Headlines

Darshan Vs Sudeep War: ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!

Darshan Vs Sudeep War:  ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!

Darshan Vs Sudeep War:  ಅವ್ರಿಗೆ ಪಾಪ ಏನು ನೋವಿದ್ಯೋ ಗೊತ್ತಿಲ್ಲ- ಸುದೀಪ್​ ರಿಯಾಕ್ಷನ್​ಗೆ ಎಲ್ಲರೂ ಗಪ್​ಚುಪ್​!
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದಾರೆ. ತಾನು ಯಾರ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಯದೆ ನನ್ನನ್ನು ಪ್ರಶ್ನಿಸುವುದು ಸರಿಯಲ್ಲ ಎಂದಿರುವ ಅವರು, ‘ದೇವಸ್ಥಾನದ ಘಂಟೆ ಹೊಡೆದುಕೊಂಡರೆ ಆ ಘಂಟೆಯನ್ನೇ ಕೇಳಬೇಕು’ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ದರ್ಶನ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ಕಿಚ್ಚು ಹೊತ್ತು ಉರಿಯುತ್ತಿದೆ. ಸುದೀಪ್​ ಅವರು ತಾವು ಯುದ್ಧಕ್ಕೆ ಸಿದ್ಧ ಎಂದು ಹೇಳಿರುವ ಮಾತುಗಳ ಬಗ್ಗೆ ಕಿಡಿ ಕಾರಿದ್ದ ವಿಜಯಲಕ್ಷ್ಮಿ ಸುದೀಪ್​ ಅವರ ವಿರುದ್ಧ ತಿರುಗಿ ಬಿದ್ದು ಅವರಿಗೆ ಟಾಂಗ್​ ಕೊಟ್ಟಿದ್ದಾರೆ. ಸುದೀಪ್​ ಹೇಳಿದ್ದು ಪೈರಸಿ ಬಗ್ಗೆಯೇ ವಿನಾ ದರ್ಶನ್​ ಬಗ್ಗೆ ಅಲ್ಲ ಎಂದು ಇದಾಗಲೇ ಸ್ಪಷ್ಟನೆ ಕೊಟ್ಟಿದ್ದರೂ, ಇವರಿಬ್ಬರ ನಡುವಿನ ಯುದ್ಧ ಅಭಿಮಾನಿಗಳು ಮುಗಿಸುವಂತೆ ಕಾಣುತ್ತಿಲ್ಲ.

ಈ ಬಗ್ಗೆ ಸುದೀಪ್​ ಅವರಿಗೆ ಎಲ್ಲಿಯೇ ಹೋದರೂ ಇದರ ಬಗ್ಗೆನೇ ಪ್ರಶ್ನೆ ಕೇಳಲಾಗುತ್ತಿದೆ. ಅದಕ್ಕೆ ಸುದೀಪ್​ ಅವರು, ನೋಡ್ರಪ್ಪಾ, ನಾನು ಹೇಳಿದ್ದು ಹುಬ್ಬಳ್ಳಿಯಲ್ಲಿ, ಮಾರನೆಯ ದಿನವೂ ಹುಬ್ಬಳ್ಳಿ ಶಾಂತವಾಗಿಯೇ ಇತ್ತು. ಆ ಬಳಿಕ ಕಿಡಿ ಹೊತ್ತಿದ್ದು ಯಾಕೆ ಎನ್ನೋದು ಗೊತ್ತಿಲ್ಲ. ಅಷ್ಟಕ್ಕೂ ಅವರು ಯಾರ ಬಗ್ಗೆ ಮಾತನಾಡಿದ್ದು ಎನ್ನೋದು ಗೊತ್ತಿಲ್ಲದೇ ನನ್ನನ್ನು ಪ್ರಶ್ನೆ ಮಾಡಿದ್ರೆ ಹೇಗೆ? ಅವರನ್ನೇ ಹೋಗಿ ಕೇಳಿ ಎಂದು ಸುದೀಪ್​ ಹೇಳಿದ್ದಾರೆ.

ಅವರಿಗೆ ಯಾರ ಬಗ್ಗೆ ಏನು ನೋವಿದ್ಯೋ ಪಾಪ ಗೊತ್ತಿಲ್ಲ. ಯಾರ ಬಗ್ಗೆ ಮಾತನಾಡಿದಾರೆಯೋ ಗೊತ್ತಿಲ್ಲ. ನೀವು ನನಗೇ ಮಾತನಾಡಿದ್ದು ಎಂದು ನನ್ನನ್ನು ಪ್ರಶ್ನೆ ಮಾಡಿದ್ರೆ ನನಗೆ ನೀವು ಅಗೌರವ ತೋರುತ್ತಿದ್ದೀರಿ ಎಂದು ಅರ್ಥ ಎಂದಿದ್ದಾರೆ ಕಿಚ್ಚ.

ಇಂಡಸ್ಟ್ರಿಯಲ್ಲಿ ನೂರಾರು ಖ್ಯಾತ ನಟರು ಇದ್ದಾರೆ. ಅವರ್ಯಾರೂ ನೀವು ನನಗೇ ಹೇಳಿದ್ದು ಅಂತ ಹೇಳಲಿಲ್ಲವಲ್ಲ ಎನ್ನುವ ಮೂಲಕ ಟಾಂಗ್​ ಕೊಟ್ಟ ಸುದೀಪ್​, ಅಷ್ಟೆಲ್ಲಾ ಮಂದಿ ಇರುವಾಗ ನಾನು ಮಾತನಾಡುವಾಗ ದೇವಸ್ಥಾನದ ಒಂದೇ ಘಂಟೆ ಢಣ್​ ಎಂದು ಹೊಡೆದುಕೊಂಡ್ರೆ ನೀವು ಆ ಘಂಟೆಗೇ ಹೋಗಿ ಕೇಳಬೇಕಾಗುತ್ತದೆ, ನನ್ನನ್ನಲ್ಲ ಎಂದು ಹೇಳಿದ್ದಾರೆ.

ನಾನು ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲಾ ಹಲವಾರು ನಟರ ಚಿತ್ರಗಳನ್ನು ಪ್ರಮೋಟ್​ ಮಾಡಿದ್ದೇನೆ. ನಟರಿಗೆ ಕಷ್ಟ ಎದುರಾದಾಗ ಮಾತನಾಡಿದ್ದೇನೆ. ಅವರು ಯಾರೂ ಸುದೀಪ್​​ ನನಗೇ ಹೀಗೆ ಹೇಳಿದ್ರು ಎಂದು ಹೇಳಲಿಲ್ಲ, ಹಾಗಿದ್ರೆ ಆ ಹೆಣ್ಣುಮಗಳು ಯಾರಿಗೆ, ಏನು ಹೇಳಿದ್ದು ತಿಳಿಯದೇ ಸುಮ್ಮನೇ ನಾನು ರಿಪ್ಲೈ ಮಾಡಲ್ಲ ಎನ್ನುವ ಮೂಲಕ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸಿದ್ದಾರೆ ಸುದೀಪ್​.

Source link

Leave a Reply

Your email address will not be published. Required fields are marked *