‘ಡೆವಿಲ್’ಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ? ಸಿಂಗಲ್ ಸ್ಕ್ರೀನ್​ಗಳು ಸೋಲ್ಡ್​ಔಟ್

‘ಡೆವಿಲ್’ಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ? ಸಿಂಗಲ್ ಸ್ಕ್ರೀನ್​ಗಳು ಸೋಲ್ಡ್​ಔಟ್


‘ಡೆವಿಲ್’ಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಯಾವಾಗ? ಸಿಂಗಲ್ ಸ್ಕ್ರೀನ್​ಗಳು ಸೋಲ್ಡ್​ಔಟ್

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಗುತ್ತಿದೆ. ಈ ರಿಲೀಸ್‌ಗೆ ಇನ್ನು ಬಾಕಿ ಇರೋದು ಕೇವಲ ಎರಡು ದಿನ ಮಾತ್ರ. ಆದಾಗ್ಯೂ ಸಿನಿಮಾಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಓಪನ್ ಆಗಿಲ್ಲ. ಇಂದು ಅದು ಓಪನ್ ಆಗುವ ಸಾಧ್ಯತೆಯಿದೆ. ‘ಡೆವಿಲ್’ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಅವರು ಜೈಲಿನಲ್ಲಿ ಇರೋದು ಫ್ಯಾನ್ಸ್ ಬೇಸರ ಮೂಡಿಸಿದೆ.

ಮಿಲನ ಪ್ರಕಾಶ್ ಅವರು ‘ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದ್ದು, ಕೊಟ್ಯಾಂತರ ವೀಕ್ಷಣೆ ಕಂಡಿದೆ. ಅಡ್ವಾನ್ಸ್ ಬುಕಿಂಗ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಟಿಕೆಟ್ ದರ 400 ರೂಪಾಯಿ ಇದ್ದರೂ ಬುಕಿಂಗ್ ಮಾಡುತ್ತಿದ್ದಾರೆ. ಡಿಸೆಂಬರ್ 11 ರಂದು ಬೆಳಿಗ್ಗೆ 6.30 ರ ಶೋಗಾಗಿ ಹೌಸ್ ಫುಲ್ ಆಗಿದೆ.

ಇನ್ನು, ಮಲ್ಟಿಪ್ಲೆಕ್ಸ್‌ನಲ್ಲಿ ಇನ್ನೂ ಬುಕಿಂಗ್ ಓಪನ್ ಆಗಿಲ್ಲ. ಇಂದು ಮಧ್ಯಾಹ್ನ ಅಥವಾ ವೇಳೆಗೆ ಮಲ್ಟಿಪ್ಲೆಕ್ಸ್ ಬುಕಿಂಗ್ ಪ್ರಾರಂಭವಾಗಬಹುದು. ಇದಾದ ಬಳಿಕ ಚಿತ್ರದ ಅಡ್ವಾನ್ಸ್ ಬುಕಿಂಗ್ ಗೆ ಮತ್ತಷ್ಟು ಮೆರಗು ಸಿಗಲಿದೆ. ಈ ಸಿನಿಮಾ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಸಲಿದೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: 10 ಗಂಟೆಯಲ್ಲಿ ‘ಡೆವಿಲ್’ ದಾಖಲೆ ಮುರಿದ ‘ಮಾರ್ಕ್’ ಟ್ರೇಲರ್

‘ಡೆವಿಲ್’ ಸಿನಿಮಾದ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದಾರೆ. ಹೀಗಾಗಿ, ಸಿನಿಮಾ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳೇ ವಹಿಸಿಕೊಂಡಿದ್ದಾರೆ. ಅವರು ವಿವಿಧ ಕಡೆಗಳಲ್ಲಿ ಪ್ರಚಾರ ಆರಂಭಿಸಿದ್ದಾರೆ. ಸಿನಿಮಾಗೆ ಪ್ರೀ ರಿಲೀಸ್ ಈವೆಂಟ್ ಮಾಡಬೇಕಿತ್ತು ಎಂಬುದು ಫ್ಯಾನ್ಸ್ ಕೋರಿಕೆ.

ದರ್ಶನ್ ಬಗ್ಗೆ ಹರಿದಾಡಿದೆ ಸುದ್ದಿ

ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಅವರು ಅಲ್ಲಿ ಸಹ ಕೈದಿಗಳ ಜೊತೆ ಕಿರಿಕ್ ಮಾಡಿಕೊಂಡ ಆರೋಪ ಕೇಳಿ ಬಂದಿದೆ. ಅವರು ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರಂತೆ. ಇತ್ತೀಚೆಗೆ ಜೈಲಿನಲ್ಲಿ ದೊಡ್ಡ ಜಗಳ ಕೂಡ ನಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *