Love Mocktail 3 movie: ಡಾರ್ಲಿಂಗ್ ಕೃಷ್ಣ ನಟನೆಯ ಲವ್ ಮಾಕ್ಟೇಲ್ 3 ಸಿನಿಮಾದ `ಒಬ್ಬಂಟಿಯಾದೆ ನಾ’ ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಆಗಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ, ಹೀರೋ ಆಗಿ ನಟಿಸಿರುವ ಸಿನಿಮಾ ‘ಲವ್ ಮಾಕ್ಟೇಲ್ 3’. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಇತ್ತೀಚೆಗಷ್ಟೇ ಈ ಸಿನಿಮಾದ ತಂದೆ ಮಗಳ ಬಾಂಧವ್ಯ ಕಥೆ ಹೇಳುವ ಈ ಸಿನಿಮಾದ ಹಾಡೊಂದು ರಿಲೀಸ್ ಆಗಿತ್ತು. ಈ ಹಿಂದಿನ ಎರಡು ಹಾಡುಗಳನ್ನು ಕೇಳಿದ್ದ ವೀಕ್ಷಕರು ಟ್ರೇಲರ್‌ಗೋಸ್ಕರ ಕಾಯುತಿದ್ದರು. ಪ್ರೇಮಿಗಳ ದಿನಕ್ಕೆ ಉಡುಗೊರೆ ಎಂಬಂತೆ `ಒಬ್ಬಂಟಿಯಾದೆ ನಾ’ ಎಂಬ ಲಿರಿಕಲ್ ವೀಡಿಯೋ ರಿಲೀಸ್ ಆಗಿದೆ.

ಈಗಾಗಲೇ ಪ್ರೇಮಿಗಳ ದಿನದ ಗುಂಗಿನಲ್ಲಿ ತೇಲಿಬಂದಂತಿರೋ ಈ ಹಾಡು ಸೋಶಿಯಲ್ ಮೀಡುಯಾದಲ್ಲಿ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಮಾತು ಮೌನವಾಗಿದೆ ಶೋಕ ಭಾವ ಮೂಡಿದೆ ಎಂಬ ಸಾಲುಗಳೊಂದಿಗೆ ಈ ಹಾಡು ಶುರುವಾಗುವುದು. ಈ ಹಾಡನ್ನು ರಾಘವೇಂದ್ರ ಕಾಮತ್ ಬರೆದಿದ್ದಾರೆ.

ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಸ್ವತಃ ಧ್ವನಿ ನೀಡಿದ್ದಾರೆ. ಪ್ರೇಮಿಗಳ ದಿನದಂದೇ ಈ ಹಾಡು ಬಿಡುಗಡೆಯಾಗಿದ್ದು, ಎವರ್‌ಗ್ರೀನ್ ಪ್ರೇಮಗೀತೆಗಳ ಸಾಲಿನಲ್ಲಿ ದಾಖಲಾಗುವ ಲಕ್ಷಣ ಕಾಣುತ್ತಿದೆ.

ಡಾರ್ಲಿಂಗ್ ಕೃಷ್ಣ ಲವ್‌ಮಾಕ್ಟೇಲ್ ಸಿನಿಮಾದ ಮೊದಲ ಚಾಪ್ಟರ್‌ನಲ್ಲಿ ಹಾಡುಗಳಿಗೆ ವಿಶೇಷ ಒತ್ತು ಕೊಟ್ಟಿದ್ದರು. ಅಂದಹಾಗೆ ಈ ಸಿನಿಮಾದ ಮೂಲಕ ದೊಡ್ಡ ಮಟ್ಟದ ಯಶಸ್ಸು ಪಡೆದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಜೋಡಿ ಇನ್ನೊಂದು ಯಶಸ್ಸು ಕೊಡಲು ರೆಡಿಯಾಗಿದೆ.

ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಕ್ರಿಸ್‌ಮಿ ಬ್ಯಾನರಿನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತಾ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ನಟಿಸುತ್ತಿದ್ದಾರೆ.

Source link
ಸಖತ್ ಆಗಿರೋ Love Mocktail 3 Movie ಮತ್ತೊಂದು ಹಾಡು; ಡಾರ್ಲಿಂಗ್ ಕೃಷ್ಣಗೆ ಮತ್ತೊಂದು ಗೆಲುವು ಪಕ್ಕಾನಾ?