Headlines

ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಅಖಾಡಕ್ಕೆ

ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಅಖಾಡಕ್ಕೆ

ಕಾಂಗ್ರೆಸ್‌ಗೆ ತಟ್ಟಿದ ಬಂಡಾಯದ ಬಿಸಿ; ಸಮರ್ಥ್ ಶಾಮನೂರು ನಾಮಪತ್ರಕ್ಕೆ ಜಮೀರ್ ಗೈರು, ಸಾದಿಕ್ ಪೈಲ್ವಾನ್ ಅಖಾಡಕ್ಕೆ

ದಾವಣಗೆರೆ (ಮಾರ್ಚ್ 23): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರಿದ್ದು, ಇಂದು (ಮಾರ್ಚ್ 23) ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು. ಆದರೆ, ಈ ಪ್ರಮುಖ ಕಾರ್ಯಕ್ರಮದಿಂದ ಸಚಿವ ಜಮೀರ್ ಅಹಮದ್ ಖಾನ್ ದೂರ ಉಳಿದಿರುವುದು ಕಾಂಗ್ರೆಸ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಕಾಂಗ್ರೆಸ್ ಬಂಡಾಯದ ಅಭ್ಯರ್ಥಿಯಾಗಿ ಮುಸ್ಲಿಂ ಸಮುದಾಯದ ಸಾದಿಕ್ ಪೈಲ್ವಾನ್ ಸಹ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಮುಸ್ಲಿಂ ಸಮುದಾಯ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದೆ.

ಮುಸ್ಲಿಂ ಸಮುದಾಯದ ಟಿಕೆಟ್‌ಗೆ ಬೇಡಿಕೆ ಇಟ್ಟಿತ್ತು. ಆದರೆ, ಟಿಕೆಟ್ ಕೈತಪ್ಪಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸಾದಿಕ್ ಪೈಲ್ವಾನ್, ಸ್ವಪಕ್ಷದ ವಿರುದ್ಧವೇ ತೊಡೆತಟ್ಟಿದ್ದು, ಯಾವುದೇ ಕಾರಣಕ್ಕೂ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

Source link

Leave a Reply

Your email address will not be published. Required fields are marked *