ನಟ ದರ್ಶನ್ ಅವರು ಸ್ಯಾಂಡಲ್ವುಡ್ನ ಸ್ಟಾರ್ ಹೀರೋ. ಆದರೆ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅವರು ಜೈಲು ಸೇರಬೇಕಾಗಿದೆ. ಈ ಪ್ರಕರಣದ ತನಿಖೆಯು ಭರದಿಂದ ಸಾಗುತ್ತಿದೆ. ದರ್ಶನ್ ಅವರಿಗೆ ಅಭಿಮಾನಿಗಳು ಎಂದರೆ ಸಾಕಷ್ಟು ಪ್ರೀತಿ. ಅದರಲ್ಲೂ ಆಟೋ ಚಾಲಕರು ಎಂದರೆ ಅವರು ತೋರುವ ಗೌರವವೇ ಹೆಚ್ಚು ಎಂದು ಹೇಳಬಹುದು. ಇದಕ್ಕೆ ಕಾರಣ ಏನು ಎಂದು ದರ್ಶನ್ ಆಪ್ತ ರಘು ರಾಮ್ ಹೇಳಿದ್ದರು.
ದರ್ಶನ್ ಅವರು ಖ್ಯಾತ ವಿಲನ್ ತುಗದೀಪ್ ಅವರ ಮಗ. ಆದರೆ, ಅವರು ಚಿತ್ರರಂಗದಲ್ಲಿ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರ ತಂದೆಯ ಹೆಸರನ್ನು ಎಂದಿಗೂ ಬಳಸಿಕೊಂಡಿಲ್ಲ. ಹೀಗಾಗಿಯೇ ಅವರ ಅಭಿಮಾನಿ ಬಳಗ ದೊಡ್ಡದಿದೆ. ಈಗ ದರ್ಶನ್ ಜೈಲಿನಲ್ಲಿ ಇರುವ ಬಗ್ಗೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಬೇಸರವಿದೆ.
‘ಆಟೋದಲ್ಲಿ ದರ್ಶನ್ ಅವರ ಫೋಟೋ ಇತ್ತು. ಅದರಲ್ಲಿ ಒಂದು ಲೈನ್ ಕೂಡ ಇತ್ತು. ನಾನು ದರ್ಶನ್ ಅವರಿಗೆ ತೋರಿಸಿದೆ. ಅವರು ಗ್ಲಾಸ್ ಇಳಿಸಿ ಥ್ಯಾಂಕ್ಸ್ ಹೇಳಿದರು. ನಂತರ ಆಟೋ ಚಾಲಕ ನಮ್ಮ ಕಾರಿಗೆ ಅಡ್ಡ ಹಾಕಿ ದರ್ಶನ್ ಮಾತನಾಡಿಸಿದ. ಆಗ ಜೆಸಿ ರೋಡ್ ಅಲ್ಲಿದ್ದೆವು. ಇಲ್ಲಿ ಜಾಮ್ ಆಯಿತು’ ಎಂದಿದ್ದರು ರಘುರಾಮ್.
‘ಏನಕ್ಕೆ ಗುರುಗಳೇ ಅಷ್ಟೊಂದು ಅಭಿಮಾನ’ ಎಂದು ರಘುರಾಮ್ ದರ್ಶನ್ ಕೇಳಿದ್ದರು. ಇದಕ್ಕೆ ದರ್ಶನ್ ಉತ್ತರಿಸಿದರು. ‘ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆದಾಗ ನಾವು ಹೊಸಬರು. ಆಟೋ ಚಾಲಕರ ಬಳಿಕ ಹೋಗಿ ನಾನು ತುಗುದೀಪ ಶ್ರೀನಿವಾಸ್ ಮಗ ನಾನು. ಪೋಸ್ಟರ್ ಹಾಕೋತೀರಾ ಎಂದು ಕೇಳಿದ್ದೆ. ತಂದೆ ಹೇಗೆ ಮಕ್ಕಳನ್ನು ಹೆಗಲೇಮಲ ಹೇಗೆ ಹಾಕಿಕೊಂಡು ಬೆಳೆಸುತ್ತಾರೋ, ಜೊತೆಗೆ ನನ್ನ ಸಿನಿಮಾ ಸ್ಟಿಕರ್ ನ ಆಟೋ ಹೆಗಲೇಮೇಲೆ ಹಾಕಿ ಬೆಳೆಸಿದ್ದಾರೆ ಎಂದು ದರ್ಶನ್ ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಬೆನ್ನುನೋವು ಶುರುವಾಗಿದೆ: ಜಡ್ಜ್ ಎದುರು ಸಮಸ್ಯೆ ಹೇಳಿಕೊಂಡ ದರ್ಶನ್
ದರ್ಶನ್ ಅವರ ನಟನೆಯ ‘ಡೆವಿಲ್’ ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಡಿಸೆಂಬರ್ 12 ರಂದು ಸಿನಿಮಾ ಬಿಡುಗಡೆ ಕಾಣುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.