Darshan Wife Vijayalakshmi: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಈಗ ಜೈಲಿನಲ್ಲಿದ್ದಾರೆ. ಇತ್ತ ಇವರ ಪತ್ನಿ ವಿಜಯಲಕ್ಷ್ಮೀ ಅವರು ಪತಿಯ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇಂದು ಅವರು ಮೈಸೂರಿನಲ್ಲಿ ಕುಟುಂಬದ ಜೊತೆ ಸಮಯ ಕಳೆದಿದ್ದಾರೆ. ಇದಕ್ಕೂ ಕೂಡ ನಿಖರವಾದ ಕಾರಣವಿದೆ.

ನಟ ದರ್ಶನ್ ತೂಗುದೀಪ ಅವರು ಪರಪ್ಪನ ಅಗ್ರಹಾರದಲ್ಲಿದ್ದಾರೆ. ಪತಿಯ ಅನುಪಸ್ಥಿತಿಯಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಇತ್ತ ಇವರ ಸಹೋದರ ದಿನಕರ್ ತೂಗುದೀಪ ಜನ್ಮದಿನವನ್ನು ಆಚರಿಸಿದ್ದಾರೆ.

ಹೌದು, ಇಂದು ನಿರ್ದೇಶಕ ದಿನಕರ್ ತೂಗುದೀಪ ಅವರ ಜನ್ಮದಿನ. ದರ್ಶನ್ ಅವರು ಜೈಲಿನಲ್ಲಿದ್ದಾರೆ, ಈಗ ದಿನಕರ್ ಮನೆಗೆ ಬಂದು ವಿಜಯಲಕ್ಷ್ಮೀ ಅವರು ಜನ್ಮದಿನ ಆಚರಿಸಿದ್ದಾರೆ ಎಂದು ಕಾಣುತ್ತಿದೆ.

ಈ ಸಂದರ್ಭದಲ್ಲಿ ಮೀನಾ ತೂಗುದೀಪ, ದಿನಕರ್ ತೂಗುದೀಪ ಹಾಗೂ ಅವರ ಪತ್ನಿ ಕೂಡ ಇದ್ದರು. ಬಹುಶಃ ಮೈಸೂರಿನಲ್ಲಿರುವ ಮೀನಾ ಮನೆಯಲ್ಲಿ ಈ ಜನ್ಮದಿನ ಆಚರಣೆ ಆದಂತಿದೆ.

ಸದ್ಯ ನಟ ದರ್ಶನ್ ಅವರನ್ನು ಹೊರಗಡೆ ಕರೆದುಕೊಂಡು ಬರುವಲ್ಲಿ, ‘ದಿ ಡೆವಿಲ್’ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೂ ಮೈದುನನ ಜನ್ಮದಿನವನ್ನು ಆಚರಿಸಿದ್ದಾರೆ. ಈ ವೇಳೆ ಕುಟುಂಬ ಒಟ್ಟಿಗೆ ಸೇರಿದೆ.

ನಟ ದರ್ಶನ್ ಅವರು ಜೈಲಿನಿಂದ ಹೊರಗಡೆ ಇದ್ದಿದ್ದರೆ, ದಿನಕರ್ ಜನ್ಮದಿನಕ್ಕೆ ಶುಭಾಶಯ ತಿಳಿಸುತ್ತಿದ್ದರು, ಈಗ ಅವರ ಅನುಪಸ್ಥಿತಿಯಲ್ಲಿ ಅತ್ತಿಗೆಯಾಗಿ ವಿಜಯಲಕ್ಷ್ಮೀ ಅವರು ಬರ್ತ್‌ಡೇ ಸೆಲೆಬ್ರೇಟ್ ಮಾಡಿರೋದು ವಿಶೇಷ.

Source link
Vijayalakshmi Darshan: ಜೈಲಿನಲ್ಲಿ ನಟ ದರ್ಶನ್; ಇತ್ತ ಕರ್ತವ್ಯ ಮರೆಯದ ಪತ್ನಿ, 'ತೂಗುದೀಪ' ಸೊಸೆ ವಿಜಯಲಕ್ಷ್ಮೀ!