Headlines

ಹೆತ್ತ ತಾಯಿಯನ್ನೇ ಕೊಂದು ಹೃದಯಾಘಾತದ ಕಥೆ ಕಟ್ಟಿದ್ದ ಮಗಳು! ಸಿನಿಮೀಯ ರೀತಿಯಲ್ಲಿ ಬಯಲಾಯ್ತು ರಹಸ್ಯ

ಹೆತ್ತ ತಾಯಿಯನ್ನೇ ಕೊಂದು ಹೃದಯಾಘಾತದ ಕಥೆ ಕಟ್ಟಿದ್ದ ಮಗಳು! ಸಿನಿಮೀಯ ರೀತಿಯಲ್ಲಿ ಬಯಲಾಯ್ತು ರಹಸ್ಯ


ಪುಷ್ಪಲತಾ ಹಾಗೂ ಸುಚಿತ್ರಾಚಿತ್ರದ ಕ್ರೆಡಿಟ್ ಮೂಲ: tv9

ತುಮಕೂರು, ಫೆಬ್ರವರಿ 13: ತುಮಕೂರು (ತುಮಕೂರು) ನಗರದ ಬಂಡೆಪಾಳ್ಯ ಬಳಿಯ ಶ್ರೀನಗರ ನಿವಾಸಿ ಪುಷ್ಪಲತಾ ಸ್ವಂತ ಸೂರು ಕಟ್ಟಿಕೊಂಡು ಮಗಳು ಸುಚಿತ್ರಾ ಹಾಗೂ ಆಳಿಯನ ಜೊತೆ ವಾಸವಿದ್ದರು. ಕಳೆದ ಕೆಲ ದಿನಗಳಿಂದ ಮಂಡಿನೋವು ಎಂದು ಹಾಸಿಗೆ ಹಿಡಿದಿದ್ದರು. ಫೆಬ್ರವರಿ 11 ರಂದು ರಾತ್ರಿ ನಿಗೂಢವಾಗಿ ಸಾವನಪ್ಪಿದ್ದಾರೆ. ಆಕೆಯ ಜೊತೆಗೆ ವಾಸವಿದ್ದ ಮಗಳು ಹೃದಯಾಘಾತ ಎಂದು ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು. ಆದರೆ, ಅದೇ ಸಮಯಕ್ಕೆ, ಸ್ಥಳೀಯರು ಅನುಮಾನದಿಂದ ನೀಡಿದ ಕೆಲವು ಮಾಹಿತಿ ಲಭ್ಯವಾದ ಸ್ಥಳಕ್ಕೆ ಬಂದ ಪೊಲೀಸರು ಸಾವಿನ ಹಿಂದಿನ ಅಸಲಿ ಸತ್ಯ ಬಯಲು ಮಾಡಿದ್ದಾರೆ. ಪುಷ್ಪಲತಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ, ಕೊಲೆಯಾಗಿದ್ದಾರೆ ಎಂದು ಬಯಲುಮಾಡಿದ್ದಾರೆ. ಪುಷ್ಪಲತಾರನ್ನು ಕೊಲೆ ಮಾಡಿದ್ದು, ಮತ್ಯಾರೂ ಅಲ್ಲ. ಆಕೆಯ ಮಗಳೇ!

ತಂದೆಯ ಸಾವಿನ ಬಗ್ಗೆ ಜ್ಯೋತಿಷಿ ಹೇಳಿದ್ದನ್ನು ಕೇಳಿ ತಾಯಿಯ ಕೊಲೆ ಮಾಡಿದಳಾ ಮಗಳು?

ಸುಚಿತ್ರಾ ಹಾಗೂ ಆಕೆಯ ಪತಿ ಸುರೇಶ್ ಸಹ ಪುಷ್ಪಲತಾ ಮನೆಯಲ್ಲಿಯೇ ವಾಸವಿದ್ದರು. ಸುರೇಶ ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದ. ಆತನ ದುಡಿಮೆಯಲ್ಲೇ ಜೀವನ ಸಾಗುತಿತ್ತು. ಒಂದು ವರ್ಷದ ಹಿಂದೆ ಇದ್ದಕಿದ್ದಂತೆ ಆರೋಗ್ಯ ಸಮಸ್ಯೆಗೆ ಒಳಗಾದ ಪುಷ್ಪಲತಾ ಗಂಡ ಬಾಬು ನಾಯಕ್ ಕಾಣಿಸಿಕೊಂಡಿದ್ದರು. ತಂದೆಯ ಮುದ್ದಿನ ಮಗಳು ಸುಚಿತ್ರ, ಅವರನ್ನು ಕಳೆದುಕೊಂಡಿದ್ದ ಜ್ಯೋತಿಷಿಯೊಬ್ಬರ ಭೇಟಿ ಮಾಡಿದ್ದಳು. ಈ ವೇಳೆ ಬಾಬು ಸಾವಿಗೆ ಆತನ ಪತ್ನಿಯೇ ಕಾರಣ. ಪುಷ್ಪಲತಾ ಮಾತಮಂತ್ರ ಮಾಡಿದರು. ನಿನಗೂ ಅವರಿಂದ ಕಂಠಕವಿದೆ ಎಂದು ಜ್ಯೋತಿಷಿ ಹೇಳಿದ್ದರು.

