Headlines

Video: ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ಬಸ್ಸಿಂದ ಬ್ಯಾಗ್​ಗಳನ್ನು ಕದ್ದ ಕಳ್ಳರು

Video: ಮಹಾರಾಷ್ಟ್ರದಲ್ಲಿ ಚಲಿಸುತ್ತಿರುವ ಬಸ್ಸಿಂದ ಬ್ಯಾಗ್​ಗಳನ್ನು ಕದ್ದ ಕಳ್ಳರು


ಬೀಡ್, ಡಿಸೆಂಬರ್ 09: ಸೋಲಾಪುರ-ಧುಲೆ ಹೆದ್ದಾರಿಯಲ್ಲಿ ವಿಶೇಷವಾಗಿ ಪಚೋಡ್ ಮತ್ತು ಯೆಡ್ಶಿ ನಡುವಿನ ಪ್ರದೇಶದ ದರೋಡೆಗಳು ಹೆಚ್ಚಾಗಿವೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಅಧಿಕಾರಿಗಳು ಗಸ್ತು ತಿರುಗುವಿಕೆಯನ್ನು ತೀವ್ರಗೊಳಿಸಿದ್ದಾರೆ ಮತ್ತು ಕಾರ್ಯಾಚರಣೆಗಳನ್ನು ಪ್ರಾರಂಭಿಸಿದ್ದಾರೆ ಆದರೂ ಇಂಥಾ ಹಲವು ಘಟನೆಗಳು ನಡೆಯುತ್ತಿವೆ. ದರೋಡೆಕೋರರ ಗುಂಪು ಪ್ರಯಾಣಿಕರ ವಾಹನಗಳನ್ನು ನಿಲ್ಲಿಸಿ ಬೆದರಿಸಿ ದರೋಡೆ ಮಾಡಲಾಗುತ್ತಿದೆ.

ಬಸ್ಸಿನಲ್ಲಿ ಅಳವಡಿಸಲಾದ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಈ ದೃಶ್ಯಾವಳಿಯಲ್ಲಿ, ಬಸ್ ಹಿಂದೆ ಐದರಿಂದ ಆರು ಬೈಕ್‌ಗಳಲ್ಲಿ ದರೋಡೆಕೋರರು ಬರುತ್ತಿರುವುದನ್ನು ಕಾಣಬಹುದು. ಅವರಲ್ಲಿ ಒಬ್ಬರು ಇನ್ನೊಬ್ಬರ ಭುಜದ ಮೇಲೆ ಹತ್ತಿ ಚಲಿಸುವ ಬಸ್ಸಿನ ಮೇಲೆ ಏರಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಬಳಿಕ ಒಂದೊಂದಾಗಿ ಬ್ಯಾಗ್ ರಸ್ತೆಗೆ ಎಸೆದಿದ್ದಾರೆ. ಚಾಲಕನಿಗೆ ಅನುಮಾನ ಬಂದು ಬಸ್ ನಿಧಾನವಾದಾಗ ಆ ವ್ಯಕ್ತಿ ಬಸ್ಸಿಂದ ಕೆಳಗೆ ಹಾರುತ್ತಾನೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *