ನೆಲಮಂಗಲ, ನವೆಂಬರ್ 04: ಕ್ಯಾಂಟರ್ ಡಿಕ್ಕಿಯಾಗಿ ಖ್ಯಾತ ಡ್ಯಾನ್ಸರ್ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಡಾಬಸ್‌ಪೇಟೆ ಬಳಿಯ ಪೆಮ್ಮನಹಳ್ಳಿಯಲ್ಲಿ ನಡೆದಿದೆ. ಮೃತ ಡ್ಯಾನ್ಸರ್ ಅನ್ನು ಸುಧೀಂದ್ರ ಎಂದು ಗುರುತಿಸಲಾಗಿದೆ. ತಮ್ಮ ಕಾರು ಕೆಟ್ಟುನಿಂತ ಹಿನ್ನಲೆ ರಸ್ತೆ ಪಕ್ಕ ಅದನ್ನು ನಿಲ್ಲಿಸಿ ಏನಾಗಿದೆ ಎಂದು ಪರೀಕ್ಷಿಸುತ್ತಿದ್ದ ಸುಧೀಂದ್ರಗೆ ಹಿಂದಿನಿಂದ ವೇಗವಾಗಿ ಬಂದ ಕ್ಯಾಂಟರ್ ಏಕಾಏಕಿ ಡಿಕ್ಕಿಯಾಗಿದೆ. ಉತ್ತಮ ಗುಣಮಟ್ಟದ ಅವರು ವಹಿಸಿದ್ದು, ನೃತ್ಯಗಾರನ ನೂರಾರು ಕನಸು ರಸ್ತೆಯಲ್ಲೇ ಕಮರಿಹೋಗಿದೆ.
ವೇಗವಾಗಿ ಬಂದು ಗುದ್ದಿದ ಕ್ಯಾಂಟರ್
ಅಪಘಾತದಲ್ಲಿ ಸುಧೀಂದ್ರ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ. ಡ್ಯಾನ್ಸರ್ ಆಗಿ ನೂರಾರು ಯುವಕ- ಯುವತಿಯರಿಗೆ ಮತ್ತು ಮಕ್ಕಳಿಗೆ ತರಬೇತಿ ನೀಡುತ್ತಿದ್ದ, ಜೀವನ ನಿರ್ವಹಣೆಗೆ ಪ್ಲವರ್ ಡೆಕೊರೇಟರ್ ಆಗಿಯೂ ಕೆಲಸ ಮಾಡುತ್ತಿದ್ದರು. ತಮ್ಮ ಕೆಲಸ ಕಾರ್ಯಕ್ಕಾಗಿ ಅವರು ಹೊಸ ಕಾರು ಖರೀದಿಸಿದ್ದು, ಒಂದೇ ದಿನಕ್ಕೆ ಅಲ್ಲಿ ರಸ್ತೆಯಲ್ಲಿ ಕೆಟ್ಟು ನಿಂತು ಅವರ ಜೀವವನ್ನೇ ಬಲಿ ಪಡೆದಿದೆ. ಸಂಬಂಧ ನೆಲಮಂಗಲದ ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಯಾಂಟರ್ ಚಾಲಕನನ್ನ ಬಂಧಿಸಲಾಗಿದೆ.
ಇದನ್ನೂ ಓದಿ: ಹತ್ಯೆಯಾದವನ ಬರ್ತ್ತೇ ದಿನವೇ ಹಂತಕರಿಗೆ ಜೀವಾವಧಿ ಶಿಕ್ಷೆ
ಅಪಘಾತವೋ? ಕೊಲೆಯೋ?
ಅಪಘಾತದ ದೃಶ್ಯವನ್ನು ಗಮನಿಸಿದರೆ ಇದು ನಿಜವಾಗಿಯೂ ಅಪಘಾತವೋ ಅಥವಾ ಕೊಲೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಹೈವೇಯಲ್ಲಿ ಹೋಗುತ್ತಿದ್ದ ಕ್ಯಾಂಟರ್ ಏಕಾಏಕಿ ರಸ್ತೆ ಬದಿಗೆ ನುಗ್ಗಿರೋದು ಅನುಮಾನಗಳಿಗೆ ಕಾರಣ. ಹೀಗಾಗಿ ಈ ಬಗ್ಗೆ ತಪಾಸಣೆ ನಡೆಸಲಾಗುತ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.