ಈ ಮಾತು ಕೇಳಿದ ಸುಚಿತ್ರಾ, ತನ್ನ ಪ್ರೀತಿಯ ತಂದೆಯನ್ನು ಕೊಂದಿದ್ದಾಳೆಂಬ ಅಲೋಚನೆ ಹಾಗೂ ತಾನೂ ಈಕೆಯಿಂದ ಸಾಯಬಹುದೆಂಬ ಆತಂಕದಲ್ಲಿ ಫೆಬ್ರವರಿ 11ರ ರಾತ್ರಿ ಊಟ ಮಾಡಿ ಮಲಗಿದ್ದ ತಾಯಿಯನ್ನು ದಿಂಬಿನಿಂದ ಉಸಿರುಗಟ್ಟಿ ಸಾಯಿಸಿದ್ದಾಳೆ. ಈ ವೇಳೆ ಹಲ್ಲೆ ಸಹ ಮಾಡಿದ್ದಳು ಎನ್ನಬಹುದು, ಮುಖದಲ್ಲಿ ರಕ್ತಕಲೆಗಳು ಕಾಣಿಸುತ್ತವೆ. ಈ ಎಲ್ಲಾ ವಿಚಾರ ಗೊತ್ತಿದ್ದ ಸುಚಿತ್ರಾ ಗಂಡ ಮೌನವಹಿಸಿದ್ದ. ಪೊಲೀಸರು ತನಿಖೆ ವೇಳೆ ಆತ ಸಹ ಪರೋಕ್ಷವಾಗಿ ಶಾಮೀಲಾದ ಅಂಶಗಳು ಕಂಡು ಬಂದಿವೆ. ಸದ್ಯ ಸುಚಿತ್ರಾ ಹಾಗೂ ಪತಿ ಸುರೇಶ್ ಅವರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದಾರೆ.

ಹಣದ ವಿಚಾರವೇ ಕಾರಣವಾಯ್ತಾ?

ಕೊಲೆ ಮಾಡಿದ ಕ್ಯಾತಸಂದ್ರ ಪೊಲೀಸರ ವಿಚಾರಣೆ ವೇಳೆ ಒಪ್ಪಿಕೊಂಡಿರುವ ಸುಚಿತ್ರಾ ಜ್ಯೋತಿಷಿ ಕಥೆ ಹೇಳಿದ್ದಾಳೆ. ಆದರೆ, ಅದರೊಂದಿಗೆ ಒಂದಷ್ಟು ಹಣದ ವಿಚಾರ ಸಹ ಕಾರಣ ಇರಬಹುದೆಂಬ ಶಂಕೆ ಇದೆ. ಇತ್ತೀಚಿಗೆ ಜಾಗ ಮಾರಿ ಬಂದ ರೂ. ಹಣವನ್ನು ಪುಷ್ಪಲತಾ ತಾನೇ ಇಟ್ಟುಕೊಂಡಿದ್ದಳು. ಅದೇ ವಿಚಾರವಾಗಿ ಜಗಳ ನಡೆದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ.

ತಾನೇ ಕೊಂದು ಕಥೆ ಕಟ್ಟಿದ್ದ ಸುಚಿತ್ರಾ, ತಾವು ವಾಸವಿದ್ದ ಶ್ರೀನಗರದ ಮನೆಯಿಂದ ತುಮಕೂರು ತಾಲೂಕಿನ ಅನುಪನಹಳ್ಳಿಯ ಮನೆಗೆ ಬೆಳ್ಳಂಬೆಳಿಗ್ಗೆಯೇ ಶವ ತಂದಿದ್ದು, ಯಾರಿಗೂ ಗೊತ್ತಾಗದ ರೀತಿ ಎಲ್ಲರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಳು ಎಂಬುದೂ ವಿಚಾರಣೆ ವೇಳೆ ಗೊತ್ತಾಗಿದೆ. ಈ ವಿಚಾರ ತಿಳಿದುಕೊಂಡಿದ್ದಾರೆ.

ಪೊಲೀಸರು ಎಂಟ್ರಿಯಾಗಲು ಕಾರಣವೇನು?

ಇತ್ತೀಚೆಗೆ ಶ್ರೀನಗರದ ಬಳಿ ತಾಯಿ ಹಾಗೂ ಅವರ ನಡುವೆ ಗಲಾಟೆ ನಡೆದಿತ್ತು. ಹೀಗಾಗಿ ಪುಷ್ಪಲತಾ ಸಾವಿ ವಿಚಾರ ತಿಳಿದವರು ಮೊದಲು ಪೊಲೀಸರಿಗೆ ಮಾಹಿತಿ ನೀಡಿ ಬಳಿಕ ಶವ ಹೂಳುವ ಸಂದರ್ಭದಲ್ಲಿ ಗಲಾಟೆ ಮಾಡಲಾಗಿತ್ತು. ಆ ಬಳಿಕ ಬಂದ ವಿಚಾರಣೆ ವೇಳೆ ಕೊಲೆ ಸಂಗತಿ ಬಯಲಾಗಿದೆ. ಆದರೆ, ಜ್ಯೋತಿಷಿ ಹೇಳಿದ ಕಾರಣಕ್ಕೆ ಕೊಲೆಯಾಯ್ತಾ ಅಥವಾ ಹಣಕ್ಕಾಗಿ ಹತ್ಯೆಯಾಗಿದೆ ಎಂಬ ವಿಚಾರ ತನಿಖೆಯಿಂದ ಬಯಲಾಗಬೇಕಿದೆ.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *