‘ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡ್ಯಲ್ಲ’; ಅಭಿಮಾನಿಗಳಿಗೆ ಮೆಸೇಜ್ ಕೊಟ್ಟ ದರ್ಶನ್

‘ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡ್ಯಲ್ಲ’; ಅಭಿಮಾನಿಗಳಿಗೆ ಮೆಸೇಜ್ ಕೊಟ್ಟ ದರ್ಶನ್


ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿ ಇದ್ದಾರೆ. ಜೈಲಿನಲ್ಲಿ ಇರುವಾಗಲೇ ಅವರ ನಟನೆಯ ‘ಡೆವಿಲ್’ ಸಿನಿಮಾ ತೆರೆಗೆ ಬರುತ್ತಿದೆ. ಈ ಟ್ರೇಲರ್ ಇಂದು (ಡಿಸೆಂಬರ್ 5) ರಿಲೀಸ್ ಆಗಿದೆ. ಔಟ್ ಆಯಂಡ್ ಔಟ್ ಮಾಸ್ ಆ್ಯಕ್ಷನ್ ಅಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಟ್ರೇಲರ್ ಅಲ್ಲೆ ಅವರು ಅಭಿಮಾನಿಗಳಿಗೆ ಸಂದೇಶ ಒಂದನ್ನು ನೀಡಿದ್ದಾರೆ.

ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲಿ ಒಮ್ಮೆ ಜೈಲಿಗೆ ಹೋದರು. ಈ ವೇಳೆ ಅವರಿಗೆ ಜಾಮೀನು ಸಿಕ್ಕಿತು. ಈ ವರ್ಷ ಆಗಸ್ಟ್ 14 ರಂದು ಜಾಮೀನು ರದ್ದಾಗಿ ಅವರು ಮತ್ತೆ ಜೈಲಿಗೆ ಹೋಗಬೇಕಾಯಿತು. ಸದ್ಯ ಅವರು ಜೈಲಿನಲ್ಲೇ ಇದ್ದಾರೆ. ಜೈಲಿಗೆ ತೆರಳುವುದಕ್ಕೂ ಮೊದಲು ಸಿನಿಮಾ ಕೆಲಸ ಮುಗಿದಿದೆ. ಅವರು ಜೈಲು ಸೇರಿ ನಾಲ್ಕು ತಿಂಗಳು ಕಳೆಯುತ್ತಾ ಬಂದಿದೆ. ಈಗ ಅವರ ಚಿತ್ರ ತೆರೆಗೆ ಬರುತ್ತಿದೆ.

ಡೆವಿಲ್ ಟ್ರೇಲರ್

ಮಿಲನ ಪ್ರಕಾಶ್ ನಿರ್ದೇಶನದ ‘ಡೆವಿಲ್’ ಡಿಸೆಂಬರ್ 11 ರಂದು ತೆರೆಗೆ ಬರುತ್ತಿದೆ. ಟ್ರೇಲರ್ ಮೂಲಕ ಸಿನಿಮಾದ ಝಲಕ್ ತೋರಿಸಲಾಗಿದೆ. ಸಿನಿಮಾದಲ್ಲಿ ದರ್ಶನ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಟ್ರೇಲರ್ ಅಭಿಮಾನಿಗಳಿಗೆ ಇಷ್ಟವಾಗಿದೆ. ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸುತ್ತಿದ್ದರು, ಬಹುಪಾಲು ಬಾರಿ ವೀಕ್ಷಣೆ ಕಂಡಿದೆ. ಸಿನಿಮಾದ ಟ್ರೇಲರ್ ಕೊನೆಯಲ್ಲಿ ಬರೋ ಡೈಲಾಗ್ ಗಮನ ಸೆಳೆಯುವ ರೀತಿಯಲ್ಲಿದೆ.

ಇದನ್ನೂ ಓದಿ: ಡೆವಿಲ್ ಟ್ರೈಲರ್: ಕ್ಷಣಕ್ಕೊಂದು ಬಣ್ಣ, ಗಳಿಗೆಗೊಂದು ವೇಷ; ಇದು ‘ಡೆವಿಲ್’ ನಿಜರೂಪ

‘ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡ್ಯಲ್ಲ, ನಾನು ಬರ್ತಾ ಇದೀನಿ ಚಿನ್ನ’ ಎಂದ ದರ್ಶನ್. ದರ್ಶನ್ ಸದ್ಯ ಜೈಲಿನಲ್ಲಿದ್ದು, ಅಪರಾಧ ಮುಕ್ತನಾಗಿ ಬರೋ ಪ್ರಯತ್ನದಲ್ಲಿ ಇದ್ದಾರೆ. ಬೇಗ ಹೊರಗೆ ಬರ್ತೀನಿ ಅನ್ನೋದನ್ನು ಸೂಚಿಸಲು ಸಿನಿಮಾದಲ್ಲಿ ಈ ಡೈಲಾಗ್ ಇಡಲಾಗಿದೆಯೇ ಎಂಬ ಪ್ರಶ್ನೆ ಕಾಡಿದೆ.

ಇದನ್ನೂ ಓದಿ: ‘ಡೆವಿಲ್’ ಟ್ರೇಲರ್‌ನಲ್ಲಿ ಗಿಲ್ಲಿ ಪಾತ್ರದ ಝಲಕ್; ಸಖತ್ ಮಾಸ್

ಡೆವಿಲ್ ಚಿತ್ರಕ್ಕೆ ರಚನಾ ರೈ ನಾಯಕಿ. ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ವಿನಯ್ ಗೌಡ, ಗಿಲ್ಲಿ ನಟ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 11ರಂದು ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *