Headlines

ಬಾಯ್ಕಾಟ್ ಮಾಡಿದ್ರೆ ಇಷ್ಟೊಂದು ಅವಮಾನ ಆಗ್ತಿರಲಿಲ್ಲ: ಪಾಕ್ ಕ್ರಿಕೆಟಿಗ

ಬಾಯ್ಕಾಟ್ ಮಾಡಿದ್ರೆ ಇಷ್ಟೊಂದು ಅವಮಾನ ಆಗ್ತಿರಲಿಲ್ಲ: ಪಾಕ್ ಕ್ರಿಕೆಟಿಗ


ಟಿ20 ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಪಾರುಪತ್ಯ ಮುಂದುವರಿದಿದೆ. ಅದು ಕೂಡ 8ನೇ ಬಾರಿ ಗೆಲುವು ದಾಖಲಿಸುವ ಮೂಲಕ. ಕೊಲಂಬೊದಲ್ಲಿ ನಡೆದ ಟಿ20 ಔಟ್ 2026ರ 27ನೇ ಬಟ್ಟೆ ಟಾಸ್ ಗೆದ್ದ ಪಾಕಿಸ್ತಾನ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 175 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ತಂಡ 18 ಪಂದ್ಯಗಳಲ್ಲಿ ಕೇವಲ 114 ರನ್ ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಪಾಕ್ ಪಡೆ 61 ರನ್ಗಳ ಹೀನಯ ಸೋಲನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಟ್ವೀಟ್ ಮಾಡಿ ಬಾಯ್ಕಾಟ್ ಮಾಡಿದ್ರೆ ಸಾಕಿತ್ತು ಎಂದು ಅಣಕವಾಡಿದ್ದಾರೆ.

ಇದಕ್ಕೂ ಮುನ್ನ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ಗೂ ಭಾರತದ ವಿರುದ್ಧದ ಪಂದ್ಯವನ್ನು ಬಾಯ್ಕಾಟ್ ಮಾಡುವುದಾಗಿ ಬೆದರಿಸಿತ್ತು. ಆದರೆ ಐಸಿಸಿ ಮಧ್ಯ ಪ್ರವೇಶಿಸಿ ಪಿಸಿಬಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಅದರಂತೆ ಭಾರತದ ವಿರುದ್ಧ ಕಣಕ್ಕಿಳಿದ ಪಾಕಿಸ್ತಾನ್ ತಂಡ ಇದೀಗ ಹೀನವಾಗಿ ಸೋತಿದೆ.

ಈ ಸೋಲನ್ನು ಕೇವಲ ಒಂದೇ ವಾಕ್ಯದಲ್ಲಿ ಡ್ಯಾನಿಶ್ ಕನೇರಿಯಾ ವಿಮರ್ಶಿಸಿದ್ದು, “ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪಂದ್ಯವನ್ನು ಬಹಿಷ್ಕರಿಸಿದ್ದರೆ ನಾವು ಕಡಿಮೆ ಮುಜುಗರ ಅನುಭವಿಸಬಹುದಿತ್ತು”.

ಅಂದರೆ ಈ ಮ್ಯಾಚ್ ಆಡದೇ ಇದ್ದಿದ್ದರೆ ಇಷ್ಟೊಂದು ಅವಮಾನ ಆಗಬೇಕು ಎಂದು ಡ್ಯಾನಿಶ್ ಕನೇರಿಯಾ ಪಾಕ್ ತಂಡದ ಪ್ರದರ್ಶನವನ್ನು ವ್ಯಂಗ್ಯವಾಡಿದ್ದಾರೆ.



Source link

Leave a Reply

Your email address will not be published. Required fields are marked *