾಲಿಸಿ ಮನೆಗೆ ಬಂದ ಆಗಂತುಕ

ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ಆಕ್ರೋಶ

ಈ ನ್ಯಾಯಾಲಯವು ಇನ್ನೂ ನಿರ್ಮಾಣವಾಗದ ದೇವಾಲಯಕ್ಕೆ ದಲಿತ ಸಂಘಟನೆಗಳು ವಿರೋಧಿಸಿದ ಬೆನ್ನಲ್ಲೇ ಗಣವು, ನ್ಯಾಯಾಲಯದ ವಕೀಲರ ಸಂಘಕ್ಕೆ ಜಾಗವನ್ನು ನೀಡಿದೆ. ವಕೀಲರ ಸಂಘಕ್ಕೆ ನೀಡಿರುವ ಜಾಗದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ಚಿಕ್ಕಮಗಳೂರು ವಕೀಲರ ಸಂಘ ನಿರ್ಧಾರ ಮಾಡಿದೆ. ನಾವು ನಮಗೆ ನೀಡಿರುವ ಜಾಗದಲ್ಲಿ ನಾವು ಹಣ ಹಾಕಿ ದೇವಾಲಯ ಮಾಡಿದ್ರೆ ತಪ್ಪಾ ಎಂದು ಪ್ರಶ್ನೆ ಮಾಡಿದ್ದಾರೆ.

ಹೊಸ ನ್ಯಾಯಾಲಯದಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರ ವಿರುದ್ಧ ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದ ನ್ಯಾಯಾಲಯಗಳು ಗಣಪತಿ ದೇವಸ್ಥಾನವಿದೆ. ಜೊತೆಗೆ ಚಿಕ್ಕಮಗಳೂರಿನ ಕೋರ್ಟ್ ನಲ್ಲಿಯೂ ಗಣಪತಿ ದೇವಸ್ಥಾನ ಇದೆ.ಚಿಕ್ಕಮಗಳೂರು ಕೋರ್ಟಿನ ಆವರಣದಲ್ಲಿರುವ ಗಣಪತಿಗೆ ಅದರದ್ದೇ ಆದ ಇತಿಹಾಸವಿದೆ. ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿದ ಗಣಪತಿ ವಿಗ್ರಹವಿದು. ಬೇರೆ ದೇಶಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಮದ್ರಾಸ್ ಹಾರ್ಬರ್ ವಿಗ್ರಹ ಸಿಕ್ಕಿತ್ತು.

ಗಣಪತಿ ವಿಗ್ರಹದ ಇತಿಹಾಸ ಬಿಚ್ಚಿಟ್ಟ ವಕೀಲರು

ಇನ್ನು ದಲಿತ ಸಂಘಟನೆ ವಿರೋಧ ವ್ಯಕ್ತಪಡಿಸುತ್ತಿರುವ ಗಣಪತಿ ವಿಗ್ರಹಕ್ಕೆ ಇತಿಹಾಸವಿದ್ದು, ಅದನ್ನು ವಕೀಲರ ಸಂಘದ ಅಧ್ಯಕ್ಷ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಹೊಯ್ಸಳರ ಕಾಲದಲ್ಲಿ ಕೆತ್ತನೆ ಮಾಡಿದ ಗಣಪತಿ ವಿಗ್ರಹ 1960 ರ ಇತ್ತೀಚೆಗೆ ಕಳವಾಗಿತ್ತು. ಈ ಪ್ರಕರಣ 1970ರಲ್ಲಿ ನಮ್ಮ ನ್ಯಾಯಾಲಯಕ್ಕೆ ಬಂದಿತ್ತು. ಬಳಿಕ ಗಣಪತಿ ಕಳುವಾದ ಪ್ರಕರಣದಲ್ಲಿ ಅಂತ್ಯವಾಗಿತ್ತು. ಈ ಪ್ರಕರಣದ ವಸ್ತುಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಇದನ್ನು ಇಲ್ಲಿಯೇ ಮುಕ್ತಾಯಗೊಳಿಸಲಾಗಿದೆ. ಇದೀಗ ಹೊಸ ಕೋರ್ಟ್ ಕಟ್ಟಡವಾಗಿದೆ. ಈ ಗಣಪತಿಯನ್ನ ಇಲ್ಲಿ ಅನಾಥವಾಗಿ ಬಿಟ್ಟು ಹೋಗಲ್ಲ. ಹೊಸದಾಗಿ ಕಟ್ಟಡ ನಿರ್ಮಾಣವಾಗಿದೆ. ಅದರ ಪಕ್ಕದಲ್ಲಿಯೇ ವಕೀಲರಿಗಾಗಿ ಜಾಗವನ್ನು ಮೀಸಲಿಡಲಾಗಿದೆ ಆ ಜಾಗದಲ್ಲಿ ಗಣಪತಿ ದೇವಸ್ಥಾನ ಕಟ್ಟಿದರೆ ತಪ್ಪೇನು ಎಂದು ವಕೀಲರ ವಾದ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೇಳಿದರು

ಈ ವಿಚಾರಕ್ಕೆ ಎರಡು ಬಾರಿ ವಕೀಲರ ಸಂಘದಲ್ಲಿ ಸಭೆ ನಡೆಸಲಾಯಿತು, ಎರಡು ಸಭೆಯಲ್ಲಿಯೂ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮ ಹಣದಿಂದ,ಸಿಬ್ಬಂದಿ ಹಣದಿಂದ ದೇವಸ್ಥಾನ ಕಟ್ಟಾಗಿತ್ತು. ನಾವು ಕಟ್ಟಲು ಹೊರಟಿರುವುದು ನ್ಯಾಯಾಲಯದ ಒಳಗೂ ಅಲ್ಲ ಹೊರಗೂ ಅಲ್ಲ. ನಮಗೆ ನಮ್ಮ ವಕೀಲರ ಭವನಕ್ಕೆ ನೀಡಿರುವ ಜಾಗದಲ್ಲಿ ವಕೀಲರು ಧರ್ಮಾತೀತವಾಗಿ ಗಣಪತಿ ದೇವಸ್ಥಾನ ಕಟ್ಟಲು ಒಪ್ಪಿದ್ದಾರೆ. ಗಣಪತಿ ಎಲ್ಲಾ ಧರ್ಮದವರಿಗೂ ಸೇರಿದವನು. ನಾವಿನ್ನು ದೇವಾಲಯವನ್ನ ಕಟ್ಟಿಯೇ ಇಲ್ಲ. ಆಗಲೇ ವಿವಾದ ಮಾಡುತ್ತಿರುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಬಹುತೇಕ ನ್ಯಾಯಾಲಯದಲ್ಲಿ ಗಣಪತಿ ದೇವಾಲಯಗಳಿವೆ. ಕಾಫಿನಾಡಿನಲ್ಲಿ ನಿರ್ಮಾಣವಾಗಿರುವ ನೂತನ ಕೋರ್ಟ್ ನಲ್ಲಿ ಗಣಪತಿ ದೇವಾಲಯ ನಿರ್ಮಾಣಕ್ಕೂ ಮುನ್ನವೇ ವಿವಾದ ಸೃಷ್ಟಿಯಾಗಿದೆ. ಗಣಪತಿ ದೇವಾಲಯ ನಿರ್ಮಾಣ ವಿವಾದ ಇನ್ಯಾವ ಹೊಸ ಸ್ವರೂಪ ಪಡೆಯುತ್ತೋ ಗೊತ್ತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *