Headlines

ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೇನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ

ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೇನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ


ಬಡವರ ಹತ್ತಿರ ಹಣ ಸುಲಿಗೆ ಮಾಡಿದ್ರೆ ಕೈ-ಕಾಲು ಮುರಿಯುತ್ತೇನೆ: ವೈದ್ಯರಿಗೆ ಚಳಿ ಬಿಡಿಸಿದ ಶಾಸಕ ದೇಶಪಾಂಡೆ

ಕಾರವಾರ, ಮಾರ್ಚ್ 20: ಹೆರಿಗೆ ಆಸ್ಪತ್ರೆಯಲ್ಲಿ ಬಡವರ ಹತ್ತಿರ ಹಣ ಸುಲಿಗೆ ಮಾಡಿದರೆ ಕೈಕಾಲು ಮುರಿಯುತ್ತೇನೆ. ನನ್ನ ಮೇಲೆ ಕ್ರಿಮಿನಲ್ ಕೇಸ್ ಪರವಾಗಿಲ್ಲ ಎಂದು ಶಾಸಕ ಆರ್ ವಿ ದೇಶಪಾಂಡೆ (ಆರ್.ವಿ.ದೇಶಪಾಂಡೆ) ವೈದ್ಯರಿಗೆ ಖಡಕ್ ಎಚ್ಚರಿಕೆ ಮಾಹಿತಿ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕು ಆರೋಗ್ಯ ರಕ್ಷಣಾ ಸಮಿತಿಯಲ್ಲಿ ನಡೆದ ವೈದ್ಯರಾದ ಡಾ.ಅಖಿಲ್ ಕಿತ್ತೂರು ಮತ್ತು ಡಾ.ಕೀರ್ತಿಗೆ ತರಾಟೆಗೆ ತೆಗೆದುಕೊಂಡರು.

ವೈದ್ಯರು ಚಳಿ ಬಿಡಿಸಿದ ಶಾಸಕ ಆರ್‌ವಿ ದೇಶಪಾಂಡೆ

ಹೆರಿಗೆ ಮಾಡಿದರೆ ಯಾಕೆ ಹಣ ಪಡೆಯುತ್ತೀರಿ ಎಂದು ಶಾಸಕ ಆರ್ ವಿ ದೇಶಪಾಂಡೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಿದ ವೈದರು ನಾವು ಯಾರಿಂದಲೂ ಕೇಳುತ್ತಿಲ್ಲ. ಅವರೇ ಖುಷಿಯಿಂದ ಕೊಟ್ಟರಷ್ಟೇ ತಗೋತೇವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಹಳೇ ವಾಹನ ನಿಲ್ಲಿಸಿದ್ರೆ ಕಠಿಣ ಕ್ರಮ: ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ

ವೈದ್ಯರ ಮಾತಿಗೆ ಕೆಂಡಾಮಂಡಲರಾದ ಶಾಸಕ ದೇಶಪಾಂಡೆ, ಏನು ನಿಮ್ಮ ಮಾತಿನ ಅರ್ಥ. ಯಾರ ಬಳಿ ಕೇಳಲ್ಲ, ಕೊಟ್ಟಷ್ಟು ತಗೋತೀವಿ ಅಂದರೆ ಏನರ್ಥ. ಮಾನ ಮರ್ಯಾದೆ ಇಲ್ವಾ ನಿಮಗೆ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದುವರೆಗೆ ಪಡೆದ ಹಣದ ಮಾಹಿತಿ ಪಡೆಯುವಂತೆ ತಹಶೀಲ್ದಾರ್‌ಗೆ ನಿರ್ದೇಶಿಸಿದ್ದಾರೆ.

ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಇಟ್ಟಿಲ್ಲ ಎಂದ ಶಾಸಕ ಆರ್ ವಿ ದೇಶಪಾಂಡೆ

ಮಂತ್ರಿ ಸ್ಥಾನದ ವಿಚಾರವಾಗಿ ಮಾತನಾಡಿದ ಅವರು, ಹೊಸ ಶಾಸಕರು ಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಎಲ್ಲರಿಗೂ ಮಂತ್ರಿ ಆಗಬೇಕೆಂಬ ಆಸೆ ಇರುವುದು ಸಹಜ. ಮಂತ್ರಿ ಆಗಬೇಕಂತ ನನಗೆ ಅತಿ ಆಸೆ ಇಲ್ಲ. ಅವರನ್ನು ಬಯಸಿದರೆ ನನ್ನನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ. 9 ಬಾರಿ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಏಳೆಂಟು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಮಂತ್ರಿ ಮಾಡಿ ಅಂತ ನಾನ್ಯಾರಿಗೂ ಕೇಳಲ್ಲ.

ಇದನ್ನೂ ಓದಿ: ದಾವಣಗೆರೆ ದಕ್ಷಿಣ ಬೈ ಎಲೆ : ಟಿಕೆಟ್ ಘೋಷಣೆ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಂದಾದ ಸಚಿವರ ಪುತ್ರ!

ಸಿಎಂ ಸಿದ್ದರಾಮಯ್ಯ ನನಗಿಂತ ಚಿಕ್ಕವರು. ಅವರು ನನ್ನ ತಮ್ಮನಿದ್ದಂತೆ. ಸಚಿವರು ಹಾಗೂ ಅಧಿಕಾರಿಗಳು ಗೌರವದಿಂದ ಕಾಣುತ್ತಾರೆ. ನನ್ನ ಕ್ಷೇತ್ರಕ್ಕೆ ಬೇಕಾಗಿರುವ ಎಲ್ಲ ಕೆಲಸಗಳು ಆಗುತ್ತಿವೆ. ಹೀಗಾಗಿ ನಾನೇನು ಮಂತ್ರಿ ಸ್ಥಾನಕ್ಕೆ ಅಪೇಕ್ಷೆ ಇಟ್ಟಿಲ್ಲ ಎಂದು ಶಾಸಕ ಆರ್ ವಿ ದೇಶಪಾಂಡೆ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *